
ವಿಜಯಪುರ/ ಮುದ್ದೇಬಿಹಾಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಹಾಳ ಈ ಶಾಲೆಯಲ್ಲಿ ಮಾತೋಶ್ರೀ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಾಂತಗೌಡ ಮಾಡಗಿ ಹಾಗೂ ಮುಖ್ಯ ಅತಿಥಿಗಳಾಗಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಯಮನಪ್ಪ ಹಣಮಂತಪ್ಪ ಮಾದರ ವೇದಮೂರ್ತಿಗಳಾದ ಗುರುಲಿಂಗಯ್ಯ ಸಂಗಯ್ಯ ಹಿರೇಮಠ ಈರಣ್ಣ ರುದ್ರಪ್ಪ ಮಾಡಗಿ ಬಸಲಿಂಗಪ್ಪ ರುದ್ರಪ್ಪ ನರಸಣಗಿ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಶಿವಾನಂದ ಸಂಗಣ್ಣ ಮಾಡಗಿ ಪ್ರತೀಕ ರಾಮನಗೌಡ ಚಿತ್ತಾಪುರ ಯಮನಪ್ಪ ಚಲವಾದಿ ಮತ್ತು ಶಾಲಾ ಮುಖ್ಯ ಗುರುಗಳಾದ ಶ್ರೀ ಸಂಗಮೇಶ ನವಲಿ ಹಾಗೂ ಅತಿಥಿ ಶಿಕ್ಷಕಿಯರಾದ ಕಾಶಿಬಾಯಿ ಹಾದಿಮನಿ ಶಾಲಾ ಮುದ್ದು ಮಕ್ಕಳು ಉಪಸ್ಥಿತರಿದ್ದರು. ಮಕ್ಕಳಿಗೆಲ್ಲಾ ಸಿಹಿಯನ್ನು ಎಸ್‌ಡಿಎಂಸಿ ಅಧ್ಯಕ್ಷರು ವಿತರಿಸಿದರು ಎಲ್ಲಾ ಮಕ್ಕಳಿಗೂ ಪೆನ್ಸಿಲನ್ನು ಈರಣ್ಣ ರುದ್ರಪ್ಪ ಮಾಡಗಿ ವಿತರಿಸಿದರು. ಮುಖ್ಯ ಗುರುಗಳಾದ ಶ್ರೀ ಸಂಗಮೇಶ ಶಾಂತಪ್ಪ ನವಲಿ ಮಾತನಾಡಿ ಹೇಮರೆಡ್ಡಿ ಮಲ್ಲಮ್ಮನವರು ಮಮತೆಯ ಸಾಕಾರ ಮೂರ್ತಿ ಎಂದು ಹೇಳಿದರು. ಶ್ರೀಮತಿ ಕಾಶಿಬಾಯಿ ಹಾದಿಮನಿ ನಿರೂಪಿಸಿದರು ಶ್ರೀ ಸಂಗಮೇಶ ಶಾಂತಪ್ಪ ನವಲಿ ಸ್ವಾಗತಿಸಿದರು ಕುಮಾರಿ ಸ್ವಪ್ನ ಹಾದಿಮನಿ ಪ್ರಾರ್ಥಿಸಿದರು ಶ್ರೀ ಸಂಗಮೇಶ ಶಾಂತಪ್ಪ ನವಲಿ ವಂದಿಸಿದರು.
- ಕರುನಾಡ ಕಂದ
