ಬೆಂಗಳೂರು: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾದ ಶ್ವಾನವನ್ನು ಪ್ರದರ್ಶಿಸುತ್ತಾ… ಈ ಶ್ವಾನಕ್ಕೆ 50 ಕೋಟಿ ರೂ. ಕೊಟ್ಟು ತಗೊಂಡಿದ್ದೀನಿ ಎಂದು ಪೋಸು ಕೊಡುತ್ತಿದ್ದ ಬೆಂಗಳೂರಿನ ಶ್ವಾನಪ್ರೇಮಿ ಸತೀಶ್ ಗೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ (ಇ.ಡಿ.) ಶಾಕ್ ನೀಡಿದೆ.
ಶ್ವಾನಪ್ರೇಮಿ ಸತೀಶ್ ಅವರ ಮನೆಗೆ ತೆರಳಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಲವಾರು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ನಾಯಿಯ ಬೆಲೆ 50 ಕೋಟಿ ರೂ. ಎಂದು ಹೇಳಿರುವುದು ಬರೀ ಬೊಗಳೆ ಎಂಬುದು ತಿಳಿದುಬಂದಿದೆ. ಆದರೂ, ಅನುಮಾನಗಳ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತೀಶ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.
ಅಸಲಿ ವಿಚಾರ ಇನ್ನೂ ಮಜಾ!
ತನಿಖೆಯ ವೇಳೆ ಮತ್ತೊಂದು ವಿಚಾರವೂ ಬಯಲಿಗೆ ಬಂದಿದೆ. ಈತ ಶ್ವಾನಪ್ರಿಯನಷ್ಟೇ. ಆದರೆ, ಇಂಥ ಯಾವುದೇ ಅಪರೂಪದ ತಳಿಗಳನ್ನು ಸಾಕಿಲ್ಲ. ಈತ ಯಾರಾದರೂ ಇಂಥ ಅಪರೂಪದ ಶ್ವಾನಗಳನ್ನು ಸಾಕುವವರಿಂದ ನಾಯಿಗಳನ್ನು ಬಾಡಿಗೆಗೆ ಪಡೆದು ತಂದು ಅವುಗಳ ಜೊತೆಗೆ ರೀಲ್ಸ್ ಮಾಡಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದ. ಅವು ವೈರಲ್ ಆಗುತ್ತಿದ್ದವು. ಇದನ್ನೇ ಹವ್ಯಾಸವನ್ನಾಗಿಸಿಕೊಂಡಿದ್ದ ಸತೀಶ್ ಗೆ ನಾಯಿಗಳನ್ನು ಬಾಡಿಗೆಗೆ ತಂದು ಶೂಟ್ ಮಾಡುವುದು ಶೋಕಿಯೂ ಆಗಿ ಬೆಳೆದಿತ್ತು ಎಂಬ ವಿಚಾರ ತನಿಖೆಯ ವೇಳೆ ಬಯಲಾಗಿದೆ.
ಈಗ ಇ.ಡಿ. ಕೈಯಲ್ಲಿ ಸಿಗಾಕಿಕೊಂಡಿದ್ದಾನೆ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಏನೋ ಮಾಡಲು ಹೋಗಿ ಏನೋ ಆಯಿತಲ್ಲ ಎನ್ನುವ ಹಾಗಿದೆ… ಈತನ ಪಾಡು!
ವರದಿ : ಜಿಲಾನಸಾಬ್ ಬಡಿಗೇರ್.
