ಮಂಗಗಳ ಕಾಟದಿಂದ ಬೇಸತ್ತ ರೈತರು 2 ತಿಂಗಳ ಹಿಂದೆ ಅರ್ಜಿ ಕೊಟ್ಟರೂ ಸಹ ಕ್ರಮ ಕೈಗೊಳ್ಳದ ಅರಣ್ಯಾಧಿಕಾರಿಗಳ ಮೇಲೆ ದಿಢೀರನೇ ಅರಣ್ಯಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿದ ರೈತರು
ಬೀದರ / ಬಸವಕಲ್ಯಾಣ : ತಾಲೂಕಿನ ಬಗದುರಿ ಗ್ರಾಮದ ರೈತರ ಜಮೀನುಗಳಿಗೆ ಮಂಗಗಳ ಹಾವಳಿ ಹೆಚ್ಚಾದುದರಿಂದ 2 ತಿಂಗಳ ಹಿಂದೆ ಬಸವಕಲ್ಯಾಣ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳ ಕಛೇರಿಗೆ ಗ್ರಾಮದ ರೈತರೆಲ್ಲರು ಸೇರಿ ಮಂಗಗಳ ಹಾವಳಿ ಮುಕ್ತಿ ಮಾಡುವಂತೆ ವಲಯ ಅರಣ್ಯಾಧಿಕಾರಿಗಳಿಗೆ ಅರ್ಜಿ ಮುಖಾಂತರ ವಿನಂತಿಸಿಕೊಂಡಿರುತ್ತಾರೆ. 2 ತಿಂಗಳಾದರೂ ಕೂಡಾ ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳದ ಅಧಿಕಾರಿಗಳಿಗೆ ಇಂದು ದಿನಾಂಕ: 02/05/2025 ರಂದು ಗ್ರಾಮದ ರೈತರು ಬೆಳಿಗ್ಗೆ 11 ಗಂಟೆ ಸುಮಾರಿಗೆ ಧಿಡಿರನೇ ಬಸವಕಲ್ಯಾಣದಲ್ಲಿರುವ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಹಾಗೂ ಮುಡಬಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸೇರಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಆದಷ್ಟು ಬೇಗನೇ ಮಂಗಗಳಿಗೆ ಈ ಸ್ಥಳದಿಂದ ಬೇರೆ ಕಡೆ ಸ್ಥಳಾಂತರಿಸಿ ರೈತರ ಕಷ್ಟಗಳನ್ನು ಬಗೆ ಹರಿಸಿಕೊಡುವ ಭರವಸೆ ನೀಡಿದರು. ಆಗ ರೈತರು ಒಂದು ವೇಳೆ ನಮ್ಮ ಸಮಸ್ಯೆ ಬಗೆ ಹರಿಯದಿದ್ದರೆ ನಾವು ರಸ್ತೆಗಳಿದು ಧರಣಿ ಸತ್ಯಾಗ್ರಹ ಅಥವಾ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿ ಹೇಳಿದರು ಈ ಸಂಧರ್ಭದಲ್ಲಿ ಗ್ರಾಮದ ರೈತರುಗಳಾದ ಶ್ರೀ ಸೂರ್ಯಕಾಂತ ಬಿರಾದಾರ, ಶ್ರೀ ಧನಶೆಟ್ಟಿ ರಾಜೋಳೆ, ಶ್ರೀ ಶಿವಾನಂದ ಬಿರಾದಾರ, ಶ್ರೀ ಶಂಕರ ರಾಜೋಳೆ, ಶ್ರೀ, ಸುದೇವ ಮಹಾಗಾಂವ, ಶ್ರೀ ಶಾಂತಕುಮಾರ ಸಿಂಗ್ರೆ, ಶ್ರೀ ಮಹಾರುದ್ರ ಬಿರಾದಾರ, ಶ್ರೀ ಪರಮೇಶ್ವರ ಬಿರಾದಾರ, ಶ್ರೀ ಚಂದ್ರಕಾಂತ ಸ್ವಾಮಿ, ಶ್ರೀ ರವಿ ಮೂಲಗೆ, ಶ್ರೀ ಸಂಜುಕುಮಾರ ಎಸ್. ಬಿರಾದಾರ, ಶ್ರೀ ಭೀಮ ಬೀರಾದಾರ, ಶ್ರೀ ಪ್ರಶಾಂತ ಬಿರಾದಾರ, ಚನ್ನವೀರ ಮಹಾಗಾಂವ ಗ್ರಾಮ ಪಂಚಾಯತ ಸದಸ್ಯರಾದ ಭೀಮಶಾ ಮಂದಿರಕ ಹೀಗೆ ಇತರರು ಇದ್ದರು.
ವರದಿ : ಶ್ರೀನಿವಾಸ ಬಿರಾದಾರ
