ಬಳ್ಳಾರಿ/ ಕಂಪ್ಲಿ : ಆಂಧ್ರ ಮತ್ತು ತೆಲಂಗಾಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಒಳಮೀಸಲಾತಿ ನೀಡಿದ್ದು, ಆದರೆ, ರಾಜ್ಯ ಸರ್ಕಾರ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದ್ದು, ಮುಂದಿನ ದಿನದಲ್ಲಿ ಸರ್ಕಾರಕ್ಕೆ ತಕ್ಕಪಾಠವನ್ನು ಮಾದಿಗರು ಕಲಿಸಲಿದ್ದಾರೆ ಎಂದು ಕ್ರಾಂತಿಕಾರಿ ಪಾದಯಾತ್ರೆ ಹೋರಾಟದ ರಾಜ್ಯ ಸಂಚಾಲಕ ಬಿ.ಆರ್.ಭಾಸ್ಕರ್ ಪ್ರಸಾದ್ ಹೇಳಿದರು.
ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ನಡೆದ ಒಳಮೀಸಲಾತಿಗಾಗಿ ಕ್ರಾಂತಿಕಾರಿ ರಥಯಾತ್ರೆಯಲ್ಲಿ ಮಾತನಾಡಿ, ಸಮುದಾಯದ ಯುವಕರ, ಮಕ್ಕಳ ಭವಿಷ್ಯಕ್ಕೆ ಅತಿ ಮುಖ್ಯವಾಗಿದೆ. ಇದರಲ್ಲಿ ಪಕ್ಷ ಮುಖ್ಯವಾಗುದಿಲ್ಲ. ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ಆದೇಶ ಬಂದ ನಂತರ ಆಂಧ್ರ, ತೆಲಂಗಾಣದಲ್ಲಿ ಒಳಮೀಸಲಾತಿ ಕಲ್ಪಿಸಲಾಗಿದೆ. ಆದರೆ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನಿರ್ಲಕ್ಷ ಧೋರಣೆಗೆ ಮೀಸಲಾತಿ ದೊರಕದಂತಾಗಿದೆ. ಸಿಎಂ ಮಾತಿಗೆ ಮುಟ್ಟಿಕೊಳ್ಳುತ್ತಿಲ್ಲ. ಏಪ್ರಿಲ್ 5 ರಂದು ಬಾಬು ಜಗಜೀವನರಾಮ್ ಜಯಂತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಒಳಮೀಸಲಾತಿ ಜಾರಿ ಮಾಡದೇ ಬಡ್ತಿ ಹಾಗೂ ನೇಮಕಾತಿ ಮಾಡುವುದಿಲ್ಲ ಎಂದು ಹೇಳಿದ್ದರು ಆದರೆ ಇವತ್ತಿಗೆ 25 ದಿನಗಳಲ್ಲಿ ಬಡ್ತಿ ನೇಮಕಾತಿಗಳು ನಡೆಯುತ್ತಿವೆ ಸಿಎಂ ತಮ್ಮ ಮಾತು ತಪ್ಪಿದ್ದಾರೆ, ಈ ಮೂಲಕ ಮಾದಿಗ ಸಮಾಜಕ್ಕೆ ಅಪಮಾನ ಮತ್ತು ವಂಚನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಯೋಗದವರಿಗೆ ಕೇಳಿದರೆ ಇದು ನಮ್ಮ ಕೆಲಸವಲ್ಲ ಸರ್ಕಾರದ ಕೆಲಸ, ಸಿಎಂ ಅವರಿಗೆ ಕೇಳಿದರೆ ಇದು ಆಯೋಗದ ಕೆಲಸ ನಮ್ಮದು ಏನು ಇಲ್ಲ ಎಂದು ಹಾರಿಕೆ ಹಾಗೂ ದ್ವಂದ್ವ ಹೇಳಿಕೆಗಳು ನೀಡಿದ್ದಾರೆ. ಆದ್ದರಿಂದ ಕ್ರಾಂತಿಕಾರಿ ರಥಯಾತ್ರೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತಿದ್ದು, ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸದಸ್ಯ ವೀರಾಂಜಿನೀಯಲು, ಮಾದಿಗ ಸಮಾಜದ ಮುಖಂಡರಾದ ಕೆ.ಪ್ರಭಾಕರ, ನಾಗರಾಜ, ಹೆಚ್. ಶ್ರೀನಿವಾಸಲು, ಹೆಚ್.ಕುಮಾರಸ್ವಾಮಿ, ಸಣಾಪುರ ಹನುಮಂತ, ದೇವಸಮುದ್ರ ಹೆಚ್.ಗುಂಡಪ್ಪ, ಆರ್.ಆಂಜನೇಯ, ಎನ್.ಗಂಗಣ್ಣ, ಸಣಾಪುರ ಮರಿಯಣ್ಣ ಶೇಖರ ಎನ್.ಬುಜ್ಜಿಕುಮಾರ, ಲಕ್ಷ್ಮೀಪತಿ, ಮರಿಯಪ್ಪ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
