ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಹತ್ತು ವಿದ್ಯಾರ್ಥಿಗಳು ಜೆ.ಇ.ಇ ಮೇನ್ಸ್ ಪರೀಕ್ಷೆಯಿಂದ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದು ಉತ್ತಮ ಸಾಧನೆಗೈದಿದ್ದಾರೆ,
ವಿದ್ಯಾರ್ಥಿಗಳಾದ ಜೀವನ್ ಎಸ್. ಭಾಸ್ಕರ್ ಆರ್. ಜಯಲಕ್ಷ್ಮಿ ಪಿ, ಜೆ.ಆರ್ ಕೀರ್ತನ, ಜೆ.ಆರ್ ಕಿರಣ, ದಿನುಮೌರ್ಯ ವೈ.ಬಿ, ಅಜಯ್ ವಿ, ಹಂಸ ಪ್ರತಿಭಾ, ಚಂದನ ಎಂ, ಚಂದನ್ ಬಿ ಎಸ್, ಜೆ.ಇ.ಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದು, ಇವರನ್ನು ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯವರಾದ ಡಾ.ಎಸ್ ದತ್ತೇಶ್ ಕುಮಾರ್, ಅಧ್ಯಕ್ಷರಾದ ಎಸ್ ನಾಗರಾಜು, ವಿಶೇಷಾಧಿಕಾರಿ ಡಾ. ಆರ್ ನಾಗಭೂಷಣ್, ಪ್ರಾಂಶುಪಾಲರಾದ ಡಿ. ಕೃಷ್ಣಗೌಡ ಹಾಗೂ ಬೋಧಕ / ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.
ವರದಿ :ಉಸ್ಮಾನ್ ಖಾನ್
