
ಬಾಗಲಕೋಟೆ/ ಇಳಕಲ್ – ಹುನಗುಂದ ಅವಳಿ ತಾಲೂಕುಗಳ ರೆಡ್ಡಿ ಸಮಾಜದ ಇಲಕಲ್ಲ ಯುವ ರೆಡ್ಡಿ ಮಿತ್ರ ಬಳಗ ಇಲ್ಲಿನ ಎಪಿಎಂಸಿ ಅವಣದ ಸಮೀಪ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಕರೆದಿದ್ದ ಸಭೆಗೆ ಅವಳಿ ತಾಲೂಕುಗಳ ರೆಡ್ಡಿ ಸಮಾಜದ ಗುರು – ಹಿರಿಯರು ಹಾಗೂ ಅನೇಕ ಯುವಕ ಮಿತ್ರರು ಆಗಮಿಸಿ ಜಯಂತಿ ಆಗು ಹೋಗುಗಳು ಮತ್ತು ಜಯಂತಿ ಯಾವ ರೀತಿ ಆಚರಣೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಸಭೆ ಸೇರಿ ಯಶಸ್ವಿಗೊಳಿಸಿದರು.
ಸಭೆಗೆ ಆಗಮಿಸಿದ್ದ ಹಿರಿಯರಾದ ಪರೂತಗೌಡ ಪಾಟೀಲ್ ಮಾತನಾಡಿ ಹೇಮರೆಡ್ಡಿ ಮಲ್ಲಮ್ಮನ ಜಯಂತಿಯನ್ನು ಪ್ರತಿ ವರ್ಷ ತಾಲೂಕಿನಾತ್ಯಂತ ಆಚರಣೆ ಮಾಡಬೇಕು ಎಂದು ಹೇಳಿದರು ಹಿರಿಯರಾದ ವಿರುಪಾಕ್ಷಪ್ಪ ಮುರಾಳ ಮಾತನಾಡಿ ಇಲಕಲ್ಲನ ಯುವ ರೆಡ್ಡಿ ಮಿತ್ರರು ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಸಲವಾಗಿ ಸಭೆ ಕರೆದು ಮಲ್ಲಮ್ಮನ ಜಯಂತಿ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು ಎಂದು ಹೇಳಿ ಜಯಂತಿ ಮಾಡುವ ವಿಧಾನದ ಬಗ್ಗೆ ಸಲಹೆ ಮಾರ್ಗದರ್ಶನಗಳನ್ನು ನೀಡಿದರು.
ಹಿರಿಯರಾದ ಮಹಾಂತೇಶ ಜೆ ಗೌಡರ ಮಾತನಾಡಿ ಯುವಕರು ಜಯಂತಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಮಲ್ಲಮ್ಮನ ಜಯಂತಿ ಅದ್ದೂರಿಯಾಗಿ ಆಚರಣೆ ಮಾಡಿ ನಮ್ಮ ಸಹಕಾರ ನಿಮಗೆ ಯಾವಾಗಲೂ ಇರುತ್ತದೆ ಎಂದು ಹೇಳಿದರು.
ಇನ್ನೋರ್ವ ಹಿರಿಯರಾದ ಚಂದ್ರಶೇಖರ ಕಾಮಾ ಮಾತನಾಡಿ ರಡ್ಡಿ ಸಮಾಜ ಮಲ್ಲಮ್ಮನ ಆಶೀರ್ವಾದದಿಂದ ಸದಾಕಾಲವೂ ಸುಭಿಕ್ಷವಾಗಿದೆ ಹಾಗಾಗಿ ಮಲ್ಲಮ್ಮನ ಜಯಂತಿ ಆಚರಣೆ ಮಾಡಲು ನಾವು ಯಾವತ್ತೂ ಹಿಂಜರಿಯಬಾರದು ಎಂದು ಹೇಳಿದರು.
ಓಂಕಾರಗೌಡ ಪಾಟೀಲ ಮಾತನಾಡಿ ಹುನಗುಂದ ಇಲಕಲ್ ಅವಳಿ ತಾಲೂಕುಗಳ ರೆಡ್ಡಿ ಸಮಾಜದ ಹಿರಿಯರು ಒಂದೆಡೆ ಸೇರಿ ಜಯಂತಿ ವಿಭಿನ್ನವಾಗಿ ಆಚರಿಸೋಣ ಎಂದು ಹೇಳಿದರು.
ಯುವ ರೆಡ್ಡಿ ನಾಯಕ ಬಸವರಾಜ ತಾಳಿಕೋಟಿ ಮಾತನಾಡಿ ಪ್ರತಿ ವರ್ಷವೂ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿ ಸಮಾಜದ ವತಿಯಿಂದ ಶಿಕ್ಷಣ ಸಂಸ್ಥೆ ಕಟ್ಟುವ ಮಹಾದಾಸೆ ವ್ಯಕ್ತಪಡಿಸಿದರು
ಎಂ ಆರ್ ಪಾಟೀಲ್ ಮಾತನಾಡಿ ರೆಡ್ಡಿ ಸಮಾಜದ ಶ್ರೇಯೋ ಅಭಿವೃದ್ಧಿಗಾಗಿ ನಮ್ಮ ಸಹಕಾರ ಯಾವಾಗಲೂ ಇರುತ್ತದೆ ಎಂದು ಹೇಳಿದರು.
ಸಭೆಯಲ್ಲಿ ರಡ್ಡಿ ಸಮಾಜದ ಹಿರಿಯರಾದ ರಾಮನಗೌಡ ಬೆಳ್ಳಿಹಾಳ ಚಿತ್ತರಗಿಯ ಮಲ್ಲಣ್ಣ ಜಾಗೀರ್ದಾರ್ ಹುನಗುಂದದ ಪಿ ಎಲ್‌ಡಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಬಿಸರೆಡ್ಡಿ ಗುತ್ತಿಗೆದಾರ ವೆಂಕಟೇಶ್ ಬೇವೂರ ಸುಧೀರ್ ಪಾಟೀಲ ತವಣ್ಯಪ್ಪ ಗೊರಬಾಳ್ ಭೀಮಪ್ಪ ಚಳಗೇರಿ ಮಹಾಂತೇಶ ಮೂಲಿಮನಿ ಎಂ ಆರ್ ಪಾಟೀಲ ಹಿರೇಓತಗೇರಿಯ, ಸಿದ್ದನಗೌಡ ಪಾಟೀಲ್ ಗೋನಾಳ್ ಎಸ್ಟಿ ಗ್ರಾಮದ ಬಾರ್ ಚಂದ್ರ ಗೌಡರ ಗುರು ಹಿರಿಯರು ಹಾಗೂ ಅನೇಕ ಯುವ ಮಿತ್ರರು ಆಗಮಿಸಿದ್ದರು.
ಸಭೆಯ ಸಂಘಟಿಕರಾದ ಸಿದ್ದನಗೌಡ ಪ್ರಶಾಂತ್ ವಿಜಯ ಶಶಿ ಬಸವರಾಜ ಮುತ್ತು ವಿಜಯ ತಿಮ್ಮಾಪುರ ಗ್ರಾಮದ ಬಾಬುಗೌಡ ಕೆಂಚನಗೌಡ್ರ ಪತ್ರಕರ್ತ ಜಗದೀಶ ರವಿ ಬೇರಗಿ ಸೇರಿದಂತೆ ಯುವಕ ಮಿತ್ರರು ಪಾಲ್ಗೊಂಡಿದ್ದರು.
- ಕರುನಾಡ ಕಂದ
