ಕೊಪ್ಪಳ / ಗಂಗಾವತಿ : ರೈತರೊಬ್ಬರ ಜಮೀನು ಪೋಡಿ ಮಾಡಲು ಸರ್ವೇಯರ್ ಒಬ್ಬರು 60 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ವೇಳೆ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದ ಪ್ರಕರಣ ನಡೆದಿದೆ.
ಕಾರಟಗಿ ತಾಲೂಕಿನ ವಿಜಯ್ ಚೌಹಾಣ್ ಎಂಬ ಸರ್ವೇಯರ್ ಒಬ್ಬರು ರೈತರ 6 ಎಕರೆ ಜಮೀನು ಪೋಡಿ ಮಾಡಲು ವಿನಾಃ ಕಾರಣ ವಿಳಂಬ ಮಾಡುತ್ತಾ ಕಾಲಹರಣ ಮಾಡುತ್ತಿದ್ದರು. ನಂತರ ಜಮೀನಿನ ಮಾಲೀಕರಾದ ರೈತರು ಸರ್ವೇ ಅಧಿಕಾರಿ ಚೌಹಾಣ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ದಯವಿಟ್ಟು ಜಮೀನನ್ನು ಪೋಡಿ ಮಾಡಿಕೊಡಿ ಎಂದು ವಿನಂತಿಸಿದಾಗ ಸರ್ವೆ ಅಧಿಕಾರಿ ಚೌಹಾಣ್ 60 ಸಾವಿರ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ನೊಂದ ರೈತರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಚರಣೆಗೆ ಇಳಿದ ಲೋಕಾಯುಕ್ತ ತಂಡವು ಕಾರಟಗಿ ಸಮೀಪದ ಅರುಣೋದಯ ಕ್ಯಾಂಪಿನಲ್ಲಿ ರಾತ್ರಿ 9.00ರ ವೇಳೆ ಸರ್ವೇ ಅಧಿಕಾರಿ ಚೌಹಾಣ್ ಅವರನ್ನು 30 ಸಾವಿರ ನಗದು ಸಮೇತ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಚೌಹಾನ್ನನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ವಿಜಯ ಚೌಹಾಣ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಬಂಧನದ ವೇಳೆಯಲ್ಲಿ ಅಡ್ಡಿಪಡಿಸಿದ ಸ್ಥಳೀಯ ಗುಂಪೊಂದರ ವಿರುದ್ಧವೂ ಕೂಡ ಕರ್ತವ್ಯಕ್ಕೆ ಅಡ್ಡಿ ಕುರಿತಂತೆ ಪ್ರಕರಣಕ್ಕೆ ದಾಖಲಿಸುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಅಲ್ಲಿಯ ಹಲವರ ಮೇಲೆ ಎಫ್ಐಆರ್ ಆಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ವೇ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟು ಪೀಡುಸುತ್ತಿದ್ದವರಿಗೆ ಈ ಪ್ರಕರಣವು ಒಂದು ಪಾಠವಾದಂತಿದೆ.
ವರದಿ : ಜಿಲಾನಸಾಬ್ ಬಡಿಗೇರ್
