ಬಳ್ಳಾರಿ / ಕಂಪ್ಲಿ : ಹಿಂಗಾರು ಜೋಳ ಖರೀದಿಯ ಗರೀಷ್ಟ ಮಿತಿಯನ್ನು ಹೆಚ್ಚಿಸುವಂತೆ ಮಾನ್ಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ ಇವರು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಕೆ. ಹೆಚ್. ಮುನಿಯಪ್ಪ ಇವರಿಗೆ ಮನವಿ ಮಾಡಿದರು.
ನಂತರ ಶಾಸಕ ಗಣೇಶ್ ಇವರು ಪತ್ರಕರ್ತರೊಂದಿಗೆ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಜೋಳ ಖರೀದಿ ನೋಂದಣಿ ಮಾಡಲು ಏ.13 ರಂದು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಸರ್ಕಾರದ ಪತ್ರದಂತೆ ಬಳ್ಳಾರಿ ಜಿಲ್ಲೆಗೆ 4000 ಎಂ.ಟಿ. ಮೀತಿಯನ್ನು ನಿಗಧಿಪಡೆಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಹಿಂಗಾರು ಬೆಳೆಯ ನೊಂದಣಿಯಲ್ಲಿ ಈವರೆಗೆ 457 ರೈತರಿಂದ 4266 ಎಂ.ಟಿ. ಪ್ರಮಾಣದ ಜೋಳ ನೋಂದಣಿಯಾಗಿರುತ್ತದೆ. ಪ್ರಯುಕ್ತ ಜಿಲ್ಲೆಯಲ್ಲಿ ಹಿಂಗಾರು ಜೋಳ ಬೆಳೆದಿರುವ ವಿಸ್ತೀರ್ಣ 24660.39 ಎಕ್ಟರ್‌ನಲ್ಲಿ 36990.585 ಎಂ.ಟಿ ಉತ್ಪಾದನೆಯಾಗಿದ್ದು, ರೈತರಲ್ಲಿ ಸಂಖ್ಯೆ ಹೆಚ್ಚಿದ್ದು, ರೈತ ಜೋಳ ಖರೀದಿ ಮಾಡಲು ಬೇಡಿಕೆಯನ್ನು ನೀಡಿರುತ್ತಾರೆ. ಹಾಗೂ ಖರೀದಿ ಕೇಂದ್ರದ ಮುಂದೆ ಪ್ರತಿಭಟನೆಯನ್ನು ನಡೆಸುತ್ತಿದ್ದು, ಹಾಗಾಗಿ, ಜಿಲ್ಲೆಗೆ ನಿಗಧಿಪಡೆಸಲಾದ ಖರೀದಿ ಪ್ರಮಾಣದ ಆದೇಶವನ್ನು ಹಿಂಪಡೆದು ಕಳೆದ ವರ್ಷದ ಆದೇಶದಂತೆ ಯಾವುದೇ ಗರಿಷ್ಠ ಮಿತಿ ಇಲ್ಲದೆ ರೈತರಿಂದ ಜೋಳವನ್ನು ಖರೀದಿಸಬೇಕೆಂದರು.
ವರದಿ : ಜಿಲಾನಸಾಬ್ ಬಡಿಗೇರ್
