ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಗುರುವಾರ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.
ನಂತರ ಗ್ರಾಮ ಘಟಕ ಅಧ್ಯಕ್ಷ ಕಾನೀರ್ ಮಲೆಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಕಟ್ಟಡ ಸೇರಿದಂತೆ ನಾನಾ ಕಾರ್ಮಿಕರಿಗೆ ನಿವೇಶನ ಜತೆಗೆ ಸೂರು ನೀಡಬೇಕು. ಮತ್ತು ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಕಲ್ಪಿಸುವ ಮೂಲಕ ಅವರ ಬದುಕಿಗೆ ಆಸರೆಯಾಗಬೇಕು. ಪ್ರಸಕ್ತ ವರ್ಷದಲ್ಲಿ ಕಾರ್ಮಿಕರಿಗೆ ಸುರಕ್ಷಿತ ಸಾಮಾಗ್ರಿಗಳು ಸೇರಿದಂತೆ ಕಿಟ್ ನೀಡಬೇಕು. ಮಕ್ಕಳಿಗೆ ಸ್ಕಾಲರ್‌ಶಿಪ್ ಕೊಡಬೇಕು. ಕಾರ್ಮಿಕ ಮಕ್ಕಳ ಕಲಿಗೆ ವಿಶೇಷ ಗಮನ ಹರಿಸುವ ಜತೆಗೆ ನಾನಾ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಕಲ್ಡಳ್ಳಿ ಬಸುವ, ಕರೇಗೌಡ್ರು ಹನುಮೇಶ, ಹೆಚ್.ಪರಶುರಾಮ, ಕುಂಬಾರ ಚಿದಾನಂದಪ್ಪ, ಸದಸ್ಯರಾದ ಶಿವರಾಜಕುಮಾರ, ಚಿಕ್ಕಣ್ಣ, ಸೋಮಣ್ಣ, ಬಿ.ದೇವರಾಜ, ಜಿ.ನಾಗರಾಜ, ರಾರಾವಿ ವಿರೇಶ, ಎನ್.ಗೋವಿಂದ, ಶೆಕ್ಷಾವಲಿ, ಗೊರವರ ಹಳ್ಳಪ್ಪ, ತಿಪ್ಪೇಶ, ಗೌಡ್ರು ಅಂಜಿನಪ್ಪ, ಗೌಡ್ರು ಕರಿಯಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್
