ನೋವಲ್ಲೇ ಹುಟ್ಟಿ,
ನೋವಲ್ಲೇ ಬೆಳೆದು.
ನೋವೆಂದರೇನೆಂದು ತಿಳಿದು,
ಕ್ಷಣ ಕ್ಷಣವೂ ಅನುಭವಿಸಿದ ಕರುಣಾಮಯಿ,
ಭಾವೈಕ್ಯತೆಯ ಕಾಯಕಯೋಗಿ.
ತಾನುಂಡ ನೋವು
ಮತ್ತಾರಿಗೂ ಬೇಡೆಂದು
ತನ್ನ ಜೀವವನ್ನು ತೇದು
ಅರಿವಿನ ಹಣತೆ ಬೆಳಗಿದ
ಸಮಾನತೆಯ ಕ್ರಾಂತಿ ಯೋಗಿ.
ದಯವೇ ಧರ್ಮ ಎಂದ
ಸಕಲ ಜೀವಾತ್ಮರಿಗೆ ಲೇಸಾಗಲೆಂದ
ನುಡಿದಂತೆ ನಡೆದ
ವಿಶ್ವಕ್ಕೆ ಶ್ರೇಷ್ಠ ವಚನ ಸಾಹಿತ್ಯ
ನೀಡಿದ ಅಣ್ಣ ಬಸವಣ್ಣ.
ನಿಮಗಿದು ಅನಂತ ಕೋಟಿ ಅಂತರಂಗದ ನಮನಗಳು.
- ಸಂಗಮೇಶ ಎನ್ ಜವಾದಿ.
