ನಾನು ಮಾಡಿದ ಸಾಧನೆ ಎಲ್ಲವೂ ಪತಿಯ ಬೆಂಬಲದಿಂದ ಸಾಧ್ಯವಾಗಿದ್ದು – ಡಾ. ಅಮರೇಶ್ವರಿ ಬಾಬುರಾವ ಚಿಂಚನಸೂರ
ಯಾದಗಿರಿ/ ಗುರುಮಠಕಲ್ : ಮತಕ್ಷೇತ್ರದ ಮಾಜಿ ಸಪ್ತ ಖಾತೆಗಳ ಸಚಿವರು ಪ್ರಸಕ್ತ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಬುರಾವ ಚಿಂಚನಸೂರ ಅವರ ಧರ್ಮ ಪತ್ನಿ ಶ್ರೀಮತಿ ಅಮರೇಶ್ವರಿ ಬಾಬುರಾವ ಚಿಂಚನಸೂರ ಅವರಿಗೆ ಇಂಟರ್ ನ್ಯಾಷನಲ್ ಹ್ಯೂಮನ್ ಡೆವಲಪ್‌ಮೆಂಟ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು.
ಡಾ. ಅಮರೇಶ್ವರಿ ಅವರು ಕಳೆದ ದಶಕಗಳ ಕಾಲ ಪತಿಯ ಪ್ರೋತ್ಸಾಹದಿಂದ ಒಬ್ಬ ಮಹಿಳೆಯಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಹಾಗೂ ಮಹಿಳಾ ಸಬಲೀಕರಣ ಮತ್ತು ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವಲ್ಲಿ ಅಪಾರ ಕೊಡುಗೆಯನ್ನು ನೀಡಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ಮಹಿಳಾ ಉದ್ಯಮಿಯಾಗಿ ಉದ್ಯಮಗಳನ್ನು ಸ್ಥಾಪಿಸಿ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಶ್ರಮಿಸಿದ್ದಾರೆ, ಅತೀ ಹಿಂದುಳಿದ ನಮ್ಮ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ಪದವಿ ಸ್ವೀಕರಿಸಿದ ನಂತರ ಮಾತನಾಡಿದ ಡಾ. ಅಮರೇಶ್ವರಿ ಅವರು ಮಾತನಾಡಿ ನಾನು ಮಾಡಿದ ಸಾಧನೆ ಎಲ್ಲವೂ ಪತಿಯ ಬೆಂಬಲದಿಂದ ಸಾಧ್ಯವಾಗಿದ್ದು ನನ್ನ ಈ ಸೇವೆಯನ್ನು ಗುರುತಿಸಿ ಗೌರವ ನೀಡಿದ ಸಂಸ್ಥೆಗೆ ಸಹ ಧನ್ಯವಾದಗಳನ್ನು ಸಲ್ಲಿಸುತ್ತೆನೆ ಎಂದರು.
ವರದಿ: ಜಗದೀಶ್ ಕುಮಾರ್
