ಬಳ್ಳಾರಿ / ಎಮ್ಮಿಗನೂರು : ಗ್ರಾಮದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿಜಮ್ಮು ಕಾಶ್ಮೀರದ ಪಹಲ್ಗಾಮ್ ಪ್ರವಾಸಿಗರ ಮೇಲೆ ನಡೆದ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಿ. ಸದಾಶಿವಪ್ಪ ಮಾತನಾಡಿ ಉಗ್ರರನ್ನು ಮಟ್ಟ ಮಟ್ಟ ಹಾಕಲು ಪಕ್ಷಾತೀತವಾಗಿ ಪ್ರತಿಯೊಬ್ಬರೂ ಸರ್ಕಾರಕ್ಕೆ ಬೆಂಬಲವನ್ನು ಕೊಡಬೇಕು, ಪ್ರವಾಸಿ ತಾಣಗಳಿಗೆ ಪ್ರವಾಸಕ್ಕೆ ಹೋದವರ ಮೇಲೆ, ಅಮಾನುಷವಾಗಿ ಜೀವ ತೆಗೆಯುವ ಮಟ್ಟಕ್ಕೆ ಇಳಿದ ಭಯೋತ್ಪಾದಕರ ಹುಟ್ಟನ್ನು ಅಡಗಿಸುವ ಕೆಲಸ ತ್ವರಿತವಾಗಿ ಆಗಬೇಕು. ಈ ಕೃತ್ಯದಿಂದ ಪ್ರವಾಸಿಗರು ಪ್ರವಾಸ ತಾಣಗಳಿಗೆ ಹೋಗಲು ಹಿಂದೂ ಮುಂದು ಆಲೋಚಿಸಬೇಕಾಗುವ ವಾತಾವರಣ ಸೃಷ್ಟಿ ಆಗಲಿದೆ. ಸರ್ಕಾರದಿಂದ ಕೂಡಲೇ ಇದಕ್ಕೆ ಪ್ರತ್ಯುತ್ತರ ನೀಡಿ ಪ್ರವಾಸಿಗರಿಗೆ, ಭಾರತೀಯರಿಗೆ ಮುಕ್ತ ವಾತಾವರಣ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಬಕೆಂದು ಕೋರಿದರು.
ಅಲ್ಲದೆ ಗುಂಡಿಗೆ ಬಲಿಯಾದ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ದುಃಖವನ್ನು ಬರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಲಾಯಿತು.
ಪೂರ್ವದಲ್ಲಿ ಮೇಣದಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಜಿ. ನಾಗರೆಡ್ಡಿ ಎನ್ನು ಸೂಗಪ್ಪ ಎಚ್ ರುದ್ರಪ್ಪ ವೈ ಅಶ್ವಥ ರೆಡ್ಡಿ ಎಚ್. ಜಡ್ಯಪ್ಪ ರಂಗಪ್ಪ ದಶರಥ ರೆಡ್ಡಿ ಶಿವನೇಗೌಡರು ರಾಮಪ್ಪ ಬಡಿಗೇರ್ ವೀರೇಶ್ ಟಿ ರಾಮು ಶಿವರಾಮ ರೆಡ್ಡಿ ವಿರೇಶಪ್ಪ ಸೇರಿದಂತೆ ಮಕ್ಕಳು ಗ್ರಾಮಸ್ಥರು ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
