
ಬಳ್ಳಾರಿ / ಕಂಪ್ಲಿ : ತಾಲೂಕಿನ ಸಮೀಪದ ಬಳ್ಳಾಪುರ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿಯು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜೆ.ಎನ್. ಗಣೇಶ ರವರ ಪುತ್ರ ಜೆ. ಎನ್ . ಗೋಕುಲ್ ವಿಶ್ವಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ಡಾ. ಬಿ. ಆರ್. ಅಂಬೇಡ್ಕರ್ ನೀಡಿದ್ದಾರೆ’ ಅಂಬೇಡ್ಕರ್ ಎಂದರೆ ಶಕ್ತಿ, ಬೆಳಕು, ಧೈರ್ಯ, ಜ್ಞಾನ, ಶ್ರೇಷ್ಠ, ಸಮಾನತೆ. ಪ್ರತಿಯೊಬ್ಬರೂ ಅವರ ತತ್ವ ಸಿದ್ಧಾಂತ ಪಾಲಿಸಬೇಕು. ಎಲ್ಲರಿಗೂ ಸಮಾನತೆ ಮುಖ್ಯ ಎಂದು ಸಂದೇಶ ಸಾರಿ ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ನಾಯಕ’ ಎಂದರು.
ನಂತರ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ರವರ ‘ಜೀವನ ಚರಿತ್ರೆ’ ಪುಸ್ತಕಗಳನ್ನು ವಿತರಿಸಲಾಯಿತು. ಗ್ರಾಮದ ಸರ್ವರಿಗೂ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮುಖಂಡರಾದ ಯಂಕಪ್ಪ , ಹುಲುಗಪ್ಪ , ಕರಿಯಪ್ಪ , ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮೌನೇಶ , ಲಿಂಗಪ್ಪ ಹಾಗೂ ಕಾರ್ಯಕ್ರಮದ ರೂವಾರಿಗಳಾದ ಭೀಮೇಶ, ವೀರೇಶ, ಅಂಬರೀಶ, ಅಂಜನಿ ಹಾಗೂ ಜಡೇಶ ಹಾಗೂ ಗ್ರಾಮದ ಎಲ್ಲಾ ಹಿರಿಯರು, ಯುವಕರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
