ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ

‘ಗಝ್ವಾ-ಎ-ಹಿಂದ್’ ಅಥವಾ ‘ಸನಾತನ ರಾಷ್ಟ್ರ’ ?

ಭಾರತವು ಇಂದು ಅಭಿವೃದ್ಧಿ, ವಿಜ್ಞಾನ-ತಂತ್ರಜ್ಞಾನ ಮತ್ತು ಜಾಗತಿಕ ಸಹಕಾರದ ದಿಕ್ಕಿನಲ್ಲಿ ಸಾಗುತ್ತಿರುವಾಗ, ಅದೇ ಸಮಯದಲ್ಲಿ ಒಂದು ಆಂತರಿಕ ಅಪಾಯವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಅದು ‘ಗಝ್ವಾ-ಎ-ಹಿಂದ್’ ನ ಅಪಾಯ ! ‘ಗಝ್ವಾ-ಎ-ಹಿಂದ್’ ಎಂದರೆ ಭಾರತದಲ್ಲಿ ಜಿಹಾದಿ ರಾಷ್ಟ್ರವನ್ನು ಸ್ಥಾಪಿಸುವ ದಿಕ್ಕಿನಲ್ಲಿ ಇಡಲಾದ ಮತಾಂಧರ ಹೆಜ್ಜೆಗಳು ! ಇದು ಕೇವಲ ಆಲೋಚನೆ, ಕಲ್ಪನೆಯಲ್ಲ, ಆದರೆ ಅದನ್ನು ವಾಸ್ತವದಲ್ಲಿ ಕಾರ್ಯಗತಗೊಳಿಸಲು ಸಂಚು ರೂಪಿಸಲಾಗುತ್ತಿದೆ. ಪ್ರಸ್ತುತ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಹಲಾಲ್ ಜಿಹಾದ್ ಇವು ಈ ‘ಗಝ್ವಾ-ಎ-ಹಿಂದ್’ನ ಸಣ್ಣ ರೂಪಗಳಾಗಿವೆ. ಮೊನ್ನೆ ಮೊನ್ನೆ ನಡೆದ ಪಹಲ್ಗಾಮ್ ದಾಳಿಯೂ ಇದಕ್ಕೆ ಹೊರತಾಗಿಲ್ಲ. ಐಸಿಸ್ (ISIS), ಅಲ್-ಖೈದಾ, ಅನ್ಸಾರ್-ಉಲ್-ಇಸ್ಲಾಂ, ಪಿಎಫ್‌ಐ ಮುಂತಾದ ಸಂಘಟನೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರ ಮನಸ್ಸಿನಲ್ಲಿ ವಿಷವನ್ನು ತುಂಬುತ್ತಿವೆ. ಅವರನ್ನು ಸ್ಥಳೀಯವಾಗಿ ಬೆಂಬಲಿಸುವ ‘ಸ್ಲೀಪರ್ ಸೆಲ್‌’ಗಳು ಭಾರತದಲ್ಲಿ ನಿಧಾನವಾಗಿ ಬೇರು ಬಿಡಲು ಪ್ರಯತ್ನಿಸುತ್ತಿವೆ. ವಿಶ್ವಸಂಸ್ಥೆಯ ವರದಿಗಳ ಪ್ರಕಾರ, ಭಾರತದ ಅನೇಕ ಸ್ಥಳಗಳಲ್ಲಿ, ವಿಶೇಷವಾಗಿ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಐಸಿಸ್‌ಗೆ ಸಂಬಂಧಿಸಿದ ಭಯೋತ್ಪಾದಕ ಕೃತ್ಯಗಳು ಬೆಳಕಿಗೆ ಬಂದಿವೆ. ಶಿಕ್ಷಿತ ಯುವಕರನ್ನು ಗುರಿಯಾಗಿಸಿಕೊಂಡು ಅವರ ಸಿದ್ಧಾಂತವನ್ನು ಬಳಸಿಕೊಂಡು ಅವರನ್ನು ಜಿಹಾದ್ ನ ಹಾದಿಗೆ ಎಳೆಯಲಾಗುತ್ತಿದೆ. ಇದರ ಹಿಂದೆ ಕೇವಲ ಹಿಂಸಾಚಾರ ಮಾತ್ರವಲ್ಲ, ಭಾರತದಲ್ಲಿ ‘ಖಿಲಾಫತ್’ ಸ್ಥಾಪಿಸುವ ದುಷ್ಟ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ ಹಿಂದೂಗಳು ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯಕ. ನಾವು ಜಾತ್ಯತೀತ ರಾಷ್ಟ್ರದಲ್ಲಿ ಸುರಕ್ಷಿತವಾಗಿದ್ದೇವೆಯೇ? ಅದಕ್ಕಾಗಿ ಛತ್ರಪತಿ ಶಿವಾಜಿ ಮಹಾರಾಜರ ಪ್ರೇರಣೆಯಿಂದ ಸ್ಥಾಪಿತವಾದ ಹಿಂದವೀ ಸ್ವರಾಜ್ಯದ ಹೆಜ್ಜೆಗಳನ್ನು ಅನುಸರಿಸಿ, ಈಗ ಭಾರತವನ್ನು ಮತ್ತೊಮ್ಮೆ ಸನಾತನ ರಾಷ್ಟ್ರ, ಹಿಂದೂ ರಾಷ್ಟ್ರ, ರಾಮರಾಜ್ಯವನ್ನಾಗಿ ಮಾಡಲು ಸಿದ್ಧರಾಗಬೇಕಾಗಿದೆ.
ಏಕೆಂದರೆ ಇದು ಹಿಂದೂಗಳ ಅಸ್ತಿತ್ವದ, ಸನಾತನ ಸಂಸ್ಕೃತಿಯ ಪುನರುತ್ಥಾನದ ಹೋರಾಟವಾಗಿದೆ. ‘ಗಝ್ವಾ-ಎ-ಹಿಂದ್’ಗೆ ‘ಸನಾತನ ರಾಷ್ಟ್ರ’ ಒಂದೇ ಉತ್ತರ, ಇದನ್ನು ಹಿಂದೂಗಳ ಮನಸ್ಸಿನಲ್ಲಿ ಅಚ್ಚೊತ್ತಬೇಕಾಗಿದೆ.

ಭಯೋತ್ಪಾದನೆಗೆ ಧರ್ಮವಿದೆ ಎಂಬ ಅನುಭವ !

ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಹೇಡಿತನದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಕಲಂ 370 ರದ್ದುಪಡಿಸಿದ ನಂತರವೂ ಭಯೋತ್ಪಾದಕ ದಾಳಿಗಳು ಮುಂದುವರೆದಿವೆ. ಇಂದು ಮತ್ತೆ ಕಾಶ್ಮೀರದಲ್ಲಿ ಹಿಂದೂಗಳನ್ನು ಕೊಲ್ಲಲಾಯಿತು, ಅವರ ಜಾತಿಯನ್ನು ಕೇಳಲಿಲ್ಲ, ಅವರು ಹಿಂದೂಗಳೇ ಎಂದು ಮಾತ್ರ ಕೇಳಿದರು! 26 ಹಿಂದೂಗಳು ತಮ್ಮ ಪ್ರಾಣವನ್ನು ತೆತ್ತು ಭಯೋತ್ಪಾದನೆಗೆ ಧರ್ಮವಿದೆ ಎಂದು ಸಾಬೀತಾಗಿದೆ. ಮುಂಬಯಿನಲ್ಲಿ 1992-93 ರ ಗಲಭೆಯ ಸಮಯದಲ್ಲಿ ‘ರಾಧಾಬಾಯಿ ಚಾಳ್’ ಎಂಬ ಘಟನೆ ನಗರವನ್ನು ಬೆಚ್ಚಿಬೀಳಿಸಿತ್ತು.
ಈ ಚಾಳ್ ಮುಂಬಯಿನ ಜೋಗೇಶ್ವರಿ ಪ್ರದೇಶದಲ್ಲಿದೆ. 1993 ರ ಜನವರಿ ತಿಂಗಳಲ್ಲಿ, ಈ ಚಾಳಿನಲ್ಲಿ 6 ಹಿಂದೂ ನಾಗರಿಕರನ್ನು ಜೀವಂತವಾಗಿ ಸುಟ್ಟುಹಾಕಲಾಗಿತ್ತು. ಈ ಘಟನೆಯಲ್ಲಿ ದಾಳಿಕೋರರು ಧರ್ಮವನ್ನು ಗುರುತಿಸಿ ಹಿಂದೂಗಳನ್ನು ಗುರಿಯಾಗಿಸಿಕೊಂಡಿದ್ದರು. ಇಂತಹ ಅನೇಕ ಘಟನೆಗಳು ನಿರ್ದಿಷ್ಟ ಧರ್ಮದಿಂದ ಹಿಂದೂಗಳ ಮೇಲೆ ನಡೆದ ದೌರ್ಜನ್ಯಕ್ಕೆ ಸಾಕ್ಷಿಯಾಗಿವೆ. ಇಂದು ಪಹಲ್ಗಾಮ್‌ನಲ್ಲಿ ಏನು ನಡೆಯಿತೋ, ಅದೇ ಮುರ್ಷಿದಾಬಾದ್‌ನಲ್ಲಿ ನಡೆಯುತ್ತಿದೆ; ಸನಾತನ ಕ್ಷೇತ್ರಗಳು, ಹಬ್ಬಗಳು, ದೇವಾಲಯಗಳು, ಮಹಿಳೆಯರು ಮತ್ತು ಸಂಪೂರ್ಣ ಹಿಂದೂ ಸಮಾಜದ ಮೇಲೆ, ಹಾಗೂ ಪ್ರಪಂಚದಾದ್ಯಂತ ಇದೇ ರೀತಿಯ ಹಿಂಸೆ ಮತ್ತು ನರಮೇಧ ನಡೆಯುತ್ತಿದೆ. ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯ ಹೊಣೆಯನ್ನು ‘ದಿ ರೆಸಿಸ್ಟೆನ್ಸ್ ಫೋರ್ಸ್’ (ಟಿಆರ್‌ಎಫ್) ಎಂಬ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದೆ. 2047 ರ ವೇಳೆಗೆ ಭಾರತವನ್ನು ಗಝ್ವಾ-ಎ-ಹಿಂದ್ ಆಗಿ ಪರಿವರ್ತಿಸುವ ದೊಡ್ಡ ಷಡ್ಯಂತ್ರವನ್ನು ‘ಐಎಸ್‌ಐ’ ಮತ್ತು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಸಂಘಟನೆಗಳು ರೂಪಿಸಿವೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಬಹಿರಂಗಪಡಿಸಿದೆ.

ಭಯೋತ್ಪಾದಕರಿಗೆ ಭಾರತದಲ್ಲಿ ‘ಗಝ್ವಾ-ಎ-ಹಿಂದ್’ ತರಬೇಕಾಗಿದೆ, ಐಸಿಸ್, ಪಿಎಫ್‌ಐ ಮತ್ತು ಅಫ್ಘಾನಿಸ್ತಾನದ ISIS-K ಸಂಘಟನೆಗಳು ಭಾರತವನ್ನು ಗಝ್ವಾ-ಎ-ಹಿಂದ್ ಆಗಿ ಪರಿವರ್ತಿಸಲು ಷಡ್ಯಂತ್ರ ರೂಪಿಸಿವೆ. ISIS-K ಕಾಶ್ಮೀರದಲ್ಲಿ ‘ಸ್ಲೀಪರ್ ಸೆಲ್‌’ ಗಳಾಗಿ ಸಕ್ರಿಯವಾಗಿದೆ, ಹಾಗೂ ಸಾಮಾಜಿಕ ಮಾಧ್ಯಮಗಳ ಪ್ರಚಾರದ ಮೂಲಕ ಭಾರತದ ಯುವಕರನ್ನು ಈ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಕೇರಳ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಮತಾಂಧ ಗುಂಪುಗಳಿಗೆ ಸಂಬಂಧಿಸಿದ ‘ಸ್ಲೀಪರ್ ಸೆಲ್‌’ಗಳ ಅಪಾಯವಿದೆ. ಆದ್ದರಿಂದ ಭಾರತವನ್ನು ಈ ಧಾರ್ಮಿಕ ಮತಾಂಧತೆಯಿಂದ ಮುಕ್ತಗೊಳಿಸಲು ಸನಾತನ ರಾಷ್ಟ್ರದ ಸ್ಥಾಪನೆ ಅನಿವಾರ್ಯವಾಗಿದೆ.

ಇಸ್ಲಾಮಿಕ್ ಸ್ಟೇಟ್‌ನ ರಹಸ್ಯ ತಂತ್ರ!

ಇಸ್ಲಾಮಿಕ್ ಸ್ಟೇಟ್ (ISIS) ಎಂಬ ಭಯೋತ್ಪಾದಕ ಸಂಘಟನೆಯು ಇರಾಕ್-ಸಿರಿಯಾದಲ್ಲಿ ಅತ್ಯಂತ ಕ್ರೂರ ಕೃತ್ಯಗಳಿಗೆ ಕುಖ್ಯಾತವಾಗಿದೆ. 1990 ರಲ್ಲಿಯೇ ಕಾಶ್ಮೀರದಲ್ಲಿ “ನಿಜಾಮ್-ಎ-ಮುಸ್ತಫಾ” ಅಂದರೆ ಇಸ್ಲಾಮಿಕ್ ಸ್ಟೇಟ್‌ನ ಪ್ರಾರಂಭವಾಗಿತ್ತು. ಇಂದಿಗೂ ISIS ನ ಅಪಾಯವು ಹಾಗೆಯೇ ಇದೆ – 2024 ರಲ್ಲಿ ಮಾಸ್ಕೋದಲ್ಲಿ ಮತ್ತು 2025 ರಲ್ಲಿ ನ್ಯೂ ಆರ್ಲಿಯನ್ಸ್‌ನಲ್ಲಿ ಪ್ರೇರಿತ ದಾಳಿಗಳು ನಡೆದಿವೆ.
ಅವರ ಭೌಗೋಳಿಕ ನಿಯಂತ್ರಣವು ಕೊನೆಗೊಂಡಿದ್ದರೂ, ಅವರ ರಹಸ್ಯ ಕೋಶಗಳು, ಸಿದ್ಧಾಂತ ಮತ್ತು ಪ್ರೇರಣೆಯಿಂದ ನಡೆಯುವ ದಾಳಿಗಳು ಜಾಗತಿಕ ಭದ್ರತೆ ಮತ್ತು ಭಾರತದ ಸಾಮಾಜಿಕ ಶಾಂತಿಗೆ ಗಂಭೀರ ಅಪಾಯವನ್ನುಂಟುಮಾಡುತ್ತಿವೆ. ಅವರು ತಮ್ಮ ತಂತ್ರವನ್ನು ಬದಲಾಯಿಸಿದ್ದಾರೆ, ನೇರ ಯುದ್ಧದ ಬದಲು ರಹಸ್ಯ ದಾಳಿ, ಸೈದ್ಧಾಂತಿಕ ಪ್ರಚಾರ ಮತ್ತು ಸ್ಥಳೀಯ ಗುಂಪುಗಳಿಗೆ ಪ್ರೇರಣೆ ನೀಡುವುದು ಈಗ ಅವರ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ.

ಹಿಂದೂಗಳು ಸುರಕ್ಷಿತವಾಗಿದ್ದಾರೆಯೇ?

ಐಸಿಸ್ ಹೊರತುಪಡಿಸಿ ಭಾರತಕ್ಕೆ ಅಪಾಯವನ್ನುಂಟುಮಾಡಬಲ್ಲ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಇಂಡಿಯನ್ ಮುಜಾಹಿದ್ದೀನ್, ಅಲ್-ಖೈದಾ ಇನ್ ಇಂಡಿಯನ್ ಸಬ್‌ಕಾಂಟಿನೆಂಟ್, ಸ್ಥಳೀಯ ಇಸ್ಲಾಮಿಕ್ ಕಟ್ಟರ್ ಗುಂಪುಗಳು (ಕೇರಳ, ಬಂಗಾಳ, ತಮಿಳುನಾಡಿನಲ್ಲಿ), ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ ಈ 8 ಪ್ರಮುಖ ಭಯೋತ್ಪಾದಕ ಸಂಘಟನೆಗಳು ಹಾಗೂ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರು ಭಾರತದ ಭದ್ರತೆ ಮತ್ತು ಕಾನೂನು-ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ. ಅಹಿಂದೂಗಳ ಹೆಚ್ಚುತ್ತಿರುವ ಜನಸಂಖ್ಯೆಯು ದೇಶ ಮತ್ತು ಹಿಂದೂ ಧರ್ಮಕ್ಕೆ ಅಪಾಯದ ಗಂಟೆಯಾಗಿದೆ. ಇದರ ಹೊರತಾಗಿ ಕಳೆದ ವರ್ಷದಲ್ಲಿ ಹಿಂದೂಗಳು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದ ಅನೇಕ ಘಟನೆಗಳು ನಡೆದಿವೆ. ಮುಸ್ಲಿಂ ಬಹುಸಂಖ್ಯಾತ ಮುರ್ಷಿದಾಬಾದ್‌ನಲ್ಲಿ ವಕ್ಫ್ ಸುಧಾರಣಾ ಕಾಯ್ದೆಯ ವಿರುದ್ಧ ಮತಾಂಧರು ನಡೆಸುತ್ತಿದ್ದ ಪ್ರತಿಭಟನೆಯ ಸಮಯದಲ್ಲಿ, ಅವರು ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಸಿದರು. ಅನೇಕ ಹಿಂದೂಗಳ ಮನೆಗಳು, ಅಂಗಡಿಗಳನ್ನು ಲೂಟಿ ಮಾಡಲಾಯಿತು ಮತ್ತು ಅವುಗಳನ್ನು ಸುಟ್ಟುಹಾಕಲಾಯಿತು. ಇದರಿಂದ ಭಯಭೀತರಾದ 400 ಕ್ಕೂ ಹೆಚ್ಚು ಹಿಂದೂಗಳು ಅಲ್ಲಿಂದ ಪಲಾಯನ ಮಾಡಿದ್ದಾರೆ. ಬಂಗಾಳದಲ್ಲಿ ನಡೆದ ಹಿಂಸಾಚಾರದಲ್ಲಿ ಮುರ್ಷಿದಾಬಾದ್, ಮಾಲ್ಡಾ, ನಾಡಿಯಾ, ದಕ್ಷಿಣ 24 ಪರಗಣ ಜಿಲ್ಲೆಗಳು ಅಶಾಂತವಾಗಿವೆ. ಬಂಗಾಳ, ಬಿಹಾರ, ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಮತಾಂಧರು ನಡೆಸಿದ ಹಿಂಸಾಚಾರವು ಈಗ ನಿಧಾನವಾಗಿ ಭಾರತದ ಇತರ ರಾಜ್ಯಗಳಿಗೂ ಹರಡುತ್ತಿದೆ. ದೇಶದ ಜಿಹಾದಿ ಗುಂಪುಗಳು, ಸ್ಲೀಪರ್ ಸೆಲ್‌ಗಳು ಮತ್ತು ಅವರನ್ನು ಬೆಂಬಲಿಸುವ ಮತಾಂಧರು ಭಾರತಕ್ಕೆ ದೊಡ್ಡ ಸವಾಲಾಗಿದ್ದಾರೆ.

ಸನಾತನ ರಾಷ್ಟ್ರ ಮಾತ್ರ ಎಲ್ಲರನ್ನೂ ರಕ್ಷಿಸಬಲ್ಲದು!

ಕಳೆದ ಸಾವಿರಾರು ವರ್ಷಗಳಿಂದ ಮತಾಂಧರು ಭಗವಾ ಭಾರತವನ್ನು ಹಸಿರು ಮಾಡುವ ದಾರಿ ಕಾಯುತ್ತಿದ್ದಾರೆ. ಹಿಂದಿನ ಕಾಲದ ಜಿಹಾದಿ ಆಕ್ರಮಣಕಾರರು ಕೇವಲ ಭಾರತದ ಸಂಪತ್ತನ್ನು ಲೂಟಿ ಮಾಡಲಿಲ್ಲ, ಆದರೆ ಈ ಭೂಮಿಯಿಂದ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ಮತ್ತು ಹಿಂದೂಗಳನ್ನು ನಾಶಮಾಡಿ ಈ ದೇಶದ ಮೇಲೆ ಹಸಿರು ಧ್ವಜವನ್ನು ಹಾರಿಸುವ ಕನಸು ಕಂಡಿದ್ದರು. ಆ ಕಾಲದಲ್ಲಿ ಹಿಂದೂಗಳು ತೋರಿದ ಶೌರ್ಯದಿಂದ ಅವರ ಈ ಕನಸು ಎಂದಿಗೂ ನನಸಾಗಲಿಲ್ಲ. ಈಗ ಅದೇ ಕನಸನ್ನು ಹೊತ್ತು ಜಗತ್ತಿನಾದ್ಯಂತದ ಜಿಹಾದಿಗಳು, ಭಯೋತ್ಪಾದಕರು ಮತ್ತು ಮತಾಂಧರು ಭಾರತ ಮತ್ತು ಹಿಂದೂಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಪಲಾಯನ ಈಗ ನಮ್ಮ, ಹಿಂದೂಗಳ ಪ್ರವೃತ್ತಿಯಾಗಿದೆ, ಏಕೆಂದರೆ ನಾವು ಹಿಂದೂಗಳು ಇತಿಹಾಸದಿಂದ ಏನನ್ನೂ ಕಲಿಯಬಾರದೆಂದು ನಿರ್ಧರಿಸಿದ್ದೇವೆ. ಇಂದು ದೇಶದ ಮುಂದೆ ಇರುವ ಐಸಿಸ್‌ನಂತಹ ಜಿಹಾದಿ ಭಯೋತ್ಪಾದನೆಯ ಬಿಕ್ಕಟ್ಟು ಮತ್ತು ಅವರನ್ನು ಬೆಂಬಲಿಸುವವರನ್ನು ನೋಡಿದರೆ, ಮುಂದೆ ಜಾತ್ಯತೀತ ರಾಷ್ಟ್ರವೋ ಅಥವಾ ಸನಾತನ ರಾಷ್ಟ್ರವೋ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ, ಬದಲಾಗಿ ಸನಾತನ ರಾಷ್ಟ್ರವೋ ಅಥವಾ ಇಸ್ಲಾಮಿಕ್ ಸ್ಟೇಟೋ ಎಂಬ ಪ್ರಶ್ನೆ ಉದ್ಭವಿಸಲಿದೆ. ಅಂತಹ ಸಮಯದಲ್ಲಿ ಜಾತ್ಯತೀತರಾದವರು ಧರ್ಮ ಅಥವಾ ಅಧರ್ಮದ ಪರವಾಗಿ ನಿಲ್ಲಲೇಬೇಕಾಗುತ್ತದೆ. ಆ ಸಮಯದಲ್ಲಿ ಕೇವಲ ಸನಾತನ ರಾಷ್ಟ್ರ ಮಾತ್ರ ಎಲ್ಲರನ್ನೂ ರಕ್ಷಿಸಬಲ್ಲದು. ಛತ್ರಪತಿ ಶಿವಾಜಿ ಮಹಾರಾಜರು 5 ಇಸ್ಲಾಮಿಕ್ ಸಾಮ್ರಾಜ್ಯಗಳನ್ನು ಧೂಳೀಪಟ ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ನಮ್ಮ ದೇಶದ ಮೇಲೆ ಧರ್ಮಪ್ರೇಮಿ ಮತ್ತು ರಾಷ್ಟ್ರಪ್ರೇಮಿಗಳ ಆಳ್ವಿಕೆ ಬಂದಾಗ ಮಾತ್ರ ನಮ್ಮ ದೇವರು, ಧರ್ಮ, ಸಂಸ್ಕೃತಿ, ಇತಿಹಾಸ, ಭಾಷೆ, ಮಕ್ಕಳು ಮತ್ತು ಮಹಿಳೆಯರು ನಿಜವಾದ ಅರ್ಥದಲ್ಲಿ ರಕ್ಷಣೆ ಮತ್ತು ಪಾಲನೆಯನ್ನು ಪಡೆಯುತ್ತಾರೆ. ನಮ್ಮ ರಾಜ್ಯವಾದರೆ, ನಮ್ಮ ಕೈಯಲ್ಲಿ ಅಧಿಕಾರವಿದ್ದರೆ ಮಾತ್ರ ಸ್ವಧರ್ಮವನ್ನು ರಕ್ಷಿಸಲು ಮತ್ತು ಸಂವರ್ಧಿಸಲು ಸಾಧ್ಯ, ಇದು ಅನುಭವದಿಂದ ಸಿದ್ಧವಾದ ಸತ್ಯವನ್ನು ಶಿವಾಜಿ ಮಹಾರಾಜರು ಗುರುತಿಸಿದ್ದರು. ಧರ್ಮಾಚರಣೆಯ ಮತ್ತು ಸತ್ವಗುಣ ಪ್ರಧಾನ ಜನಪ್ರತಿನಿಧಿಗಳು ಮತ್ತು ಅವರ ಸೇವಕರು ಧರ್ಮಾಧಿಷ್ಠಿತ ಅಂದರೆ ಆದರ್ಶ, ಸರ್ವ ಗುಣಗಳಿಂದ ಕೂಡಿದ ಆದರ್ಶ ವ್ಯವಸ್ಥೆಯನ್ನು ನಿರ್ಮಿಸಬಹುದು. ಇದೇ ಧರ್ಮಾಚರಣೆಯ ಜನಪ್ರತಿನಿಧಿಗಳ ಧರ್ಮಾಚರಣೆಯ ಪ್ರಜೆಗಳ ಧರ್ಮನಿಷ್ಠ ಸನಾತನ ರಾಷ್ಟ್ರವಾಗಿರುತ್ತದೆ! ಭವ್ಯ, ವ್ಯಾಪಕ ಮತ್ತು ತೇಜೋಪುಂಜವಾಗಿರುವ ಸನಾತನ ರಾಷ್ಟ್ರದ ಮುಂದೆ ‘ಗಝ್ವಾ-ಎ-ಹಿಂದ್’ ನಿಲ್ಲಲು ಸಾಧ್ಯವಿಲ್ಲ.

ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಿಂದ
ರಾಮರಾಜ್ಯದ, ಅಂದರೆ ಭವಿಷ್ಯದ ಸನಾತನ ರಾಷ್ಟ್ರದ ಪ್ರಾರಂಭ !
ಭೂಮಿಯ ಮೇಲೆ ಶಾಂತಿಯುತ ಜೀವನ ನಡೆಸಲು ಹಿಂಸಾಚಾರದ ಅಗತ್ಯವಿಲ್ಲ, ಸಹಿಷ್ಣುತೆಯ ಅಗತ್ಯವಿದೆ. ಸನಾತನ ಹಿಂದೂ ಧರ್ಮವು ಸಹಿಷ್ಣುತೆಯಂತಹ ಉನ್ನತ ಮೌಲ್ಯಗಳನ್ನು ಪೋಷಿಸುವ ಬೋಧನೆಯನ್ನು ನೀಡುತ್ತದೆ. ಆದ್ದರಿಂದ ಅದು ಜಗತ್ತಿಗೆ ಕಲ್ಯಾಣಕಾರಿಯಾಗಿದೆ. ಹಿಂದೂ ಧರ್ಮ ಆಧಾರಿತ ರಾಜ್ಯ ಪದ್ಧತಿಯನ್ನು ಜಗತ್ತಿನಾದ್ಯಂತದ ರಾಷ್ಟ್ರಗಳು ಆಚರಿಸಿದರೆ ಹಿಂಸಾತ್ಮಕ ಪ್ರವೃತ್ತಿ ನಾಶವಾಗುತ್ತದೆ. ಭಾರತವು ‘ಗಝ್ವಾ-ಎ-ಹಿಂದ್’ ಆಗುವುದಕ್ಕಿಂತ ಮುಂಚಿತವಾಗಿ ಹಿಂದೂಗಳು ‘ಸನಾತನ ರಾಷ್ಟ್ರ’ವನ್ನು ಸ್ಥಾಪಿಸಲು ಬದ್ಧರಾಗಬೇಕು ! ಹಿಂದೂಗಳ ಮನಸ್ಸು ಮತ್ತು ಹೃದಯದಲ್ಲಿ ‘ಸನಾತನ’ದ ಧ್ವಜದ ಛಾಪು ಮೂಡಿಸಿರುವ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಅಠವಲೆಯವರು ಸಮಾಜವನ್ನು ಲೋಕಕಲ್ಯಾಣಕಾರಿ ಸನಾತನ ರಾಷ್ಟ್ರದ ಕಡೆಗೆ ಕರೆದೊಯ್ಯುತ್ತಿದ್ದಾರೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪಿತರಾದ ಪ್ರಭು ಶ್ರೀರಾಮರು ಒಂದು ರೀತಿಯಲ್ಲಿ ತನ್ನ ರಾಮರಾಜ್ಯ ಅಂದರೆ ಸನಾತನ ರಾಷ್ಟ್ರ ಸ್ಥಾಪನೆಯ ಅಭಿಯಾನಕ್ಕೆ ಅಡಿಪಾಯ ಹಾಕಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಿಂದ ಸೂಕ್ಷ್ಮ ರೂಪದಲ್ಲಿ ರಾಮರಾಜ್ಯದ, ಅಂದರೆ ಭವಿಷ್ಯದ ಸನಾತನ ರಾಷ್ಟ್ರದ ಪ್ರಾರಂಭವಾಗಿದೆ.

‘ಗಝ್ವಾ-ಎ-ಹಿಂದ್’ ನಂತಹ ಆಲೋಚನೆಗಳ ವಿರುದ್ಧ ನಾವು ಧರ್ಮಾಭಿಮಾನ, ಒಗ್ಗಟ್ಟು ಮತ್ತು ಸನಾತನ ಮೌಲ್ಯಗಳ ಜ್ಯೋತಿಯನ್ನು ಕೈಯಲ್ಲಿ ಹಿಡಿಯಬೇಕಾಗಿದೆ. ‘ಗಝ್ವಾ-ಎ-ಹಿಂದ್’ ನಂತಹ ವಿಧ್ವಂಸಕ ಪ್ರವೃತ್ತಿಗಳನ್ನು ನಾಶಮಾಡಬೇಕಾದರೆ, ಸಮಾಜ ಹಿತ, ನ್ಯಾಯ ಮತ್ತು ಧರ್ಮನಿಷ್ಠೆಯ ಆಧಾರದ ಮೇಲೆ ಛತ್ರಪತಿ ಶಿವಾಜಿ ಮಹಾರಾಜರ ಸ್ವರಾಜ್ಯ ಸಂಕಲ್ಪನೆಯಿಂದ ಪ್ರೇರಣೆ ಪಡೆದ ‘ಸನಾತನ ರಾಷ್ಟ್ರ’ವನ್ನು ನಿರ್ಮಿಸಬೇಕಾಗುತ್ತದೆ. ಅದಕ್ಕಾಗಿ ನಾವೆಲ್ಲರೂ ಒಟ್ಟಾಗಿ ‘ಸನಾತನ ರಾಷ್ಟ್ರ’ದ ಶಂಖನಾದ ಮಾಡಲು ಬದ್ಧರಾಗೋಣ!

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ