ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿಯ ಗ್ರಾಮದ ನಾಗಲಿಂಗೇಶ್ವರ ಕ್ಯಾಂಪ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದ ಉದ್ಘಾಟನಾ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನೆರವೇರಿತು.
2022-2023ನೇ ಸಾಲಿನ “ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ”ವನ್ನು 7ನೇ ಮೈಲಿ ಕ್ಯಾಂಪ್ ಸಿ ಆರ್ ಸಿ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗಲಿಂಗೇಶ್ವರ ಕ್ಯಾಂಪ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶಿಕ್ಷಣ ಸಂಯೋಜಕರಾದ ಸಾವನ್ ಅವರು ಮಾತನಾಡಿ ಮಕ್ಕಳ ಕಲಿಕಾ ಮಟ್ಟವನ್ನು ಚೇತರಿಸಲು ಪ್ರತಿ ಕ್ಲಸ್ಟರ್ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ,ಭಾವೈಕ್ಯತೆ,ಸಹಬಾಳ್ವೆ, ಮನರಂಜನೆಯನ್ನು ಬೆಳಸುವಂತಹ ಕಾರ್ಯಕ್ರಮ, ಇದು ಕಲಿಕಾ ಚೇತರಿಕೆಗೆ ಪೂರಕವಾದಂತಹ ಕಾರ್ಯಕ್ರಮವಾಗಿದೆ.ಸಮುದಾಯದೊಂದಿಗೆ ಸಹಬಾಗಿತ್ವ ಹೊಂದಿದ ಕಾರ್ಯಕ್ರಮವಾಗಿದೆ, ನಾವುಗಳೆಲ್ಲರೂ ಇದರಲ್ಲಿ ಎಲ್ಲಾ ಮಕ್ಕಳು ಪಾಲ್ಗೊಳ್ಳುವಂತೆ ಮಾಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರಾದ ನಿಂಗಪ್ಪ ಭೋಗಾಪೂರ ಅವರು ವಹಿಸಿಕೊಂಡಿದ್ದರು. ಇದರ ಮುಖ್ಯ ಅತಿಥಿ ಸ್ಥಾನವನ್ನು ಶಿಕ್ಷಣ ಸಂಯೋಜಕರಾದ ಸಾವನ್, ತುರವಿಹಾಳ ವಲಯದ ಬಿಆರ್ ಪಿ ಪಂಪಾಪತಿ ಹಾಗೂ ಸಿಆರ್ ಪಿ ಸಂಗನಗೌಡ ಅವರು ವಹಿಸಿಕೊಂಡಿದ್ದರು ಅತಿಥಿಗಳಾಗಿ ಗ್ರಾಮ ಪಂಚಾಯತಿ ಸದಸ್ಯರಾದ ಮಲ್ಲಿಕಾರ್ಜುನ ಕ್ಯಾಡೇದ, ಅಮರೇಶ ನೆಕಡೆ,ಸಿದ್ದಪ್ಪ ಛಲುವಾದಿ, SDMC ಸದಸ್ಯರಾದ ಹುಲಿಗೇಶ ನೆಕೆಡೆ,ಸೂರ್ಯನಾಯಕ ನೆಕಡೆ,ರಮೇಶ ಹಾಗೂ ಸರ್ವ ಸದಸ್ಯರು,ಶಾಲೆಯ ಶಿಕ್ಷಕರಾದ ಮಹೇಶ,ಬಾಳಪ್ಪ,ನಿಂಗಪ್ಪ, ಅಯ್ಯಪ್ಪ ಹಾಗೂ ಊರಿನ ಹಿರಿಯರಾದ ವಿರುಪಾಕ್ಷಪ್ಪ ಹಾಗೂ ಪಾಲಕರು, ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಹಾಗೂ ಶಾಲೆಯ ಮುದ್ದು ಮಕ್ಕಳು ಉಪಸ್ಥಿತರಿದ್ದರು.