ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು
ಕೆಚ್ಚೆದೆಯ ಮೌಲ್ಯದ ಮುತ್ತು ರತ್ನಗಳು
ಭಾರತ ಮಾತೆಯ ವೀರಾದಿ ಕಲಿಗಳು
ರಾಷ್ಟ್ರ ನಿರ್ಮಾಣದ ಅದ್ಭುತ ಶಕ್ತಿಗಳು.
ಯುವ ಶಕ್ತಿಯೇ ಈ ನಾಡಿನ ಪ್ರಗತಿ
ಉಳಿಸಿ ಬೆಳೆಸಿ ತಾಯ್ನಾಡಿನ ಸಂಸ್ಕೃತಿ
ಯುವ ಜನರಿಂದಲೇ ಸರ್ವರ ಉನ್ನತಿ
ತರುವರು ಭಾರತದ ಮಾತೆಗೆ ಕೀರುತಿ.
ಇರಬೇಕು ಸೂರ್ಯ ದೇವ ತೇಜಸ್ಸು
ಕಾಣಬೇಕು ದೇಶಭಕ್ತಿಯ ಹುಮ್ಮಸ್ಸು
ಛಲ ತೊಟ್ಟರೆ ದೇಶಾಬಿವೃದ್ಧಿ ಮನಸು
ಆಗಲೇ ರಾಮರಾಜ್ಯದ ಕನಸು ನನಸು
ದೇಶಕ್ಕೆ ಬೇಕಿದೆ ಈಗ ಬಲಿಷ್ಠ ನಾಯಕ
ಮಾಡು ಇಲ್ಲವೇ ಮಡಿ ಸೂತ್ರದ ಸಾಧಕ
ಕೌಶಲ್ಯವ ವೃದಿಸುವ ಶ್ರೇಷ್ಠದ ಉತ್ತೇಜಕ
ಆಗಲೇ ನಾಡಿನಲ್ಲಿ ಹುಟ್ಟಿದ್ದಕ್ಕೂ ಸಾರ್ಥಕ.

- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
