
ಬಳ್ಳಾರಿ / ಕಂಪ್ಲಿ : ವಾಲ್ಮೀಕಿ ಸಮಾಜವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಶಿಕ್ಷಣ ಜತೆಗೆ ಸಂಘಟನೆ ಅತಿ ಮುಖ್ಯವಾಗಿದೆ ಎಂದು ಶಾಸಕ ಜೆ. ಎನ್. ಗಣೇಶ ಹೇಳಿದರು.
ಸ್ಥಳೀಯ ಎಂ. ಡಿ. ಕ್ಯಾಂಪ್ ನ ಶಿರಡಿ ಸಾಯಿಬಾಬಾ ದೇವಸ್ಥಾನ ಮುಂಭಾಗದಲ್ಲಿರುವ ವಾಲ್ಮೀಕಿ ಭವನದ ದಿ.ಬಾಳೆಕಾಯಿ ಕೆಂಚಪ್ಪನವರ ವೇದಿಕೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕಂಪ್ಲಿ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಾಗಲೇ ಕಂಪ್ಲಿ ನಗರದಲ್ಲಿ ವಾಲ್ಮೀಕಿ ಭವನವಾಗಿದ್ದು, ಇನ್ನೂ 36 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ಗೋಡೆ ಸೇರಿದಂತೆ ನಾನಾ ಸಣ್ಣ ಪುಟ್ಟ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಕಂಪ್ಲಿ, ಕುರುಗೋಡು ತಾಲೂಕಿನಲ್ಲಿ ಸುಮಾರು ತಲಾ 6 ಕೋಟಿ ವೆಚ್ಚದಲ್ಲಿ ಎಸ್ಟಿ ವಸತಿ ನಿಲಯಕ್ಕೆ ಜಾಗ ಗುರುತಿಸಿ, ಅತಿ ಶೀಘ್ರದಲ್ಲೇ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಗುವುದು. ಕುರುಗೋಡು ಪಟ್ಟಣದ ಮಿನಿ ವಿಧಾನಸೌಧದ ಪಕ್ಕದಲ್ಲಿ 2ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಸ್ಥಳಾವಕಾಶ ದೊರೆತರೆ, ಸಮುದಾಯ ಭವನಗಳನ್ನು ನಿರ್ಮಿಸುವ ಭರವಸೆ ಜತೆಗೆ ವಾಲ್ಮೀಕಿ ಸಮುದಾದವರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ, ಒಳ್ಳೆಯ ಹುದ್ದೆಗಳಿಗೆ ಏರುವಂತೆ ಮಾಡಬೇಕು. ಮತ್ತು ನೂತನ ಪದಾಧಿಕಾರಿಗಳು ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ತದ ನಂತರ ನೂತನ ಅಧ್ಯಕ್ಷ ನರ‍್ಗಂಟಿ ವಿರೇಶ, ಉಪಾಧ್ಯಕ್ಷರಾದ ವೆಂಕೋಬ, ನಾಗಭೂಷಣ, ಡಿ.ವೀರಣ್ಣ, ಖಜಾಂಚಿಯಾಗಿ ದ್ಯಾವಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ, ಸಹ ಕಾರ್ಯದರ್ಶಿಯಾಗಿ ಲೋಕೇಶ, ಸಂಘಟನಾ ಕಾರ್ಯದರ್ಶಿಗಳಾದ ಜಡೆಪ್ಪ, ಎಂ. ವಿರೇಶ, ಸದಸ್ಯರಾಗಿ ಪಿ.ವಿರೇಶ, ದುರುಗಣ್ಣ, ನಾಗಪ್ಪ, ಅಂಗಡಿ ಹನುಮಯ್ಯ, ಷಣ್ಮುಖಪ್ಪ, ಜಡೆಪ್ಪ, ಶೇಖರ್, ನಿಂಗಪ್ಪ, ನಾಗಪ್ಪ, ಟಿ.ತಿಪ್ಪಯ್ಯ, ಗೋವಿಂದಪ್ಪ, ದೇವು, ದೇವ, ಮಹಾಂತೇಶ, ವಿರೇಶ, ರಂಗಯ್ಯ ಇವರು ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಮಹಾಸಭಾದ ಧರ್ಮದರ್ಶಿ ಜಂಭಯ್ಯನಾಯಕ, ಪುರಸಭೆ ಸದಸ್ಯ ರಾಮಾಂಜನೇಯ, ಮುಖಂಡರಾದ ಡಾ.ವೆಂಕಟೇಶ ಸಿ.ಭರಮಕ್ಕನವರ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
