
ಬೆಂಗಳೂರು: ಮೇ 17 ಪ್ರೆಸ್ಟೀಜ್ ಜಿಂದಾಲ್ ಸಿಟಿ ಮಂಜುನಾಥ್ ನಗರ ಬಸವ ಬಳಗದ ವತಿಯಿಂದ ಅದ್ದೂರಿಯಾಗಿ ಮಹಾತ್ಮಾ ಬಸವೇಶ್ವರರ 892 ನೇಯ ಜಯಂತಿ ಮತ್ತು ಭಾರತೀಯ ಸೇನೆ ಪಾಪಿ ಪಾಕಿಸ್ಥಾನದ ಮೇಲೆ 26 ಹೆಣ್ಣು ಮಕ್ಕಳ ಪರವಾಗಿ ತೆಗೆದುಕೊಂಡ ದಿಟ್ಟ ಹೆಜ್ಜೆಯ ಆಪರೇಷನ್ ಸಿಂಧೂರ ವಿಜಯೋತ್ಸವ ಆಚರಣೆ ಮಾಡಲಾಯಿತು.
ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್ಮೆಂಟ್ ಬಸವ ಬಳಗದ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ಸಹ ಮಹಾತ್ಮಾ ಬಸವೇಶ್ವರರ ಜಯಂತಿ ಪೂರ್ವ ನಿಯೋಜನೆಯಂತೆ ಅಚ್ಚುಕಟ್ಟಾಗಿ ಜರುಗಿತು.
ಬಸವ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೇಲೀಮಠ ಕ್ಷೇತ್ರದ ಮಠಾಧ್ಯಕ್ಷರಾದ ಶ್ರೀ ಶಿವರುದ್ರ ಸ್ವಾಮೀಜಿ ಅವರು ವಹಿಸಿ ಬಸವೇಶ್ವರರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಬಸವ ಜಯಂತಿಗೆ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಅಹಿಂಸೆ, ಸಮತೆ ಮತ್ತು ಸತ್ಯದ ಮಾರ್ಗದರ್ಶಕ ಜಗದ್ಗುರು ಬಸವಣ್ಣನವರ ಜ್ಞಾನ, ಭಕ್ತಿ ಮತ್ತು ಕ್ರಾಂತಿ ನಮಗೆ ಸದಾ ಪ್ರೇರಣೆ ಆಗಲಿ,
ಬಸವಜಯಂತಿಯ ಈ ಪವಿತ್ರ ದಿನದಂದು ನಿಜ ಜೀವನ ಮೌಲ್ಯಗಳನ್ನು ನೆನೆದು, ನೆಲೆಗೆ ತರುವ ಪ್ರತಿಜ್ಞೆ ಮಾಡೋಣ ಎಂದು ಆಶೀರ್ವಚನ ನೀಡಿದರು.
ಬಸವ ಬಳಗದ ಮಕ್ಕಳು ಶರಣರ ಉಡಿಗೆಯಲ್ಲಿ ಅನುಭವ ಮಂಟಪದ ಶರಣರ ಸಮಗಮ ಮತ್ತೊಮ್ಮೆ ಕಣ್ಣ ಮುಂದೆ ಬರೋ ತರಹ ತೋರಿಸಿ ಕೊಟ್ಟರು.
ಸಾಯಂಕಾಲ ಜಗಜ್ಯೋತಿ ಬಸವೇಶ್ವರ ಮತ್ತು ಆಪರೇಷನ್ ಸಿಂಧೂರ ವಿಜಯೋತ್ಸವದ ಭವ್ಯ ಮೆರವಣಿಗೆ ಜರುಗಿತು.
ಬಸವ ರಥೋತ್ಸವ ಮತ್ತು ಆಪರೇಷನ್ ಸಿಂಧೂರ ವಿಜಯೋತ್ಸವ ಕಾಶ್ಮೀರದ ಪೆಹಲ್ಗಾಮನಲ್ಲಿ 26 ಸಹೋದರಿಯರ ಸಿಂಧೂರ ಅಳಿಸಿದ ಪಾಕಿಸ್ಥಾನಕ್ಕೆ ಆಪರೇಶನ್ ಸಿಂಧೂರ ಮೂಲಕ 9 ಉಗ್ರರ ತಾಣ ಗಳನ್ನು ಉಡೀಸ್ ಮಾಡಿದ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿ ಸಿಂಧೂರ ವಿಜಯೋತ್ಸವ ಆಚರಿಸಲಾಯಿತು.
ಡೊಳ್ಳು ಕುಣಿತ, ನಂದಿ ಧ್ವಜ, ಕೋಲಾಟ, ವೀರಗಾಸೆ, ಸಂಗೀತ ವಿಶೇಷವಾಗಿ ವೀರಗಾಸೆ ಎಲ್ಲರ ಗಮನ ಸೆಳೆಯಿತು, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಜರುಗಿತು.
ಮಹಾ ಪ್ರಸಾದಕ್ಕಾಗಿ ಉತ್ತರ ಕರ್ನಾಟಕ ಶೈಲಿಯ ಊಟದ ವ್ಯವಸ್ಥೆ ಕಾರ್ಯಕ್ರಮದ ಕೊನೆಯಲ್ಲಿ ಆಯೋಜಿಸಲಾಗಿತ್ತು, ಇನ್ನೂ
ಪಿಜೆಸಿ ಸಮುದಾಯದ ಎಲ್ಲಾ ಬಂಧುಗಳು ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸುಕರಾಗಿ ಭಾಗವಹಿಸಿದರು.
ಕಾರ್ಯಕ್ರಮಕ್ಕೆ ಮಳೆ ಮಧ್ಯದಲ್ಲಿ ತೊಂದರೆ ಕೊಟ್ಟರೂ ಲೆಕ್ಕಿಸದೆ ಪ್ರೆಸ್ಟೀಜ್ ಜಿಂದಾಲ್ ಸಿಟಿ ಬಸವ ಬಳಗದ ಎಲ್ಲಾ ಕುಟುಂಬ ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಿ ತಮ್ಮ ಧರ್ಮ ಹಾಗೂ ದೇಶ ಭಕ್ತಿಯನ್ನು ಇನ್ನೊಬ್ಬರಿಗೆ ಮಾದರಿಯಾಗುವ ರೀತಿಯಲ್ಲಿ ತೋರಿಸಿಕೊಟ್ಟರು.
ವರದಿ: ಜಗದೀಶ್ ಕುಮಾರ್ ಭೂಮಾ
