ನವ ದೆಹಲಿ: ಬೆಂಗಳೂರಿನ ಕೆನರಾ ಬ್ಯಾಂಕ್ ನಲ್ಲಿ ದುಡಿದಿದ್ದ ವಿಕಲಚೇತನ ಸಿಬ್ಬಂದಿಯ ಬಡ್ತಿ ವಿವಾದದ ಕುರಿತು ಕೋರ್ಟು ವಿಚಾರಣೆಯು ನವದೆಹಲಿಯ ಅಂಗವಿಕಲರ ಮುಖ್ಯ ಆಯುಕ್ತರ ನ್ಯಾಯಾಲಯದಲ್ಲಿ ಆನ್ಲೈನ್ನಲ್ಲಿ ಈ ದಿನ ವಿಚಾರಣೆ ನಡೆಸಿದರು.
ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ವಕೀಲ ಹಾಗೂ ಸಂಸ್ಥೆಯ ಅಸೋಸಿಯೇಟ್ ಪ್ರೆಸಿಡೆಂಟ್ ಶ್ರೀ ರಾಜಕುಮಾರ ಮಕ್ಕಾದ, ಚಂಡಿಗರ್ ಇವರ ವಿನಂತಿಮೇರೆಗೆ ಪ್ರಕರಣವನ್ನು ಮುಂದೂಡಲಾಗಿದೆ ಎಂದು ವಿಕಲ ಚೇತನರ ಮುಖ್ಯ ಆಯುಕ್ತರು ಪ್ರಕಟಿಸಿದರು.
ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಭಾರತೀಯ ದಿವ್ಯಾಂಗ ಸಬಲೀಕರಣ ಸಂಘದ (ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ) ಅಧ್ಯಕ್ಷ ಕೊಡಕ್ಕಲ್ ಶಿವಪ್ರಸಾದ್, ವಕೀಲ ಶ್ರೀ ರಾಜ್ಕುಮಾರ್ ಮಕ್ಕಡ್, ನವದೆಹಲಿಯ ಅಂಗವಿಕಲರ ಮುಖ್ಯ ಆಯುಕ್ತ ಶ್ರೀ ಗೋವಿಂದರಾಜ್ ಮತ್ತು ಕೆನರಾ ಬ್ಯಾಂಕಿನ ಪ್ರಧಾನ ಕಚೇರಿಯ HRM ಇಲಾಖೆಯ ಗಝೆಟೆಡ್ ಅಧಿಕಾರಿಗಳು ಮುಂತಾದವರು ಭಾಗವಹಿಸಿದ್ದು ಚಿತ್ರದಲ್ಲಿ ಕಾಣಬಹುದು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.
