
ಅವೈಜ್ಞಾನಿಕ ರಸ್ತೆ ನಿರ್ಮಾಣ; ಚರಂಡಿ ನಿರ್ಮಾಣ ಮಾಡುವದು ಮರೆತ ಅಭಿವೃದ್ದಿ ಅಧಿಕಾರಿಗಳು.
ಯಾದಗಿರಿ/ಗುರುಮಠಕಲ್ : ಪುರಸಭೆ ಸದಸ್ಯರ ಚುನಾವಣೆ ಇನ್ನೂ ಕೆಲವೇ ತಿಂಗಳುಗಳು ಉಳಿದಿವೆ, ಪಟ್ಟಣದಲ್ಲಿ ಅಭಿವೃದ್ಧಿ ಪರ ಕೆಲಸಗಳು ಹಗಲಿರುಳು ನಡೆಯುತ್ತಿವೆ.
ಒಂದು ಕಡೆ ಪಟ್ಟಣದಿಂದ ನೆರೆ ತೆಲಂಗಾಣದ ನಾರಾಯಣಪೇಟೆ ಹೋಗುವ ಮುಖ್ಯ ರಸ್ತೆ ನಿರ್ಮಾಣ ಜರುಗುತ್ತಿದ್ದು, ಇದೇ ಸಮಯದಲ್ಲಿ ನಿರ್ಮಿತಿ ಕೇಂದ್ರದಿಂದ ಬಡವಣೆಗಳಲ್ಲಿ ರಸ್ತೆಗಳ ನಿರ್ಮಾಣವಾಗುತ್ತಿದು ನಾಗರಿಕರಿಗೆ ಸಂಚಾರಿಸಲು ಕಷ್ಟವಾಗುತ್ತಿದ್ದು ವಾಹನ ಸವಾರರ ಗೋಳು ಕೇಳತೀರದು.
ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದು ಚರಂಡಿ ದುರಸ್ಥಿ ಮಾಡದ ಪರಿಣಾಮವಾಗಿ ಬೀದಿ ಬದಿಯಿರುವ ಅಂಗಡಿಯೊಳಗೆ ಹಾಗೂ ಮನೆಗಳಿಗೆ ಮಳೆ ಬಂದಾಗ ಚರಂಡಿ ನೀರು ಒಳ ಹೊಕ್ಕು ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ – ಶ್ರೀಕಾಂತ್ ತಲಾರಿ ಅಂಬೇಡ್ಕರ್ ಯುವ ಸೇನೆ ಗುರುಮಠಕಲ ತಾಲೂಕಾಧ್ಯಕ್ಷರು.
ರಸ್ತೆ ಮೇಲೆ ರಸ್ತೆ ಪ್ರತಿ ಬಾರಿ ಹಾಕುವದರಿಂದ ರಸ್ತೆಯ ಅಕ್ಕ ಪಕ್ಕದ ಹಳೆ ಚರಂಡಿ ದುರಸ್ಥಿ ಮಾಡದೆ ಇರುವದರಿಂದ ಖುದ್ದಾಗಿ ತಾವೆ ಚರಂಡಿ ದುರಸ್ಥಿ ನಿರ್ಮಾಣ ಮಾಡಿಕೊಳ್ಳುತ್ತಿರುವ ವ್ಯಾಪಾರಿಗಳ ಸ್ಥಿತಿ ಹೇಳತಿರದು – ತಿರುಮಲೇಶ್ ತರಕಾರಿ ವ್ಯಾಪಾರಸ್ಥರು.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದ ಹಾಗಾಗಿದೆ, ಮುಂದಾಲೋಚನೆ ಇಲ್ಲದೆ ಹಳೆ ರಸ್ತೆ ತೆಗೆದು ಚರಂಡಿ ದುರಸ್ಥಿ ಮಾಡಿ ಹೊಸ ರಸ್ತೆ ನಿರ್ಮಾಣ ಮಾಡಿದ್ದರೆ ವ್ಯಾಪಾರಸ್ಥರಿಗೆ ತೊಂದರೆ ಆಗುತ್ತಿರಲಿಲ್ಲ – ಸಂಜೀವ ಕುಮಾರ್ ಚಂದಾಪುರ್ , ಹಿರಿಯ ಕಾಂಗ್ರೆಸ್ ಮುಖಂಡರು
ಮಳೆ ಬಂದರೆ ಸಾಕು ನಮಗೆ ನೀರು ಎಲ್ಲಿ ಒಳ ನುಗ್ಗುತ್ತದೆ ಎಂದು ಭಯದ ವಾತಾವರಣ ಸೃಷ್ಟಿಯಾಗಿದೆ – ಚಂದ್ರಕಾಂತ್ ಸುಬ್ದಿ ವ್ಯಾಪಾರಸ್ಥರು.
ವ್ಯಾಪಾರಸ್ಥರಿಗೆ ಪರವಾನಿಗೆ ತೆಗೆದು ಕೊಳ್ಳಲು ಪುರಸಭೆ ತೋರಿಸುವ ಉತ್ಸಾಹ ಸಮಸ್ಯೆ ಪರಿಹರಿಸಲು ತೋರಿಸಿದಾಗ ಮಾತ್ರ ಇನ್ನೂ ಮುಂದೆ ಈ ರೀತಿ ಆಗುವದಿಲ್ಲ – ರವೀಂದ್ರರೆಡ್ಡಿ ಪೋತುಲು ಭಾಜಪ ಯುವ ಮುಖಂಡರು.
ವರದಿ: ಜಗದೀಶ್ ಕುಮಾರ್ ಭೂಮಾ
