ಬಳ್ಳಾರಿ / ಕಂಪ್ಲಿ : ನಗರದ ಕಾಳಿಕಾ ಕಮ್ಮಠೇಶ್ವರ ದೇವಸ್ಥಾನ ಬಳಿಯ ವಿಶ್ವಕರ್ಮ ಭವನದಲ್ಲಿ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಡಿ.ವೌನೇಶ ಆಯ್ಕೆಗೊಂಡಿದ್ದಾರೆ.
ಐದು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನಲೆ ಡಿ.ಮೌನೇಶ ರವರು ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ ಎಂದು ಉಪ ಚುನಾವಣಾಧಿಕಾರಿ ಷಣ್ಮುಖಪ್ಪ ಚಿತ್ರಗಾರ ಘೋಷಿಸಿದರು.
ನಂತರ ಸದಸ್ಯ ಡಿ.ಮೌನೇಶ ಮಾತನಾಡಿ ಪ್ರತಿಯೊಬ್ಬರ ಸಹಕಾರದಿಂದ ರಾಜ್ಯ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆಗೊಂಡಿದ್ದು, ಈ ಸ್ಥಾನದೊಂದಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು ಎಲ್ಲರ ಪ್ರೀತಿ, ವಿಶ್ವಾಸದಂತೆ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು. ಪ್ರಾಮಾಣಿಕವಾಗಿ ಸೇವೆ ಮಾಡಲಾಗುವುದು,
ಪಂಚ ಕುಲಕಸುಬುಗಳಿಗೆ ಪ್ರತ್ಯೇಕ ವಿಶ್ವಕರ್ಮ ವಿಶ್ವವಿದ್ಯಾಲಯ ಬೇಡಿಕೆ ಈಡೇರಿಸುವಂತೆ ಮತ್ತು ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಉತ್ತರ ಕರ್ನಾಟಕದಲ್ಲಿ ವಿಶ್ವಕರ್ಮ ಸಮಾಜದವರು ಹಿಂದುಳಿದಿದ್ದು, ಅವರನ್ನು ಗುರುತಿಸಿ ಸರ್ಕಾರದ ವಿವಿಧ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ವಿಜಯನಗರ ಜಿಲ್ಲೆಗೆ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನ ಕಲ್ಪಿಸುವಂತೆ
ರಾಜ್ಯ ಸಮಿತಿಯವರಲ್ಲಿ ಮನವಿ ಮಾಡುವುದಾಗಿ ಹೇಳಿದರು.
ನಂತರ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ವೇಳೆ ಮಾಲಾರ್ಪಣೆಯೊಂದಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಡಿ. ರುದ್ರಪ್ಪ ಆಚಾರ್, ಉಪಾಧ್ಯಕ್ಷ ಎ. ಚಂದ್ರಶೇಖರ, ಮುಖಂಡರಾದ ರಾಮಚಂದ್ರ ಆಚಾರ್, ಕಾಳಾಚಾರ್, ಷಣ್ಮುಖ ಆಚಾರ್, ಗುರುಮೂರ್ತಿ ಆಚಾರ್, ನಾಗರಾಜ ಆಚಾರ್, ಪತ್ರಕರ್ತರ ತಾಲೂಕ ಅಧ್ಯಕ್ಷ ವೀರೇಶ, ಎಸ್.ಡಿ. ಬಸವರಾಜ, ಯು.ಎಂ. ವಿದ್ಯಾಶಂಕರ್, ವಿರುಪಾಕ್ಷಿ, ಎಸ್. ಶ್ಯಾಂಸುಂದರ ಸೇರಿದಂತೆ ಇತರರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
