
ವಿಜಯನಗರ ಜಿಲ್ಲೆ ಕೊಟ್ಟೂರು ಪೊಲೀಸ್ ರವರ ಕಾರ್ಯಾಚರಣೆ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿತನಿಂದ ಅಂದಾಜು 100000/- ರೂಪಾಯಿ ಬೆಲೆ ಬಾಳುವ ಒಟ್ಟು 3 ಬೈಕ್ ಗಳ ಜಪ್ತಿ.
ದಿ. 7 -5 -25 ರಂದು ರಾತ್ರಿ 8.15 ಗಂಟೆಗೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಗುನ್ನೇ ನಂಬರ್ 13 /2025 ಬಿ .ಎನ್. ಎಸ್ ರೀತ್ಯಾ ಪ್ರಕರಣದಲ್ಲಿ ತನಿಖೆ ಕೈಗೊಂಡು, ಈ ಬಗ್ಗೆ ಆರೋಪಿತರ ಹಾಗೂ ಮಾಲುಪತ್ತೆಗಾಗಿ ಶ್ರೀ ಮಲ್ಲೇಶ್ ದೊಡ್ಡಮನಿ ಡಿ.ವೈ.ಎಸ್ಪಿ. ಕೂಡ್ಲಿಗಿ ರವರ ಮಾರ್ಗದರ್ಶನದಲ್ಲಿ ಶ್ರೀ ವೆಂಕಟಸ್ವಾಮಿ. ಟಿ ಸಿ .ಪಿ .ಐ ಕೊಟ್ಟೂರು ವೃತ್ತ ರವರ ನೇತೃತ್ವದಲ್ಲಿ ಶ್ರೀಮತಿ ಗೀತಾಂಜಲಿ ಶಿಂಧೆ .ಪಿ.ಎಸ್.ಐ (ಕಾ , ಸು) ಕೊಟ್ಟೂರು ಪೊಲೀಸ್ ಠಾಣಾ ಸಿಬ್ಬಂದಿಯವರಾದ ಶ್ರೀ ಬಸವರಾಜ ಹೆಚ್ . ಸಿಪಿಸಿ -. ಶ್ರೀ ವೀರೇಶ್ ಸಿಪಿಸಿ-೧೬೬, ಶ್ರೀ ಶಶಿಧರ ಸಿಪಿಸಿ-494, ನಾಗಪ್ಪ ಯು . ಹೆಚ್.ಸಿ -256, ಶ್ರೀ ಯರಿಸ್ವಾಮಿ ಪಿಸಿ -211 ಇವರ ನೇತೃತ್ವದಲ್ಲಿ ತಂಡ ರಚಿಸಿದ್ದು, ಸದರಿ ತಂಡದವರ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸಿ ಪ್ರಕರಣದ ಆರೋಪಿ ಪತ್ತೆ ಕಾರ್ಯದಲ್ಲಿ ಕಾರ್ಯನಿರತರಾಗಿ ಆರೋಪಿ ಕೆ .ಹನುಮಂತ ತಂದೆ ತಿಂದಪ್ಪ 23 ವರ್ಷ, ಕೋವಾರ ಜನಾಂಗ ಗಾರೆ ಕೆಲಸ ವಾಸ -ಉಜ್ಜನಿ ಹೊಸ ಫ್ಲಾಟ್ ಉಜ್ಜಿನಿ ಗ್ರಾಮ ಕೊಟ್ಟೂರು ತಾಲೂಕು, ಈತನನ್ನು ದಿನಾಂಕ 09-05-2025 ರಂದು ಬೆಳಿಗ್ಗೆ 11-45 ರಂದು ಕೊಟ್ಟೂರು ಪಟ್ಟಣದ ಶ್ರೀ ಮರುಳಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ ವಶಕ್ಕೆ ಪಡೆದು ವಿಚಾರಣೆ ಒಳಪಡಿಸಲಾಗಿದೆ.
ಆರೋಪಿತನಿಂದ ಅಂದಾಜು ರೂ. 1 ಲಕ್ಷ ಬೆಲೆಬಾಳುವ ಹೀರೋ ಸ್ಪ್ಲೆಂಡರ್ ಪ್ಲಸ್ ಕಂಪನಿಯ 3 ಮೋಟಾರ್ ಸೈಕಲ್ ಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.
ಈ ಪತ್ಯ ಕಾರ್ಯಚರಣೆಗೆ ಮಾನ್ಯ ಶ್ರೀಹರಿಬಾಬು ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ವರದಿಗಾರರು – ಚಂದ್ರಗೌಡ
