
ಕೊಪ್ಪಳ : ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಅರ್ಥಶಾಸ್ತ್ರ ವಿಭಾಗ ಆಂತರಿಕ ಗುಣಮಟ್ಟ ಬರವಸಾಕೋಶದ ಸಹಯೋಗದೊಂದಿಗೆ ಕಾಲೇಜಿನಲ್ಲಿ ಸೂಕ್ಷ್ಮ ಹಣಕಾಸು ಮತ್ತು ಮಹಿಳಾ ಸಬಲೀಕರಣ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ಮುಖ್ಯ ಅತಿಥಿಗಳಾಗಿ ವೀರರಾಣಿ ಕಿತ್ತೂರು ಚೆನ್ನಮ್ಮ ಸೌಹಾರ್ದ ಸಹಕಾರಿ ನಿಯಮಿತ ಕೊಪ್ಪಳದ ನಿರ್ದೇಶಕರಾದ ಶ್ರೀಮತಿ ಗಿರಿಜಾ ಅಂದಾನ ಗೌಡ ಪೊಲೀಸ್ ಪಾಟೀಲ್ ರವರು ಆಗಮಿಸಿ ಸಣ್ಣ ಬಂಡವಾಳ ಹೂಡಿಕೆಗಳು ಮಹಿಳೆಯರ ಸಬಲೀಕರಣದಲ್ಲಿ ಹೋಲಿಸಿರುವ ಮಹತ್ವವನ್ನು ವಿದ್ಯಾರ್ಥಿನಿಯರಿಗೆ ತಿಳಿಸಿದರು ಮಹಿಳೆ ಧೈರ್ಯಶಾಲಿ ಆಕೆ ಮದುವೆಯಾಗಿ ಒಂಟಿಯಾಗಿ ಒಬ್ಬಳೇ ಇನ್ನೊಂದು ಮನೆಯನ್ನು ಬೆಳಗುತ್ತಾಳೆಂದರೆ ಆಕೆ ನಿಜಕ್ಕೂ ಧೈರ್ಯವಂತೆ ಎಂದು ತಿಳಿಸಿದರು.
ಮದುವೆಯ ನಂತರ ಮುಗಿಯಿತು ಎನ್ನುವ ಹಲವರ ಅಳಲುಗಳ ಮುಂದೆ ನನ್ನ ಜೀವನವೇ ಉದಾಹರಣೆ ಎಂದು ತಿಳಿಸಿದರು. ಮದುವೆಯ ನಂತರವೇ ನಾನು ಪದವಿ ಬಿಎ, ಬಿ.ಎಡ್ ಪದವಿಗಳನ್ನು ಪಡೆದು ಸಾಮಾಜಿಕ ರಂಗದಲ್ಲಿ ತೊಡಗಲು ಸಾಧ್ಯವಾಗಿತ್ತೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಹುಲಿಗಮ್ಮ ಸಣ್ಣ ಉಳಿತಾಯಗಳು ಮಹಿಳೆಯ ಜೀವನದಲ್ಲಿ ಮಹತ್ವವಾದವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸುತ್ತಾ ಜೊತೆಯಲ್ಲಿ ಮಹಿಳೆಯರು ಕೌಶಲ್ಯವಂತೆಯೂ ಆಗಿರಬೇಕು ಕೈ ಕಸುಬುಗಳನ್ನು ಕಲಿತಿದ್ದರೆ ಆಕೆಯ ಜೀವನ ಸುಗಮವೆಂದು ತಿಳಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ವಿಭಾಗದ ಮುಖ್ಯಸ್ಥರಾದ ಕುಮಾರಿ ಶುಭ ಟಿ. ಇ. ಅವರು ಸೂಕ್ಷ್ಮ ಹಣಕಾಸು ವಿಷಯ ಬಂದರೆ ಸ್ವಸಹಾಯ ಗುಂಪುಗಳ ದೊಡ್ಡ ಉದಾಹರಣೆಗಳಾಗಿ ಕಾಣಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರಾದ ಡಾಕ್ಟರ್ ಅಶೋಕ್ ಕುಮಾರ್ ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ಅರ್ಥಶಾಸ್ತ್ರವಿಭಾಗ ನಡೆಸಿದ ವಿಧ ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಶ್ರೀಮತಿ ಬಸಮ್ಮ ಉಪನ್ಯಾಸಕರು ಕೋರಿದರು. ವಿದ್ಯಾರ್ಥಿನಿ ಶ್ರೀದೇವಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಮಧುಮತಿ ವಂದನಾರ್ಪಣೆಯನ್ನು ಸಲ್ಲಿಸಿದರು.
- ಕರುನಾಡ ಕಂದ
