
ಬಳ್ಳಾರಿ / ಕಂಪ್ಲಿ : ನಗರದ ಶಿವದ್ವೈತ ಶ್ರೀ ಹೇರೂರು ವಿರುಪಣ್ಣ ತಾತನ ರಥೋತ್ಸವ ಇಂದು 18 ನೇ ಏಪ್ರಿಲ್ ಶುಕ್ರವಾರ ಸಾಯಂಕಾಲ 5:00 ಗಂಟೆಗೆ ಜರಗಲಿದೆ.
ಶ್ರೀ ವಿರುಪಣ್ಣ ತಾತನವರು ಗಂಗಾವತಿ ತಾಲೂಕಿನ ಹೇರೂರು ಗ್ರಾಮದಲ್ಲಿ ಕ್ರಿ. ಶ. ರಲ್ಲಿ ಆಧ್ಯಾತ್ಮ ಸಾಧನೆಗಾಗಿ ನಾನಾ ಕಡೆ ಸಂಚರಿಸಿ ಬಳಿಕ ಕಂಪ್ಲಿಯಲ್ಲಿ ನೆಲೆಸಿ ಅನೇಕ ಜನರಿಗೆ ಅವರ ಭಕ್ತಿಗೆ ಅನುಸಾರವಾಗಿ ಆಶೀರ್ವಾದ ಮಾಡಿದ್ದಾರೆ.
ತಾತನವರ ಜಾತ್ರೆಗೆ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಅನೇಕ ಗ್ರಾಮಗಳ ಭಕ್ತರು ಆಗಮಿಸಿ ತಾತನ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.
ಕರಿಸಿದ್ದೇಶ್ವರ ಸಂಸ್ಥಾನ ಮಠ
ಬುಕ್ಕಸಾಗರದ ಶ್ರೀ ಷ|| ಬ್ರ || ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಹೆಬ್ಬಾಳದ ಬ್ರಹನ್ಮಮಠದ ಶ್ರೀ ಷ||ಬ್ರ||ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮ|| ನಿ|| ಪ್ರ|| ಪ್ರಭುಸ್ವಾಮಿಗಳವರು ಕಲ್ಮಠ ಕಂಪ್ಲಿ, ಹರ – ಗುರು- ಚರಮೂರ್ತಿಗಳು ಹಾಗೂ ಸರ್ವ ಸದಸ್ಯರು ಹಾಗೂ ಸಮಸ್ತ ಬಾಂಧವರ ಶ್ರೀ ವಿರೂಪಣ್ಣ ತಾತನ ಮಠದ ಅಧ್ಯಕ್ಷರಾದ ಡಿ.ವಿ. ರಮೇಶ, ದಾನಿಗಳು ಮತ್ತು ಭಕ್ತಾದಿಗಳು ಇವರ ಸಮ್ಮುಖದಲ್ಲಿ ಸಕಲ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ವಿರೂಪಣ್ಣ ತಾತನವರ ಸದ್ಭಕ್ತ ಸೇವಾ ಸಂಘ ತಿಳಿಸಿದೆ.
ವರದಿ : ಜಿಲಾನಸಾಬ್ ಬಡಿಗೇರ್.
