
ಯಾದಗಿರಿ : ಜಿಲ್ಲಾದ್ಯಂತ ವಾಹನಗಳ ಸಂಚಾರಕ್ಕೆ ಪ್ರತಿ ನಿತ್ಯ ಕಿರಿಕಿರಿ ತಪ್ಪಿಸಲು ಜಿಲ್ಲಾಡಳಿತ ಮುಂದಾಗಲಿ, ಉಮೇಶ ಕೆ. ಮುದ್ನಾಳ್ ಆಗ್ರಹ ,ದನಗಳಿಗೆ ಹೆದ್ದಾರಿ ರಸ್ತೆಗಳೆ ಮಲಗುವ ತಾಣ : ಉಮೇಶ ಕೆ. ಮುದ್ನಾಳ.
ಯಾದಗಿರಿ : ಗಿರಿನಗರದಲ್ಲಿ ರಸ್ತೆಯಲ್ಲಿ ಬಿಡಾಡಿ ದನಗಳ ಕಾರುಬಾರು ಸಂಚಾರಕ್ಕೆ ಅಡ್ಡಿ ನಡು ರಸ್ತೆಯ ಮಧ್ಯದಲ್ಲಿ ಧನಗಳ ಮಲಗುವ ಮೂಲಕ ವಾಹನ ಸಂಚಾರಕ್ಕೆ ನಗರ ಮತ್ತು ಜಿಲ್ಲಾದ್ಯಂತ ಹೆದ್ದಾರಿಯ ಸುಭಾಷ ವೃತ್ತ, ಹಾಗೂ ಲಾಲಬಹದ್ದೂರ, ಗಾಂಧಿ ಚೌಕ, ಚಕ್ರಕಟ್ಟಾ, ರೈಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ್ ಹೊಸಳ್ಳಿ ಕ್ರಾಸ್, ಗಂಜ್ ಏರಿಯಾದ ಎಲ್ಲೆಂದರಲ್ಲಿ ಮುಂತಾದ ಕಡೆಗಳಲ್ಲಿ ಸಂಜೆ ಆಗುತ್ತಿದ್ದಂತೆ ಬೀದಿ ದನಗಳ ಉಪಟಳ ಹೆಚ್ಚಾಗುತ್ತಿದೆ. ಈ ಹಿಂದೆ ರಸ್ತೆ ಅಪಘಾತಗಳು ಕೂಡಾ ಸಂಭವಿಸಿವೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ. ಆದರೆ ಈ ಬೀದಿ ದನಕರುಗಳಿಗೆ ವಾರಸುದಾರರು ಇರುವರೋ ಇಲ್ಲವೋ ಎಂದು ನಗರಸಭೆಗೆ ತಲೆನೋವಾಗಿದೆ, ಯಾದಗಿರಿ ನಗರದ ಮುಖ್ಯರಸ್ತೆಯಲ್ಲಿ ಸಂಚಾರಕ್ಕೆ ಖಂಡನೀಯವಾದದ್ದು ತಮಗೂ ಇದಕ್ಕೂ ಯಾವ ಸಂಬಂಧ ವಿಲ್ಲವೆಂಬಂತೆ ಜಾಣಕುರುಡರಂತೆ ವರ್ತಿಸುತ್ತಿರುವುದು ಸಂಬಂಧಪಟ್ಟವರು ಎಷ್ಟು ಮಟ್ಟಿಗೆ ಸಮಂಜಸ.
ಸಂಚಾರಕ್ಕೆ ಅಡ್ಡಿಪಡಿಸಿ ಮಲಗಿರುವ ದನಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಾಲಾ ಮಕ್ಕಳು ಸಾರ್ವಜನಿಕರಿಗೂ ಹಾಗೂ ಪ್ರಯಾಣಿಕರ ಮತ್ತು ವೃದ್ಧರ ಗೋಳು ಯಾರೂ ಕೇಳುತ್ತಿಲ್ಲ ಈ ಹಿಂದೆ ಪತ್ರಿಕೆ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾದರೆ ಕೂಡಾ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಳ್ಳದ ನಗರಸಭೆ ಪೌರಾಯುಕ್ತರು ಈ ಬೀದಿ ದನಗಳ ಕಾಟ ಕಡಿವಾಣ ಹಾಕಲು ಮುಂದಾಗಿಲ್ಲ ಯಾಕೆ ಎಂದು ಉಮೇಶ ಕೆ. ಮುದ್ನಾಳ ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ.
ತಕ್ಷಣ ಬಿಡಾಡಿ ದನಗಳನ್ನು ಗೋಶಾಲೆ ಸೇರಿಸಿ ಅಥವಾ ಇನ್ನಿತರ ಪರ್ಯಾಯ ವ್ಯವಸ್ಥೆ ಅತೀ ಶೀಘ್ರದಲ್ಲಿ ಮಾಡಿ ಈ ರಸ್ತೆಯ ಮೇಲಿನ ದನಗಳ ಕಾಟ ತಪ್ಪಿಸದೇ ಹೋದರ ಉಗ್ರ ಹೋರಾಟ ಮಾಡಲಾಗುತ್ತದೆ, ನಗರಸಭೆ ಪರ್ಯಾಯ ವ್ಯವಸ್ಥೆ
ಮುಂದಾಗಿ, ಇಲ್ಲದದ್ದರೆ ಮುಂದಾಗುವ ಅನಾವುತಗಳಿಗೆ ನಗರ ಸಭೆ, ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತೆದೆ ಎಂದು ಉಮೇಶ ಕೆ. ಮುದ್ನಾಳ ಸಾಮಾಜಿಕ ಹೋರಾಟಗಾರರು ತಿಳಿಸಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ
