ಶಿವಮೊಗ್ಗ: ನಾನು ಕೆನರಾ ಬ್ಯಾಂಕಿನ ಶಿವಮೊಗ್ಗ ಮುಖ್ಯ ಶಾಖೆಯಲ್ಲಿ ದುಡಿಯುತ್ತಿದ್ದಾಗ ಅವರು ನನ್ನ ಹತ್ತಿರ ಬಂದಿದ್ದರು. ಅವರ ತಂದೆ ಶ್ರೀ ನರಸಿಂಹಮೂರ್ತಿ ಅಯ್ಯಂಗಾರರು ವಿಶ್ವ ಹಿಂದು ಪರಿಷತ್ ದಕ್ಷಿಣ ಪ್ರಾಂತ ಪ್ರಮುಖರಾಗಿದ್ದರು. ಅವರ ಪ್ರೇರಣೆಯಿಂದ ಶಿವಮೊಗ್ಗದ ಪ್ರಸಿದ್ಧ ಶ್ರೀ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗಾಗಿ 1995ರಲ್ಲಿ ರೂ.10000/- ದೇಣಿಗೆ ನೀಡಿ ಆ ನೆನಪಿಗಾಗಿ ನನ್ನ ಹೆಸರಿನಲ್ಲಿ ದಶಾವತಾರಗಳಲ್ಲಿ ಒಂದಾದ ಶ್ರೀ ಕೃಷ್ಣ ದೇವರ ವಿಗ್ರಹವನ್ನು ದೇವಲದ ಪ್ರಾಂಗಣದಲ್ಲಿ ಅಳವಡಿಸಲಾಗಿದ್ದು , ನನ್ನ ಹೆಸರಿನಲ್ಲಿ ಶಾಶ್ವತ ಪೂಜೆ, ಅನ್ನದಾನಗಳನ್ನು ಶ್ರೀ ದೇವಳದಲ್ಲಿ ವ್ಯವಸ್ಥೆ ನೆರವೇರಿಸುವಲ್ಲಿ ಅವರು ಕಾರಣ ಭೂತರಾಗಿದ್ದರು… ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಎಂದ ಆ ಬಾಲ ಹನುಮನಲ್ಲಿ ಪ್ರಾರ್ಥನೆ…
- ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
