ಚಾಮರಾಜನಗರ/ ಸಂತೇಮರಹಳ್ಳಿ: ಕೊಳೇಗಾಲ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಾಲೋನಿಗಳ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಸರ್ಕಾರ ₹4.90 ಕೋಟಿ ಬಿಡುಗಡೆಗೊಳಿಸಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಸಮೀಪದ ಕಸ್ತೂರು ಗ್ರಾಮದ ಪರಿಶಿಷ್ಟ ಬಡಾವಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ₹25 ಲಕ್ಷ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘ಕ್ಷೇತ್ರ ವ್ಯಾಪ್ತಿಯ ಗ್ರಾಮಗಳು:
ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಗುರುತಿಸಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಕ್ರಮ ಎಂದರು. ಕೈಗೊಳ್ಳಲಾಗುವುದು’
‘ಗ್ರಾಮದ ರಸ್ತೆ ಸಮಸ್ಯೆ ಗ್ರಾಮಸ್ಥರು ಅನುದಾನ ಮಾಡಿದ್ದರು. ಅನುದಾನ ಬಡಾವಣೆಯಲ್ಲಿ ಉಂಟಾಗಿತ್ತು. ಅಭಿವೃದ್ಧಿಪಡಿಸಲು ನೀಡುವಂತೆ ಮನವಿ ಈ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಿ ಸಿಮೆಂಟ್ ಕಾಂಕ್ರಿಟ್ ರಸ್ತೆ ಹಾಗೂ
ಚರಂಡಿ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ಎಂದು ತಿಳಿಸಿದರು. ನಿರ್ವಹಿಸಬೇಕು’
ಗ್ರಾಮ ಪಂಚಾಯಿತಿ ಮಾದೇಗೌಡ, ಮಹದೇವಪ್ಪ, ಉಪಾಧ್ಯಕ್ಷ ಸದಸ್ಯರಾದ ರಾಜೇಶ್, ಚಾಮೂಲ್ ನಿರ್ದೇಶಕ ಕಮರವಾಡಿ ರೇವಣ್ಣ, ಮಹದೇವಪ್ರಸಾದ್, ಲೋಕೇಶ್, ಜಯಪ್ಪ, ಸ್ಟಾಲೀನ್, ಮಹದೇವಮ್ಮ, ಜಯಮ್ಮ, ಪುನೀತ್ ಬಾಲ ಪುಷ್ಟರಾಜು, ಗುರುಸ್ವಾಮಿ, ಬೆಲ್‌ರಾಜು, ಮೆಸಾಕ್, ದೊರೆಸ್ವಾಮಿ, ಶಿವನಂಜಪ್ಪ, ಎಂಜಿನಿಯರ್ ನಂದೀಶ್ ಸೇರಿದಂತೆ ಇತರರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್
