ಬಳ್ಳಾರಿ / ಕಂಪ್ಲಿ : ಪಟ್ಟಣದ ಪ್ರಥಮ ದರ್ಜೆ ಕಾಲೇಜು (ಡಿಗ್ರಿ ಕಾಲೇಜ್) ಮೈದಾನದಲ್ಲಿ ಕಂಪ್ಲಿ ರಂಜಾನ್ ಕ್ರಿಕೆಟ್ ಕಪ್ ಪಂದ್ಯಾವಳಿಯ ಫೈನಲ್ ಪಂದ್ಯ ಜರುಗಿತು.
ಕಂಪ್ಲಿ ರಂಜಾನ್ ಕಪ್ ಕ್ರಿಕೆಟ್ ಪಂದ್ಯಾವಳಿಗೆ ತೆರೆಬಿದ್ದಿದೆ. ಒಟ್ಟು ಆರು ತಂಡಗಳು ಭಾಗವಹಿಸಿದ್ದು ಇದರಲ್ಲಿ ಫೈನಲ್ ಗೆ ವಿಐಪಿ ತಂಡ ಹಾಗೂ ಗ್ರೀನ್ ಲಿವ್ಸ್ ತಂಡದ ಮಧ್ಯೆ ಹಣಹಣಿ ನಡೆಯಿತು. ಫೈನಲ್ ಪಂದ್ಯದಲ್ಲಿ VIP ತಂಡವು ಚಾಂಪಿಯನ್ಸ್ ಪಟ್ಟ ಅಲಂಕರಿಸಿದರೆ, ಗ್ರೀನ್ ಲೀವ್ಸ ತಂಡವು ರನ್ನರ್ ಅಫ್ ಪಡೆಯಿತು. ಮುಸ್ಲಿಂ ಧರ್ಮ ಗುರುಗಳಾದ ಸೈಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರಫ್ ಆಜಂ ಪಾಷಾ ಖಾದ್ರಿ ಸಾಹೇಬ್ ಅವರು ಮಾತನಾಡಿ ಕ್ರೀಡೆಯ ಯುವಕರ ಶಕ್ತಿಯಾಗಿದೆ, ವ್ಯಕ್ತಿತ್ವಗಳನ್ನು ರೂಪಿಸುವ, ತಂಡದ ಕೆಲಸವನ್ನು ಪ್ರೋತ್ಸಾಹಿಸುವ ಮತ್ತು ಗಮನ ಮತ್ತು ದೃಢಸಂಕಲ್ಪವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದರು.
ಕ್ರಿಕೆಟ್ ಆಟದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ ಒಂದು ತಂಡವಾಗಿ ಆಡಿದಾಗ ಮಾತ್ರ ಗೆಲ್ಲಲು ಸಾಧ್ಯ ಎಲ್ಲರೂ ಒಗ್ಗಟ್ಟಿನಿಂದ ಅಣ್ಣ-ತಮ್ಮಂದಿರಂತೆ ಕೂಡಿ ಬಾಳಬೇಕು ಎಂದು ಕಂಪ್ಲಿ ಅಂಜುಮನ್ ಸಂಸ್ಥೆಯ ನಿರ್ದೇಶಕರಾದ ಮೆಹಬೂಬ್ ಸಾಬ್ ತಿಳಿಸಿದ್ದರು.
ನಂತರ ಮಾತನಾಡಿದ ಹಾಜಿ ಎಸ್.ಕೆ. ಇಂತೀಯಾಜ್ ಕ್ರೀಡೆಗಳ ಸ್ಪರ್ಧಾತ್ಮಕ ಸ್ವರೂಪವು ಕ್ರೀಡಾಳುಗಳಲ್ಲಿ ಆರೋಗ್ಯಕರ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ.
ಕ್ರಿಕೆಟ್ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದೆ. ಕ್ರಿಕೆಟ್ ಕೇವಲ ಕ್ರೀಡೆಯಲ್ಲ, ಒಂದು ಜೀವನ ವಿಧಾನ. ಇದು ಪ್ರತಿಯೊಬ್ಬರ ಭಾವನೆಗಳು ಮತ್ತು ಆಶಯಗಳನ್ನು ಸೆರೆಹಿಡಿಯುವ ಸಾಂಸ್ಕೃತಿಕ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. ಕ್ರಿಕೆಟ್ ಆಡುವ ಸರಳತೆಯಿಂದಾಗಿ ವಿವಿಧ ಅಕ್ಕಪಕ್ಕದ ಗ್ರಾಮಗಳ ಯುವಕರು ಒಟ್ಟಾಗಿ ಕ್ರಿಕೆಟ್ ಆಡಬಹುದು, ಪವಿತ್ರ ರಂಜಾನ್ ಹಬ್ಬ ಆದ ನಂತರ ರಜಾದಿನಗಳಲ್ಲಿ ರಂಜಾನ್ ಕಪ್ ಹಮ್ಮಿಕೊಂಡು ಸ್ನೇಹಿತರೆಲ್ಲರೂ ಈ ಕ್ರೀಡಾಕೂಟವನ್ನು ಆಯೋಜನೆ ಮಾಡಿದ್ದು ಯುವಕರು ಮೊಬೈಲ್ ಬಿಟ್ಟು ಕ್ರೀಡೆಗಳಿಗೆ ಗಮನ ಕೊಡಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಪಂದ್ಯದ ಅಂತಿಮ ಪಂದ್ಯದ ಬೆಸ್ಟ್ ಆಟಗಾರ : ಫಕ್ರು
ಅತ್ಯುತ್ತಮ ಬ್ಯಾಟ್ಸ್‌ಮನ್ : ನೂರ್ ಬಾಗ್ಲಿ , ಟಿಪ್ಪು ಟೈಗರ್ಸ್ ತಂಡ.
ಅತ್ಯುತ್ತಮ ಬೌಲರ್ : ಅಜ್ಜುರುದ್ದೀನ, ವಿಐಪಿ ತಂಡ.
ಎಂವಿಪಿ : ನೂರ್ ಬಾಗ್ಲಿ, ಟಿಪ್ಪು ಟೈಗರ್ಸ್ ತಂಡ.
ಟೂರ್ನಮೆಂಟ್‌ನ ಉದಯೋನ್ಮುಖ ಆಟಗಾರ : ಖಾದರ್, ಗ್ರೀನ್ ಲೀವ್ಸ್ ತಂಡ ಪ್ರಶಸ್ತಿಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಸೈಯದ್ ಅಬ್ಬು ತುರ್ ಫ್ ಖಾದ್ರಿ ಉರಫ್ ಲೈಕ್ ಸಾಹೇಬ್, ಪುರಸಭೆ ಸದಸ್ಯ ಲಡ್ಡು ಹೊನ್ನರವಲಿ, ರೋಷನ್, ಇಸ್ಮಾಯಿಲ್, ನೂರ್ ಮುಕ್ತಿಯರ್, ಮೌಲಾಅಲಿ, ಗೌಸ್, ಕೆ. ಎಂ. ಅಜ್ಜುರುದ್ದೀನ್ ಸೇರಿದಂತೆ ಕ್ರೀಡಾಭಿಮಾನಿಗಳು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
