ವೀರಶೈವ ಲಿಂಗಾಯತ ಸಮಾಜದ ರುದ್ರ ಭೂಮಿಗೆ ಮಂಜೂರಾಗಿರುವ ಎರಡು ಎಕರೆ ಜಾಗವನ್ನು ಶೀಘ್ರವೇ ಸುಪರ್ದಿಗೆ ಕೊಡಿಸುವಂತೆ ಶಾಸಕ ಶ್ರೀ ವತ್ಸ ಅವರಿಗೆ ಯುವ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಸಲ್ಲಿಸಿದರು.
ಮೈಸೂರು : ವೀರಶೈವ ಲಿಂಗಾಯತ ಸಮಾಜದ ರುದ್ರ ಭೂಮಿಗೆ ಮಂಜೂರಾಗಿರುವ ಎರಡು ಎಕರೆ ಜಾಗವನ್ನು ಶೀಘ್ರವೇ ಸುಪರ್ದಿಗೆ ಕೊಡಿಸುವಂತೆ ಶಾಸಕ ಶ್ರೀ ವತ್ಸ ಅವರಿಗೆ ಯುವ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಸಲ್ಲಿಸಿದರು.
ಮೈಸೂರಿನ ವಿದ್ಯಾರಣ್ಯ ಪುರಂ ನಲ್ಲಿರುವ ವೀರಶೈವ ಲಿಂಗಾಯತ ಸಮಾಜದ ರುದ್ರ ಭೂಮಿಗೆ ಈಗಾಗಲೇ ಮಂಜೂರಾಗಿರುವ ಎರಡು ಎಕರೆ ಜಾಗವನ್ನು ಶೀಘ್ರವೇ ಸುಪರ್ದಿಗೆ ಕೊಡಿಸುವಂತೆ ಮತ್ತು ರುದ್ರ ಭೂಮಿಗೆ ಬಿಡುಗಡೆ ಆಗಿರುವ ಅನುದಾನ ದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಇಂದು ಯುವ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ ಅವರು ಕೆ ಆರ್ ಕ್ಷೇತ್ರದ ಶಾಸಕರಾದ ಶ್ರೀ ವತ್ಸ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಶಾಸಕರು ಮುಂದಿನ ದಿನಗಳಲ್ಲಿ ರುದ್ರ ಭೂಮಿಯ ಅಭಿವೃದ್ಧಿ ಮತ್ತು ಮಂಜೂರಾಗಿರುವ ಎರಡು ಎಕರೆ ಜಾಗವನ್ನು ಹಸ್ತಾಂತರಿಸುವ ಭರವಸೆ ನೀಡಿದರು ಎಂದು ತೇಜಸ್ವಿ ಹೇಳಿದ್ದಾರೆ.
- ಕರುನಾಡ ಕಂದ
