ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಸುಕ್ಷೇತ್ರ ಕೊರವಿ ಗ್ರಾಮದ ಶ್ರೀ ಕೊರವಂಜೇಶ್ವರಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ನಿಮಿತ್ಯವಾಗಿ ಪುರಾಣ ಕಾರ್ಯಕ್ರಮವು ಜರುಗಲಿದೆ. ಆಧ್ಯಾತ್ಮಿಕ ಬೆಳವಣಿಗೆ, ಸಮುದಾಯ ನಿರ್ಮಾಣ ಮತ್ತು ಸಾಂಸ್ಕೃತಿಕ ಆಚರಣೆಗೆ ಪವಿತ್ರ ಸ್ಥಳವಾದ ಶ್ರೀ ಕೊರವಂಜೇಶ್ವರಿ ದೇವಸ್ಥಾನದ ಭವ್ಯ ಉದ್ಘಾಟನೆಗೆ ಎಲ್ಲರನ್ನೂ ಹೃತ್ಪೂರ್ವಕವಾಗಿ ಆಹ್ವಾನಿಸಲಾಗುತ್ತಿದೆ.
ಕಾರ್ಯಕ್ರಮದ ವಿವರಗಳು :
ದಿ 25-05-2025 ರಿಂದ 29-05-2025 ರವರಗೆ ಕೊರವಂಜೇಶ್ವರಿ ದೇವಿಯ ಪುರಾಣವು ಸಾಯಂಕಾಲ 7:00 ಗಂಟೆಗೆ ಪ್ರಾರಂಭವಾಗುತ್ತದೆ. ನಂತರ ಪ್ರಸಾದ ವ್ಯವಸ್ಥೆ ಇರುತ್ತದೆ. ದಿ. 28-05-2025 ರಿಂದ 30-05-2025 ಮುಂಜಾನೆ ದೇವಿಯ ಹೋಮ ಹವನವು ದೇವಸ್ಥಾನದಲ್ಲಿ ಪೂಜೆಯು ಜರುಗಲಿದೆ ಮತ್ತು ದಿ : 30 -05 -2025 ವಾರ ಶುಕ್ರವಾರ ರಂದು ಮಧ್ಯಾಹ್ನ 12:26 ಕ್ಕೆ ಮೂರ್ತಿ ಪ್ರಾಣಪ್ರತಿಷ್ಠೆ ಹಾಗೂ ಸಾಯಂಕಾಲ 6:00 ಗಂಟೆಗೆ ಶಿವಾಚಾರ್ಯ ರತ್ನ, ಧರ್ಮರತ್ನ, ಸದ್ಧರ್ಮ ಶಿಖಾಮಣಿ ಶ್ರೀ ಷ. ಬ್ರ. ಡಾ ಚನ್ನವೀರ ಶಿವಾಚಾರ್ಯರು ಸುಕ್ಷೇತ್ರ ಹಾರಕೂಡ ಪೂಜ್ಯರಿಂದ ಮೂರ್ತಿ ಪ್ರಾಣ ಪ್ರತಿಷ್ಠೆ ಹಾಗೂ ಕಳಸ ಪೂಜೆಯು ಜರುಗಲಿದೆ. ತದ ನಂತರ ಪ್ರಸಾದ ವ್ಯವಸ್ಥೆ ಇರುತ್ತದೆ. ದಿ: 30-05-2025 ರಂದು ಸಾಯಂಕಾಲ ಸಂಗೀತ ಕಾರ್ಯಕ್ರಮ ಜರಗಲಿದೆ. ಪುರಾಣಿಕರು ಶ್ರೀ ವೇದಮೂರ್ತಿ ಸೂರ್ಯಕಾಂತ್ ಶಾಸ್ತ್ರಿ ವಿಶ್ವನಾಥ್ ಮಠ ಧುತ್ತರಗಾಂವ್, ಗವಾಯಿಗಳು ಶ್ರೀ ಗುರು ಶಾಂತಯ್ಯ ಸ್ಥಾವರಮಠ ಭೂಸನೂರ, ತಬಲವಾದಕರು ಶ್ರೀ ವೀರಭದ್ರ ಸ್ವಾಮಿ ಸ್ಥಾವರಮಠ ಕಲಬುರಗಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಶ್ರೀ ಕೊರವಂಜೇಶ್ವರಿ ದೇವಸ್ಥಾನ ಟ್ರಸ್ಟ್ ಹಾಗೂ ಗ್ರಾಮಸ್ಥರು ಸ್ವಾಗತ ಕೋರುತ್ತಾ, ಸುತ್ತಮುತ್ತಲ ಗ್ರಾಮಸ್ಥರು ಭಕ್ತಿಯ ಪೂರಕವಾಗಿ ಈ ಐದು ದಿವಸಗಳ ಕಾಲ ನಡೆಯುವಂತಹ ಕಾರ್ಯಕ್ರಮದಲ್ಲಿ ಎಲ್ಲರೂ ತಮ್ಮ ಮನ ಧನದಿಂದ ಭಾಗವಹಿಸಿ ದೇವಿಯ ಕೃಪ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ತಿಳಿಸಿದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್
