ಯಾದಗಿರಿ/ ಗುರುಮಠಕಲ್: ಚೆಪೆಟ್ಲಾ ಗ್ರಾಮದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಇಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇಯ ಜಯಂತಿಯನ್ನು ಶಾಲೆಯ ನಿರ್ದೇಶಕರು, ಶಿಕ್ಷಕರು ಮತ್ತು ಮಕ್ಕಳು ಆಚರಿಸಿದರು.
ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅಶೋಕ್ ಯಾದವ್ ಶಿಕ್ಷಕರು ಬಾಬಾ ಸಾಹೇಬರು ಹೇಳಿದಂತೆ ಜ್ಞಾನ ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರ ಮತ್ತು ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸುವುದು ಮುಖ್ಯ ಎಂದು ಹೇಳಿದರು.
ತದ ನಂತರ ಮಾತನಾಡಿದ ಶ್ರೀ ಗೌರಿ ಶಂಕರ ಪಾಟೀಲ ಕಾರ್ಯದರ್ಶಿಗಳು, ಡಾ. ಬಿ.ಆರ್. ಅಂಬೇಡ್ಕರ್ ಜನಿಸಿದ್ದರು. ಬಾಲ್ಯದಲ್ಲಿ ಸಾಕಷ್ಟು ಕಷ್ಟಗಳನ್ನು ಕಂಡಿದ್ದ ಅಂಬೇಡ್ಕರ್ ಅವರು ತಮ್ಮ ಛಲ ಸಾಧನೆಯ ಮೂಲಕ ಭವ್ಯ ಭಾರತದ ಕನಸು ಕಾಣುತ್ತಾ ಬೆಳೆದು ನಮ್ಮ ದೇಶದ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ರೂಪುಗೊಂಡರು ಎಂದು ಹೇಳಿದರು.
ಹಾಗೆ ಮುಂದುವರೆಸುತ್ತಾ ನಮ್ಮ ಯಾದಗಿರಿ ಜಿಲ್ಲೆ ಪಿಯುಸಿ ಫಲಿತಾಂಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ನಗರ ಭಾಗದ ವಿಧ್ಯಾರ್ಥಿಗಳಿಗಿಂತ ಹೆಚ್ಚು ಉತ್ತೀರ್ಣರಾಗಿದ್ದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಮತ್ತು ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಗ್ರಾಮೀಣ ಮೀಸಲಾತಿ ಸೌಲಭ್ಯದ ಲಾಭ ಪಡೆಯಬೇಕು ಪೋಷಕರು ತಮ್ಮ ಮಕ್ಕಳನ್ನು ಗ್ರಾಮೀಣ ಭಾಗದ ಶಾಲೆಗಳಿಗೆ ಕಳುಹಿಸುವ ಮೂಲಕ ಗ್ರಾಮೀಣ ಶಾಲೆಗಳ ಹಾಗೂ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಲು ಮುಂದಾಗಬೇಕು ಎಂದು ಹೇಳಿದರು.
ಜಯಂತಿಯ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಸಾಬಣ್ಣ , ಅಂಬರೀಷ , ಕರ್ಣ ಗೌಡ, ಮಣಿಕಂಟ,ರಾಧಿಕಾ ಶಿಕ್ಷಕಿ ಮತ್ತು ಮಕ್ಕಳು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್
