ಯುದ್ಧಕಾಂಡ
ನಮ್ಮ ಹೊಸಪೇಟೆಯ ಹುಡುಗ ನಟ ಅಜಯ್ ರಾವ್ ಅವರು ನಟಿಸಿ ನಿರ್ಮಾಣ ಮಾಡಿರುವ ಈ ಚಿತ್ರವು ನಿರೀಕ್ಷೆಯನ್ನು ಹುಟ್ಟು ಹಾಕಿದ್ದು ಈ ವಾರ ತೆರೆಗೆ ಬರಲಿದೆ.
ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಮತ್ತು ಮಕ್ಕಳ ದುರ್ಬಳಕೆ ಕುರಿತಾದ ಕಥೆಯನ್ನು ಹೊಂದಿರುವ ಚಿತ್ರಕ್ಕೆ ಪವನ್ ಭಟ್ ನಿರ್ದೇಶನವಿದೆ.
ಚಿತ್ರದಲ್ಲಿ ಅನ್ಯಾಯಕೊಳ್ಳಗಾದ ಹೆಣ್ಣೊಬ್ಬಳು ನ್ಯಾಯಕ್ಕಾಗಿ ಹೋರಾಡುತ್ತಾಳೆ. ಆಕೆ ನಮ್ಮ ಸಮಾಜದ ಎಲ್ಲಾ ಹೆಣ್ಣು ಮಕ್ಕಳ ಪ್ರತಿನಿಧಿ. ಇದು ಯಾವುದೇ ಓರ್ವ ಹೆಣ್ಣು ಮಗಳಿಗೆ ಸೀಮಿತವಾದ ಕಥೆಯಲ್ಲ’ ಎಂದರು ಅಜಯ್ ರಾವ್.
‘ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ ಎಂಬ ಸುದ್ದಿ ಹರಿದಾಡುತ್ತಿದೆ, ಅದು ನಿಜ. ಆದರೆ ನನ್ನ ಖುಷಿಗಾಗಿ ಸಾಲ ಮಾಡಿಕೊಂಡಿರುವೆ. ಇದು ನನ್ನ ನಿರ್ಮಾಣದ ಎರಡನೇ ಸಿನಿಮಾ. ಇದಕ್ಕಾಗಿ ಸಾಲವಾಗಿರುವುದಕ್ಕೆ ನನಗೆ ಬೇಸರವಿಲ್ಲ. ₹200 ಇಟ್ಟುಕೊಂಡು ಬೆಂಗಳೂರಿಗೆ ಬಂದವನು. ಇವತ್ತು ನಟ, ನಿರ್ಮಾಪಕ ಎಲ್ಲವೂ ಆಗಿರುವೆ. ದುಡಿದು ಸಾಲ ತೀರಿಸುವ ಶಕ್ತಿಯಿದೆ. ಇನ್ನೂ ಎತ್ತರಕ್ಕೆ ಬೆಳೆಯುವ ಕನಸಿದೆ’ ಎಂದು ಅವರು ಸಾಲದ ಕುರಿತು ಸಮಜಾಯಿಷಿ ನೀಡಿದರು.
ಕೋರ
ಒರಟ ಖ್ಯಾತಿಯ ಶ್ರೀ ಅವರು ನಿರ್ದೇಶನ ಮಾಡಿರುವ ಕೋರ
ಚಿತ್ರವು ಈ ವಾರ ತೆರೆಗೆ ಬರಲಿದೆ.
ವೀರಚಂದ್ರಹಾಸ
ರವಿಬಸ್ರೂರು ಅವರ ಮಹತ್ವಾಕಾಂಕ್ಷೆಯ ವೀರಚಂದ್ರಹಾಸ ಚಿತ್ರವು
ಈ ವಾರ ತೆರೆಗೆ ಬರಲಿದೆ. ಸಂಪೂರ್ಣ ಯಕ್ಷಗಾನವನ್ನು ದೊಡ್ಡ ಪರದೆಯ
ಮೇಲೆ ತಂದಿರುವ ಈ ವಿಶೇಷವಾದ ಚಿತ್ರ ಈ ವಾರ ತೆರೆಗೆ ಬರಲಿದೆ.
ಈ ಚಿತ್ರಗಳ ಜೊತೆಗೆ ಪ್ರೀತಿ ಯಹುಚ್ಚಾ, ರಿಕ್ಷಾಚಾಲಕ ಹಾಗೂ ಖದೀಮ
ಎಂಬ ಹೊಸಬರ ಚಿತ್ರಗಳು ತೆರೆಗೆ ಬರುತ್ತಿವೆ.
ವರದಿ : ಜಿಲಾನಸಾಬ್ ಬಡಿಗೇರ್.
