ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಂದುಹಾಕಿದ ದುಷ್ಕರ್ಮಿಯನ್ನು ಎನ್ ಕೌಂಟರ್ ನಲ್ಲಿ ಕೊಂದು ಹಾಕಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶ್ರೀ ಸರ್ವಜ್ಞ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆ ಅಧ್ಯಕ್ಷರು ಸಂಗಮೇಶ ಕುಂಬಾರ ಶಹಾಪುರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಹುಬ್ಬಳ್ಳಿಯಲ್ಲಿ ಹಾಡುಹಗಲೇ ಬಾಲಕಿಯನ್ನು ಹೊತ್ತುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿ ಕೊನೆಗೆ ಬರ್ಬರವಾಗಿ ಹತ್ಯೆ ಮಾಡಿದ ಪಾಪಿಷ್ಟನನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಮಹಿಳಾ ಪಿ.ಎಸ್.ಐ. ಧೈರ್ಯದಿಂದ ಗಾಳಿಯಲ್ಲಿ ಗುಂಡು ಹಾರಿಸಿ ಪಾಪಿಕೃತ್ಯ ಎಸಗಿದವನನ್ನು ಅಂತ್ಯಗಾಣಿಸುವ ಸನ್ನಿವೇಶ ನಿರ್ಮಾಣವಾಗಿದ್ದು ಉತ್ತಮ ಬೆಳವಣಿಗೆಯೇ ಆಗಿದೆ.
ಇದರಿಂದ ಮೃತ ಬಾಲಕಿಯ ಆತ್ಮಕ್ಕೆ ತಕ್ಷಣ ಶಾಂತಿ ಸಿಕ್ಕಂತಾಗಿದೆ ಮತ್ತು ಇನ್ನು ಮುಂದೆಯಾದರೂ ಯಾವ ಹೆಣ್ಣುಮಕ್ಕಳಿಗೆ ತೊಂದರೆ ಕೊಡುವ ಕೆಲಸಾ ಯಾರೂ ಮಾಡುವುದಿಲ್ಲ, ಇಲ್ಲವಾದಲ್ಲಿ ಆರೋಪಿ ನ್ಯಾಯಾಲಯದಲ್ಲಿ ಬೇಲ್ ಮೇಲೆ ಹೊರಗೆ ಬಂದು ಮತ್ತದೆ ಕೃತ್ಯದಲ್ಲಿ ತೊಡಗುತ್ತಿದ್ದ ಎಂದು ಅವರು ಹೇಳಿದ್ದಾರೆ. ದೇಶ, ವಿವಿಧ ರಾಜ್ಯದಲ್ಲಿ ಅಪರಾಧಿಗಳಿಗೆ ತಪ್ಪುಮಾಡಿದರೆ ಶಿಕ್ಷೆ ಆಗುವುದಿಲ್ಲ ಎಂಬ ವಾತಾವರಣವನ್ನು ಇದುವರೆಗೆ ನಿರ್ಮಾಣ ಮಾಡಲಾಗಿತ್ತು. ಇದರ ಪರಿಣಾಮ ಹಾಡುಹಗಲೇ ರಾಜಾರೋಷವಾಗಿ ಅತ್ಯಾಚಾರ, ಕೊಲೆ, ಚಾಕು ಇರಿತ ಗಳಂತಹ ಕೃತ್ಯಗಳನ್ನು ಮಾಡಿ ಜಾಮೀನಿನ ಮೇಲೆ ಹೊರಗೆ ಬಂದು ಮತ್ತದೆ ಪಾಪಿಕೃತ್ಯಗಳನ್ನು ಎಸಗುವತ್ತ ಆಗುತ್ತಿದ್ದ ಸಮಾಜದ್ರೋಹಿಗಳು ದೇಶದಲ್ಲಿ ರಾಜ್ಯದಲ್ಲಿ ಹೆಚ್ಚಿಕೊಂಡು ಬಿಟ್ಟಿದ್ದರು. ಆದರೆ ಕಾಲ ಬದಲಾಗಿದ್ದು, ತಪ್ಪು ಮಾಡಿದವರಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಇತ್ತಿಚಿನ ಕೆಲಸ ಸರ್ಕಾರಗಳು ತೆಗೆದುಕೊಳ್ಳುತ್ತಿರುವ ನಿಲುವುಗಳು ಮಾದರಿಯಾಗಿವೆ. ದೇಶದಲ್ಲಿ ಸಾರ್ವಜನಿಕ ಆಸ್ತಿಗೆ ಬೆಂಕಿ ಹಚ್ಚುವ, ಪೊಲೀಸರ ಮೇಲೆ ಹಲ್ಲೆ ಮಾಡುವ ಕಲ್ಲು ಎಸೆಯುವ ಪಾಪಕೃತ್ಯಗಳು ಮಾಡುತ್ತಿರುವವರಿಗೆ ಭಯವಿಲ್ಲದಾಗಿತ್ತು. ಆದರೆ ಬುಲ್ಡೋಜರ್ ನಿಂದ ದುಷ್ಟರ ಅಕ್ರಮ ಮನೆಗಳನ್ನು ನಾಶಮಾಡುವ ಇದರಿಂದ ತಪ್ಪು ಮಾಡುವ ಸಮಾಜ ಘಾತುಕರಿಗೆ ಭಯ ಉಂಟಾಗಿ ಅಪರಾಧಗಳು ನಿಯಂತ್ರಣಕ್ಕೆ ಬರುತ್ತವೆ ಈ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡುವ ಮೂಲಕ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರಗಳು ದಿಟ್ಟ ಕ್ರಮ ಕೈಗೊಳ್ಳುವುದು ಅಗತ್ಯ ಇದೆ ಎನ್ನುತ್ತಾ ಪಾಪಿಗೆ ತಕ್ಕ ಶಿಕ್ಷೆ ನೀಡಿದ ಮಹಿಳಾ PSI ಅನ್ನಪೂರ್ಣ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
- ಕರುನಾಡ ಕಂದ
