ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಮಹಾನಾಯಕ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 134 ನೇಯ ಜಯಂತೋತ್ಸವದ ಪ್ರಯುಕ್ತವಾಗಿ BJP ಪಕ್ಷದ ಕಾಯ೯ಲಯದಲ್ಲಿ ಮಾಜಿ ಜನಪ್ರಿಯ ಶಾಸಕರಾದ ಶ್ರೀ ರಮೇಶ ಬೂಸನೂರ್ ಹಾಗೂ ಸಿಂದಗಿ ಮಂಡಲದ ಬಿಜೆಪಿ ಅಧ್ಯಕ್ಷರು ಸಂತೋಷ ಪಾಟೀಲ ಡಂಬಳ ಸಿಂದಗಿ ವಿಧಾನಸಭಾ ಮತಕ್ಷೇತ್ರದ BJP ಪಕ್ಷದ ಮುಖಂಡರಾದ ಸನ್ಮಾನ್ಯ ಶ್ರೀ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಾ) ಅವರು ಪಾಲ್ಗೊಂಡು ಡಾ. ಬಿ. ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾಚ೯ನೆ ಸಲ್ಲಿಸಿ,
ಬಿ.ಜೆ.ಪಿ ಪಕ್ಷದ ಹಿರಿಯ ನಾಯಕರು, ಮಂಡಲದ ಅಧ್ಯಕ್ಷರು, ಪ್ರಧಾನ ಕಾಯ೯ದಶಿ೯ಗಳು, SC ಮೋಚಾ೯ದ ಅಧ್ಯಕ್ಷರು , SC ಮೋಚಾ೯ದ ಜಿಲ್ಲಾ ಅಧ್ಯಕ್ಷರು ಹಾಗೂ ಪಕ್ಷದ ಕಾಯ೯ಕತ೯ರು, ದಲಿತ ಸೇನಯ ಮುಖಂಡರ ಜೊತೆಗೂಡಿ ಪಟ್ಟಣದಲ್ಲಿರುವ ಡಾ, ಬಿ, ಆರ್, ಅಂಬೇಡ್ಕರ ಅವರ ಪ್ರತಿಮೆಗೆ ತೇರಳಿ ಮಾಲಾಪ೯ಣೆ ಮಾಡಿ ಜಯಂತೋತ್ಸವದ ಕಾಯ೯ಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದಭ೯ದಲ್ಲಿ ರಾಜಕೀಯ ಮುಖಂಡರು, ದಲಿತ ಸೇೆನೆಯ ಮುಖಂಡರು, ತಾಲೂಕ ಆಡಳಿತ ಅಧಿಕಾರಿಗಳು, ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಅಂಬೇಡ್ಕರ ಅವರ ಅಭೀಮಾನಿಗಳು ಹಾಗೂ ಅನೇಕ ಯುವಕ ಮಿತ್ರರು ಸೇರಿದಂತೆ ಉಪಸ್ಥಿತರಿದ್ದರು.
ವರದಿ : ಹಣಮಂತ ಚ. ಕಟಬರ್
