‘ಸನಾತನ ರಾಷ್ಟ್ರ’ಕ್ಕಾಗಿ ‘ರಾಮರಾಜ್ಯ ಸಂಕಲ್ಪ ಜಪಯಜ್ಞ’ದ ಮೂಲಕ ಒಂದು ಕೋಟಿ ರಾಮ ನಾಮ ಜಪ !
ಜಪಯಜ್ಞದಲ್ಲಿ ಕರ್ನಾಟಕದ 5 ಸಾವಿರಕ್ಕೂ ಅಧಿಕ ಸಾಧಕರು ಮತ್ತು ಧರ್ಮಪ್ರೇಮಿ ಹಿಂದೂಗಳ ಸಹಭಾಗ !
ಗೋವಾ – ಭಾರತದಲ್ಲಿ ‘ರಾಮರಾಜ್ಯ’ ಕೇವಲ ಒಂದು ಧಾರ್ಮಿಕ ಆದರ್ಶವಲ್ಲ, ಬದಲಾಗಿ ಇದನ್ನು ಸಂಸ್ಕೃತಿ, ನೀತಿ ಮತ್ತು ನ್ಯಾಯ ಆಧಾರಿತ ಆಡಳಿತ ವ್ಯವಸ್ಥೆಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ಮಹಾನ್ ಉದ್ದೇಶದ ಕಡೆಗೆ ಒಂದು ಮಹತ್ವದ ಹೆಜ್ಜೆಯಿಡುತ್ತಾ ಫರ್ಮಾಗುಡಿ-ಫೊಂಡಾದಲ್ಲಿ ಸನಾತನ ಸಂಸ್ಥೆಯು ಆಯೋಜಿಸಿದ್ದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ‘ಸನಾತನ ರಾಷ್ಟ್ರ’ದ ಸ್ಥಾಪನೆಗಾಗಿ ‘ರಾಮರಾಜ್ಯ ಸಂಕಲ್ಪ ಜಪಯಜ್ಞ’ದ ಮೂಲಕ ಒಂದು ಕೋಟಿ ಬಾರಿ ‘ಶ್ರೀರಾಮ ನಾಮ’ದ ಜಪವನ್ನು ಮಾಡಲಾಯಿತು. ಈ ಜಪಯಜ್ಞದಿಂದ ಸಂಪೂರ್ಣ ವಾತಾವರಣವು ರಾಮಮಯವಾಗಿತ್ತು.
ಅಧರ್ಮವನ್ನು ವಿರೋಧಿಸಲು ಸಮಾಜವನ್ನು ಸಿದ್ಧಪಡಿಸಬೇಕಾಗಿದೆ ! – ಪ.ಪೂ. ಸ್ವಾಮಿ ಗೋವಿಂದ ದೇವಗಿರಿಜಿ ಮಹಾರಾಜ
ಸನಾತನ ಧರ್ಮದ ಪ್ರಚಾರದ ಕಾರ್ಯವು ಸಾಧನೆ, ದೇವರ ಆರಾಧನೆಯಾಗಿದೆ. ನಾವು ನಮ್ಮ ವ್ಯಕ್ತಿತ್ವವನ್ನು ಪಣಕ್ಕಿಟ್ಟು ಮತ್ತು ಸಂಘಟಿತರಾಗಿ ಪರಮಾತ್ಮನ ಸೇವೆಯಲ್ಲಿ ನಮ್ಮನ್ನು ಅರ್ಪಿಸಿಕೊಳ್ಳಬೇಕು. ಹಾಗಾದಾಗ ಸುವರ್ಣ ಕಾಲ ದೂರವಿಲ್ಲ. ‘‘ಸನಾತನ ಸಂಸ್ಥೆಯ ಸಂಪೂರ್ಣ ಕಾರ್ಯ ಆಧ್ಯಾತ್ಮಿಕತೆಯ ತಳಹದಿಯ ಮೇಲೆ ನಿಂತಿದೆ. ಭಾರತ ರಾಷ್ಟ್ರವನ್ನು ಒಂದೆಂದು ತಿಳಿದು ಕೆಲಸ ಮಾಡುತ್ತಿದ್ದಾರೆ. ಭಗವದ್ಗೀತೆಯು ಯುದ್ಧಭೂಮಿಯಲ್ಲಿ ಹೇಳಲ್ಪಟ್ಟ ಗ್ರಂಥ. ಸನಾತನ ಸಂಸ್ಥೆಯು ಈ ಗ್ರಂಥದಂತೆಯೇ ಆಧ್ಯಾತ್ಮದಿಂದ ಯುದ್ಧದವರೆಗೆ ಜಾಗೃತಿ ಮೂಡಿಸಿದೆ. ನಾನು ಈ ಮಹೋತ್ಸವದಲ್ಲಿ ಯುದ್ಧಕಲೆಗಳ ಪ್ರದರ್ಶನವನ್ನು ನೋಡಿದೆ. ದೇಶದ ಎಲ್ಲಾ ಸಂತರು ತಮ್ಮ ಶಿಷ್ಯರಿಗೆ ಇದನ್ನು ಕಲಿಸಬೇಕು ಎಂದು ನಾನು ಭಾವಿಸುತ್ತೇನೆ.’’
ಜನಸಂಖ್ಯಾ ನಿಯಂತ್ರಣ ಕಾಯ್ದೆಯೇ ಅನೇಕ ಸಮಸ್ಯೆಗಳಿಗೆ ಉತ್ತರ! – ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ
ದೇಶದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ವಿಪರೀತವಾಗಿ ಹೆಚ್ಚಾಗುತ್ತಿದ್ದು, ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಪಸಂಖ್ಯಾತರ ಸಂಖ್ಯೆ ಕೋಟಿಗಟ್ಟಲೆ ಹೆಚ್ಚುತ್ತಿರುವಾಗ ಅವರನ್ನು ಅಲ್ಪಸಂಖ್ಯಾತರು ಎಂದು ಹೇಗೆ ಕರೆಯುವುದು? ಅಲ್ಪಸಂಖ್ಯಾತರಿಂದಲೇ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಹಿಂದೂಗಳು ಬಲಿಯಾಗುತ್ತಿದ್ದಾರೆ. ಅಕ್ರಮ ನುಸುಳುಕೋರರು ಸಿಂಗಾಪುರ, ಚೀನಾ, ಅರಬ್ ರಾಷ್ಟ್ರಗಳಿಗೆ ನುಸುಳದೆ ಭಾರತಕ್ಕೆ ಏಕೆ ಬರುತ್ತಾರೆ? ಏಕೆಂದರೆ ಕಾಂಗ್ರೆಸ್ ಮಾಡಿದ ಅನೇಕ ಕಾನೂನುಗಳಿಂದ ಅವರಿಗೆ ಕೇವಲ ಸೌಲಭ್ಯಗಳು ಮಾತ್ರವಲ್ಲ, ಕಾನೂನು ರಕ್ಷಣೆಯೂ ಸಿಗುತ್ತದೆ. ಆದ್ದರಿಂದ ಜನಸಂಖ್ಯಾ ನಿಯಂತ್ರಣ ಕಾಯ್ದೆಯೇ ಅನೇಕ ಸಮಸ್ಯೆಗಳಿಗೆ ಉತ್ತರ.
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಿಂದ ವಿಶ್ವರೂಪದ ದರ್ಶನ ನನಗೆ ಆಗಿದೆ ! – ಶ್ರೀ ಸುರೇಶ್ ಚವ್ಹಾಣಕೆ
ವರ್ಷ 2008 ರಲ್ಲಿ ಭಗವಾ ಭಯೋತ್ಪಾದನೆ, ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಬಂಧಿಸಿ ಅವರ ಮೇಲೆ ನಡೆಸಿದ ಅತ್ಯಾಚಾರ ಈ ರೀತಿಯಾಗಿ ಹಿಂದೂ ಧರ್ಮದ ಅಪಕೀರ್ತಿ ನಡೆಯುತ್ತಿರುವಾಗ ನಾನು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದೆ. ಆ ಸಮಯದಲ್ಲಿ ಅವರು ತಮ್ಮ ದಿವ್ಯದೃಷ್ಟಿಯಿಂದ ನೀಡಿದ ಮಾಹಿತಿಯ ಅನುಭವ ನನಗೆ ಇಂದಿಗೂ ಆಗುತ್ತಿದೆ. ಸನಾತನ ಸಂಸ್ಥೆಯು ನಿಜವಾದ ಅರ್ಥದಲ್ಲಿ ಧರ್ಮ ಮತ್ತು ಆಧ್ಯಾತ್ಮವನ್ನು ಪ್ರಚಾರ ಮಾಡುತ್ತಿದೆ. ಇದಕ್ಕಾಗಿಯೇ ಶಂಖನಾದ ಮಹೋತ್ಸವವನ್ನು ಆಯೋಜಿಸಲಾಗಿದೆ. ಈ ಮಹೋತ್ಸವದಿಂದ ನನಗೆ ವಿಶ್ವರೂಪದ ದರ್ಶನವಾಗುತ್ತಿದೆ.
ಆರ್ಟ್ ಆಫ್ ಲಿವಿಂಗ್ ನ ಶ್ರೀ ದರ್ಶಕ ಹತ್ತಿ ಇವರು ಮಾತನಾಡುತ್ತಾ ಕುಂಭಮೇಳಕ್ಕೆ 66 ಕೋಟಿ ಜನರು ಬಂದಿದ್ದರು. ಅವರು ಕೇವಲ ಸ್ನಾನಕ್ಕಾಗಿ ಬಂದಿರಲಿಲ್ಲ, ಬದಲಿಗೆ ಒಂದು ಸಿದ್ಧಾಂತದ ಮೇಲಿನ ಶ್ರದ್ಧೆಯಿಂದ ಬಂದಿದ್ದರು. ದೃಷ್ಟಿಯಿಟ್ಟು ಕೆಲಸ ಮಾಡಬೇಕು. ಸದ್ಯ ದೇಶ ಮತ್ತು ವಿದೇಶಗಳ ಹಿಂದೂಗಳನ್ನು ಗೊಂದಲಕ್ಕೀಡು ಮಾಡಲಾಗುತ್ತಿದೆ. ಆದ್ದರಿಂದ, ಅವರಿಗೆ ವೈಜ್ಞಾನಿಕ ಪರಿಭಾಷೆಯಲ್ಲಿ ಆಧ್ಯಾತ್ಮವನ್ನು ವಿವರಿಸುವ ಅವಶ್ಯಕತೆಯಿದೆ , ಈ ಕಾರ್ಯವನ್ನು ಸನಾತನ ಸಂಸ್ಥೆಯು ಮಾಡುತ್ತಿದೆ. ನಾವು ಸಂಪೂರ್ಣ ಜಗತ್ತನ್ನು ಸನಾತನವನ್ನಾಗಿಸೋಣ ಎಂದರು.
ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಮಾಜಿ ಆಯುಕ್ತರಾದ ಶ್ರೀ ನಂದಕುಮಾರ ಐಎಎಸ್, ನ್ಯಾಯವಾದಿ ಪ್ರಮಿಳಾ ನೇಸರ್ಗಿ, ಹಿರಿಯ ವಕೀಲರು, ಕರ್ನಾಟಕ ಉಚ್ಛ ನ್ಯಾಯಾಲಯ, ಯುವಾ ಬ್ರಿಗೇಡ್ನ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ, ರಾಷ್ಟ್ರ ರಕ್ಷಣಾ ಪಡೆಯ ಶ್ರೀ ಪುನೀತ್ ಕೆರೆಹಳ್ಳಿ, ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕರಾದ ಶ್ರೀ ಸಂತೋಷ್ ಕೆಂಚಾಂಬ, ಅರುಣ್ ಶ್ಯಾಮ್, ಹಿರಿಯ ವಕೀಲರು, ಅಯ್ಯಪ್ಪ ಸೇವಾ ಸಮಾಜಮ್ ನ ಅಧ್ಯಕ್ಷ ಎನ್ ಜಯರಾಮ ಅಡ್ಡಂಡ ಕಾರ್ಯಪ್ಪ, ನಿರ್ದೇಶಕರು, ರಂಗಾಯಣ ಮುಂತಾದ ಗಣ್ಯರು ಮತ್ತು ದೇಶ ವಿದೇಶಗಳ 2೦ ಸಾವಿರಕ್ಕೂ ಹೆಚ್ಚು ಹಿಂದೂಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಮತ್ತು ನೇರ ಪ್ರಸಾರಕ್ಕಾಗಿ ಭೇಟಿ ನೀಡಿ – SanatanRashtraShankhnad.in
- ಶ್ರೀ ಅಭಯ ವರ್ತಕ,
ರಾಜ್ಯ ವಕ್ತಾರರು , ಸನಾತನ ಸಂಸ್ಥೆ
(ಸಂಪರ್ಕ: 9987922222).
