

ವಿಜಯಪುರ : ನಿನ್ನೆ ಸಿಂದಗಿ ನಗರದಲ್ಲಿ ಭಾರತೀಯ ಜನತಾ ಪಾಟೀ೯ ಯುವ ಮೋಚಾ೯ ಸಿಂದಗಿ ಮಂಡಲ ವತಿಯಿಂದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿರುವ ದಾಳಿ ಮನುಕುಲವನ್ನೇ ಬೆಚ್ಚಿ ಬೀಳಿಸುವಂತದ್ದು ಶೀಘ್ರವೇ ಈ ಹೇಯ ಕೃತ್ಯದ ಹಿಂದಿರುವ ಪ್ರತಿಯೊಬ್ಬ ಉಗ್ರನನ್ನೂ ಹುಡುಕಿ ಮಟ್ಟ ಹಾಕುವಲ್ಲಿ ನಮ್ಮ ಸೇನಾ ಪಡೆಗಳು ಯಶಸ್ವಿಯಾಗಲೇಂದು ಸಿಂದಗಿ ವಿಧಾನಸಭಾ ಮತಕ್ಷೇತ್ರದ BJP ಪಕ್ಷದ ಮುಖಂಡರಾದ ಸನ್ಮಾನ್ಯ ಶ್ರೀ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಾ) ಅವರು ಮಾತನಾಡಿ ನಂತರ ಭೀಕರ ಹತ್ಯಗೊಳಗಾದ ಹಿಂದೂಗಳ ಆತ್ಮಕ್ಕೆ ಚಿರ ಶಾಂತಿ ನೀಡಲೆಂದು ಅವರ ಕುಟುಂಬದ ಬಂಧುಗಳಿಗೆ
ದು:ಖ ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲೆಂದು ಪ್ರಾರ್ಥಿಸಿ ಭಾವಪೂಣ೯ ಶೃದ್ಧಾಂಜಲಿ ಸಲ್ಲಿಸಿದರು.
ಈ ಸಂದಭ೯ದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಅರುಣ ಶಹಾಪುರ, ಮಂಡಲ ಅಧ್ಯಕ್ಷರಾದ ಸಂತೋಷಗೌಡ ಪಾಟೀಲ, ಮಾಜಿ ತಾ, ಪಂ, ಸದಸ್ಯರಾದ ಬಿ, ಎಚ್ ಬಿರಾದಾರ, ಶ್ರೀಶೈಲ ಚಳ್ಳಗಿ, ಯುವ ಮೋಚಾ೯ ಅಧ್ಯಕ್ಷರಾದ ಅಶೋಕ ನಾರಾಯಣಪುರ, ST ಮೋಚಾ೯ ಅಧ್ಯಕ್ಷರಾದ ಪ್ರಶಾಂತ ಕದ್ದರಗಿ, ಪಕ್ಷದ ಹಿರಿಯರಾದ ಚಂದ್ರಶೇಖರ ಅಮಲಿಯಾಳ, ಮಡಿವಾಳಪ್ಪಗೌಡ ಬಿರಾದಾರ, ಹಾಗೂ ಪಕ್ಷದ ಪದಾಧಿಕಾರಿಗಳು, ಕಾಯ೯ಕತ೯ರು, ಅನೇಕರು ಸೇರಿದಂತೆ ಉಪಸ್ಥಿತರಿದ್ದರು.
ವರದಿ : ಹಣಮಂತ ಚ. ಕಟಬರ
