
ಬಳ್ಳಾರಿ / ಕಂಪ್ಲಿ : ದೇಶದ ಎಲ್ಲಾ ನಾಗರಿಕರಿಗೆ ಸ್ವಾತಂತ್ರ್ಯ, ಸಮಾನತೆಯಿಂದ ಬದುಕಲು ಸಂವಿಧಾನ ಮೂಲಕ ಸುಭದ್ರವಾದ ಬುನಾದಿ ಹಾಕಿಕೊಟ್ಟ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ಡಾ. ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ ನ ಅಧ್ಯಕ್ಷರಾದ ಅಕ್ಕಿ ಜಿಲಾನ್ ಅಭಿಪ್ರಾಯ ಪಟ್ಟರು.
ಅವರು ಡಾ. ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಡಾ.ಅಂಬೇಡ್ಕರ್ ಅವರ ಜಯಂತೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬುದ್ಧ ಬಂದು ಬೀಜ ನೆಟ್ಟು ಹೋದರು, ಬಸವಣ್ಣ ಬಂದು ಮರವಾಗಿ ಬೆಳೆದು ಬೆಳೆದು ಹೋದರು, ಡಾ.ಅಂಬೇಡ್ಕರ್ ಅವರು ಫಲವಾಗಿ ಹಣ್ಣುಗಳು ಕೊಟ್ಟಿದ್ದಾರೆ. ನಾವೆಲ್ಲಾ ಹಣ್ಣು ಪಡೆದುಕೊಂಡು ಜೀವಿಸಬೇಕಾದರೆ ನಾವೆಲ್ಲರೂ ಅಂಬೇಡ್ಕರ್ ಹೇಳಿದಂತೆ ಶಿಕ್ಷಣವಂತರಾಗಬೇಕು. ಸಂಘ ಸಂಘಟಿತರಾಗಿ ಹೋರಾಡಬೇಕು. ನಮ್ಮ ಹಕ್ಕು ನಮ್ಮ ಸೌಲಭ್ಯ ಪಡೆದುಕೊಳ್ಳಬೇಕು ಅಂಬೇಡ್ಕರ್ ರವರ ಸ್ಪೂರ್ತಿದಾಯಕ ಭಾಷಣ ಅವರ ಪರಂಪರೆ ಮತ್ತು ಕೊಡುಗೆಗಳನ್ನು ನಮ್ಮ ವಿಶ್ವ ಗೌರವಿಸುತ್ತದೆ ಎಂದರು.
ಡಾ. ಬಿ. ಆರ್ . ಅಂಬೇಡ್ಕರ್ ಜಯಂತಿ ಅಂಗವಾಗಿ ವಿವಿಧ ಶಾಲೆಯ ಮಕ್ಕಳಿಗೆ ಏರ್ಪಡಿಸಿದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ಜಿ.ಎಸ್. ಅರ್ಪಿತ, ಬಿ.ಎಸ್. ಭಾವಾರ್ಥ ಕೆತೇಶ್ವರ್, ಅನುಶ್ರೀ, ಪವನ್ ಎಚ್ , ಸಾನಿಯಾ, ಮಾಬುಸಾಬ್, ಬಲ್ಕುಂದಪ್ಪ, ಆಶಾ ಬೇಗಂ, ಕೆ.ಶೇಖರ್, ಶ್ರೀರಕ್ಷಾ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಬಕಾರಿ ಇಲಾಖೆಯ ಹನುಮನ ಗೌಡ, ಟ್ರಸ್ಟ್ ನ್ ಸಂಚಾಲಕ ಬಡಿಗೇರ್ ಜಿಲಾನಸಾಬ್, ಪದಾಧಿಕಾರಿ ರಾಜ, ಎಲ್ಲಪ್ಪ, ಅಕ್ಕಮಹಾದೇವಿ, ಸುಧಾ, ಸೇರಿದಂತೆ ವಿದ್ಯಾರ್ಥಿಗಳು ಪಾಲಕ ಪೋಷಕರು ಹಾಜರಿದ್ದರು.
ವರದಿ : ಜಿಲಾನ ಸಾಬ್ ಬಡಿಗೇರ.
