ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳಕ್ಕೆ ಸಹಾಯಕ ನಿರ್ದೇಶಕರು (ಗ್ರಾ. ಉ) ವಿಜಯ ಪಾಟೀಲ ರವರು ಭೇಟಿ ನೀಡಿ ಕಾಮಗಾರಿ ಸ್ಥಳದಲ್ಲಿರುವ ಕೂಲಿಕಾರರಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ವಿಜಯ ಪಾಟೀಲ ಮಾತನಾಡಿ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ನೆರಳು ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ವಿತರಣೆ ಮಾಡಿ ಕೂಲಿಕಾರರಿಗೆ ಯೋಜನೆಯಲ್ಲಿ ಲಭ್ಯವಿರುವಂತಹ ಸೌಲಭ್ಯಗಳನ್ನು ಎಲ್ಲಾ ಗ್ರಾಮ ಪಂಚಾಯತಿಯಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.
ಬೇಸಿಗೆ ಅವಧಿಯಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಎಪ್ರೀಲ್ ಮತ್ತು ಮೇ ಮಾಹೆಯಲ್ಲಿ ಪ್ರತಿಶತ 30% ರಷ್ಟು ಕಡಿತ ಮಾಡಿ ಅನಕೂಲ ಮಾಡಲಾಗಿದೆ, ವಿಶೇಷ ಚೇತನರು ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯ ಜೀವಗಳಿಗೂ ಸಹ ಕೆಲಸದ ಪ್ರಮಾಣದಲ್ಲಿ ಶೇಕಡಾ 50% ರಷ್ಟು ರಿಯಾಯಿತಿಯನ್ನು ನೀಡಲಾಗಿದೆ ಎಂದರು.
ನೇಗಿನಹಾಳ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಭಾಗವಹಿಸುವಿಕೆ ಸನ್ 2024-25 ರಲ್ಲಿ ಪ್ರತಿಶತ 44.29% ರಷ್ಟು ಮಾತ್ರ ಮಹಿಳೆಯರು ಕೆಲಸಕ್ಕೆ ಬರುತ್ತಾರೆ ಆದ್ದರಿಂದ ಈ ಗ್ರಾಮದಲ್ಲಿ ಸ್ತ್ರೀ ಚೇತನ ಕಾರ್ಯಕ್ರಮದ ಮೂಲಕ ಶೇ 50% ರಷ್ಟು ಮಹಿಳಾ ಭಾಗವಹಿಸುವಿಕೆ ಹೆಚ್ಚಾಗಬೇಕು ಎಂದರು.
ತಾ.ಪಂ ಐಇಸಿ ಸಂಯೋಜಕ ಎಸ್ ವ್ಹಿ ಹಿರೇಮಠ ಮಾತನಾಡಿ ನರೇಗಾ ಯೋಜನೆಯಲ್ಲಿ ದುಡಿಯುವ ಕೈಗಳಿಗೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಗಳನ್ನು ತಪ್ಪದೇ ಮಾಡಿಸಿಕೊಳ್ಳಬೇಕು ಆರ್ಥಿಕ ವರ್ಷದಲ್ಲಿ 436/- ಮತ್ತು 20/- ರೂಗಳು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆ ಮೂಲಕ ಕಡಿತ ಆಗುತ್ತದೆ ನಿಮಗೆ ಜೀವ ವಿಮೆಯ ಭದ್ರತೆ ಒದಗುತ್ತದೆ ಎಂದು ತಿಳಿಸಿದರು.
ಇದೇ ಮೇ-01-2025 ರಿಂದ ಎಲ್ಲಾ ಗ್ರಾಮ ಪಂಚಾಯತ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಗ್ರಾಮ ಆರೋಗ್ಯ ಅಭಿಯಾನದ ಪ್ರಯುಕ್ತ “ಆರೋಗ್ಯವೇ ಭಾಗ್ಯ” ಎಂಬ ವಿನೂತನ ಕಾರ್ಯಕ್ರಮದ ಮೂಲಕ ಕೂಲಿಕಾರರ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಇದರಲ್ಲಿ ಎಲ್ಲರೂ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಕೊಂಡು ಆರೋಗ್ಯವಂತರಾಗಿರಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸನಗೌಡ ಪಾಟೀಲ, ನರೇಗಾ ವಿಷಯ ನಿರ್ವಾಹಕ ರಮೇಶ ನಂದಿಹಳ್ಳಿ, ಗ್ರಾಪಂ ಕಾರ್ಯದರ್ಶಿ ಬಸವಣ್ಣೆಪ್ಪ ಬಳಿಗಾರ, ಗ್ರಾ.ಪಂ ಸಿಬ್ಬಂದಿಗಳು ನಾಗರಾಜ್ ಹತ್ತಿ, ವಿಶ್ವನಾಥ ರೇವಣ್ಣವರ ಕಸ್ತೂರಿ ಖನಗಾಂವಿ ನರೇಗಾ ಮೇಟಗಳು ಹಾಗೂ ಕೂಲಿಕಾರ್ಮಿಕರು ಹಾಜರಿದ್ದು ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಮೇಟಗಳು ಸ್ವೀಕರಿಸಿದರು.
ಕೆಲಸದಲ್ಲಿ ಒಟ್ಟು 199 ಕೂಲಿಕಾರರು ಹಾಜರಿದ್ದರು.
ವರದಿ. ಭೀಮಸೇನ ಕಮ್ಮಾರ
