ಮಂಗಗಳ ಹಾವಳಿಯಿಂದ ಬೇಸತ್ತ ರೈತರು ಇಂದು ತಹಸಿಲ್ದಾರರಿಗೆ ಮನವಿ ಮೂಲಕ ಅರ್ಜಿ ಸಲ್ಲಿಸಿ, ಒಂದು ವೇಳೆ ಸಮಸ್ಯೆ ಬಗೆ ಹರಿಯದಿದ್ದರೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.
ಬೀದರ್ : ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದ ರೈತರು ಮಂಗಗಳ ಹಾವಳಿಯನ್ನು ತಡೆಗಟ್ಟಲು ಸುಮಾರು ಎರಡು ತಿಂಗಳಿನಿಂದ ಗ್ರಾಂದ ರೈತರೆಲ್ಲರು ಕೂಡಿಕೊಂಡು ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಗೆ ಮನವಿ ಮೂಲಕ ಅರ್ಜಿ ಸಲ್ಲಿಸಿದರು ಕೂಡಾ ಯಾವುದೇ ತರಹದ ಉತ್ತರ ದೋಚದೇ ಇರುವ ಪ್ರಯುಕ್ತ ಇಂದು ದಿ. 08/05/2025 ಗುರುವಾರ ದಂದು ಪುನಃ ಗ್ರಾಮದ ರೈತರು ಬಸವಕಲ್ಯಾಣ ತಾಲೂಕಾ ದಂಡಾಧಿಕಾರಿಗಳ ಕಛೇರಿಯಲ್ಲಿ ದಂಡಾಧಿಕಾರಿಗಳಾದ ಶ್ರೀ ದತ್ತಾತ್ರೆ ಗಾಧಾ ಇವರಿಗೆ ಮನವಿ ಪತ್ರ ಸಲ್ಲಿಸಿ ರೈತರ ಕಷ್ಟಗಳು ಪರಿಹರಿಸಿ ಇಲ್ಲವಾದರೇ ರೈತರೆಲ್ಲರೂ ಸೇರಿ ರಸ್ತೆಗಿಳಿದು ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ರೈತರುಗಳಾದ ಶ್ರೀ ಸೂರ್ಯಕಾಂತ ಬಿರಾದಾರ, ಶ್ರೀ ಶಿವಾನಂದ ಬಿರಾದಾರ, ಶ್ರೀ ಮಹಾರುದ್ರ ಬಿರಾದಾರ, ಶ್ರೀ ವೆಂಕಟರಾವ ಬಿರಾದಾರ, ಶ್ರೀ ಧನಶೆಟ್ಟಿ ರಾಜೋಳೆ, ಶ್ರೀ ಮಾಧುರಾಯ ಬಿರಾದಾರ, ಶ್ರೀ ಮಲ್ಲಿಕಾರ್ಜುನ ಬಿರಾದಾರ, ಶ್ರೀ ಬಸವರಾಜ ರಾಜೋಳೆ, ಶ್ರೀ ಪ್ರಶಾಂತ ಬಿರಾದಾರ, ಜೀತೇಂದ್ರ ಮಂದಿರಕರ, ತುಕಾರಾಮ ಬೈನಿ, ರಶೀದ ಮುಲ್ಲಾ, ರಾಘವೇಂದ್ರ ಪೂಜಾರಿ ಮತ್ತಿತರರು ಇದ್ದರು.
ವರದಿ : ಶ್ರೀನಿವಾಸ ಬಿರಾದಾರ
