ಯಾದಗಿರಿ/ ಗುರುಮಠಕಲ್: ಕೆಲವು ದಿನಗಳ ಹಿಂದೆ ಗುರುಮಠಕಲ್ ತಾಲೂಕಿನ ಯದ್ಲಾಪುರ್ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಅನಿಲ್ ತಂದೆ ಸಾಬಣ್ಣ ಇವರಿಗೆ ಜೆಸ್ಕಾಂ ಇಲಾಖೆಯ ವತಿಯಿಂದ ಮಂಜೂರಾದ 5 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ಗುರುಮಠಕಲ್ ಮತಕ್ಷೇತ್ರದ ಯುವ ಶಾಸಕರಾದ ಶರಣಗೌಡ ಕಂದಕೂರ ಅವರು ಮೃತ ಅನಿಲ್ ಅವರ ತಂದೆಯವರಾದ ಸಾಬಣ್ಣರವರಿಗೆ ಇಂದು ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಜನತಾದಳ ಪಕ್ಷದ ಜಿಲ್ಲಾಧ್ಯಕ್ಷರಾದ ಸುಭಾಷ್ ಚಂದ್ರ ಕಟಕಟಿ ಯದ್ಲಾಪುರ್ ಗ್ರಾಮದ ಮುಖಂಡರಾದ ಅನಂತಪ್ಪ ಬೋಯಿನ್, ಮಹೇಶ್, ಲಿಂಗಾರೆಡ್ಡಿ ಮತ್ತು ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರದ ಮಾನಪ್ಪ ಮತ್ತು ಶಾಖಾಧಿಕಾರಿಯಾದ ಗೋಳಪ್ಪ ಮತ್ತು ಸಂದೀಪ್ ಹಜಾರೆ ಇವರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್
