ವಿಜಯನಗರ / ಕೂಡ್ಲಿಗಿ : ಹರಿದು ಬಿದ್ದ ವಿದ್ಯುತ್ ತಂತಿ ತಗುಲಿ 4 ಮೇಕೆಗಳು ಸಾವಿಗೀಡಾದ ಘಟನೆ ತಾಲೂಕಿನ ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನುಂಕನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಪಾಲಯ್ಯ ಎಂಬುವರಿಗೆ ಸೇರಿದ್ದ ಮೇಕೆಗಳು ಹೊಲಗಳಲ್ಲಿ ಮೇಯಿಸುವಾಗ ಏಕಾಏಕಿ ವಿದ್ಯುತ್ ತಂತಿ ಹರಿದು ಮೇಲೆ ಬಿದ್ದು ಮೇಕೆಗಳು ಸಾವನ್ನಪ್ಪಿವೆ. ಮೇಕಿಗಳು ವಿದ್ಯುತ್ ತಂತಿ ಕೆಳಗೆ ಮೇಯುತ್ತಿರುವಾಗ ಮಳೆ ಗಾಳಿಯ ರಭಸಕ್ಕೆ ತಂತಿ ಕಟ್ಟಾಗಿ ಬಿದ್ದಿದೆ. ಸಮೀಪದಲ್ಲೇ ಇದ್ದ ಪಾಲಯ್ಯ ಹಾಗೂ ಅವರ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಸಂಬಂಧಿಸಿದ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರದ ಪಾಲಯ್ಯ ಒತ್ತಾಯಿಸಿದರು. 40,000 ಬೆಲೆ ಬಾಳುವ ಮೇಕೆಗಳು ಎಂದು ಅಂದಾಜಿಸಲಾಗಿದೆ ಸ್ಥಳಕ್ಕೆ ಗುಡೆಕೋಟೆ ಪೊಲೀಸರು ಕೆಇಬಿ ಸೆಕ್ಷನ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವರದಿ : ಜಿಲಾನಸಾಬ್ ಬಡಿಗೇರ್
