ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಹಾಗೂ ಸಂಜೆವಾಣಿ ಪತ್ರಿಕೆಯ ಸಂಪಾದಕ,ಮುದ್ರಕರ ಮೇಲೆ ಮಾನನಷ್ಟ ಮೊಕದ್ದಮೆ ಹಾಗೂ ರಾಜ್ಯಾಧ್ಯಂತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ಇವರುಗಳ ಮೇಲೆ FIR ದಾಖಲಿಸಲು ಹೋರಾಟಕ್ಕೆ ಕರೆ
ನರವಿಲ್ಲದ ನಾಲಿಗೆ ಹಾಗೂ ಆಚಾರವಿಲ್ಲದ ನಾಲಿಗೆಯ ನಿನ್ನ ನೀಚ ಬುದ್ದಿ ಬಿಡೋ ನಾಲಿಗೆ ಎಂಬ ಗಾದೆಯಂತೆ ಈ ಮೇಲಿನ ಪತ್ರಿಕೆ ಹೇಳಿಕೆ ಬರೆದಿರುವ ಬೀದರ ಸಂಜೆವಾಣಿ ದಿನ ಪತ್ರಿಕೆಯಲ್ಲಿ ಇದರ ಉದ್ದಾರಕ ಹಾಗೂ ಪತ್ರಕರ್ತರ ಉದ್ದರಕ ಮಹಾಶಯ ಬೀದರನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಿವಕುಮಾರ ಸ್ವಾಮಿ ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದರೂ ಮಂದಿ ತಟ್ಟೆಯ ನೊಣ ಎಣಿಸುವಂತೆ,kuwj ಯು 91 ವರ್ಷಗಳ ಇತಿಹಾಸವಿರುವ ಶ್ರೇಷ್ಟ ಎಂದು ಬೀಗುವ ಶಿವಕುಮಾರ ಸ್ವಾಮಿ ಈ ಹಿಂದೆ ರಾಜು ಲಕ್ಷಾಂತರ ರೂ.ಗಳ ಹಣಕಾಸಿನ ದುರುಪಯೋಗಕ್ಕೆ ಸಂಬಂಧಿಸಿದಂತ ಕೇಸ್ ಇಂದಿಗೂ ಹೈಕೋರ್ಟ್ ನಲ್ಲಿ ನಡೆಯುತ್ತಿರುವ ವಿಚಾರಕ್ಕೆ ಶ್ರೇಷ್ಟವೇ ನಿನ್ನ ಸಂಘ ರಾಜು ಜೊತೆಯಲ್ಲಿ ಅಧಿಕಾರ ಅನುಭವಿಸಿದವರು ಇಂದಿಗೂ ಪದಾಧಿಕಾರಿಗಳಾಗಿ ಮುಂದುವರೆದಿದ್ದರೂ,ಅಂದು ಅಷ್ಟು ದೊಡ್ಡ ಬ್ರಹ್ಮಾಂಡ ಹಗರಣ ನಿನ್ನ ಸಂಘದಲ್ಲಿ ನಡೆದಿದ್ದರೂ ಯಾಕೆ ನಿನ್ನನ್ನು ಯಾರೊಬ್ಬರೂ ಹೊರ ಹಾಕಲಿಲ್ಲ ಸ್ವಾಮಿ.ನಾನು ವೈಯಕ್ತಿಕವಾಗಿ ಕೇಸ್ ದಾಖಲಿಸಿ ಇಂದಿಗೂ ಜೀವಂತದೊಂದಿಗೆ ಹೈಕೋರ್ಟ್ ನಲ್ಲಿ ಕೇಸ್ ಮುಂದುವರೆದಿದೆ kuwj ಯ 7 ಸಾವಿರ ಕಾರ್ಯನಿರತ ಪತ್ರಕರ್ತರ ಬೆವರಿನ ಸದಸ್ಯತ್ವದ ಹಣ ವಾಪಸ್ಸು ಸಂಘಕ್ಕೆ ದಕ್ಕಲೇಬೇಕೆಂದು ಸಾವಿರಾರು ರೂಪಾಯಿಗಳನ್ನು ಇಂದಿಗೂ ನಾನು ವಕೀಲರಿಗೆ ಖರ್ಚು ಮಾಡುತ್ತಾ ಕೇಸ್ ಮುಂದುವರೆಸಿದ್ದೇನೆ. ಕಾನೂನು ಪ್ರಕ್ರಿಯೆ ನಿಧಾನವಾದರೂ ಸತ್ಯಕ್ಕೆ ಎಂದಿದ್ದರೂ ಜಯ ಎಂಬ ನಂಬುಗೆಯಲ್ಲಿ ಸಾಗಿದ್ದೇನೆ. kuwj ಯಲ್ಲಿ ರಾಜ್ಯ ಕಾರ್ಯದರ್ಶಿಯಾದಂತ ಸಂದರ್ಭದಲ್ಲಿ ಲೆಕ್ಕೆ ಪತ್ರ ಹಾಗೂ ಬ್ಯಾಂಕ್ ಸ್ಟೇಟ್ಮೆಂಟ್ ಲಿಖಿತ ಮೂಲಕ ಕೇಳಿದ್ದರೂ ಕೊಡದೇ ಇದ್ದದ್ದರಿಂದ ಬೇಸತ್ತು ಚುನಾವಣೆಗೆ ಸ್ಪರ್ಧಿಸಿ ರಾಜ್ಯದ ಯಾವೊಬ್ಬ ಪತ್ರಕರ್ತರಿಗೂ ಮತ ಯಾಚನೆ ನಾನು ಮಾಡದಿದ್ದರೂ ವೀರೋಚಿತ ಸೋಲು ಅದು ಎಷ್ಟರ ಮಟ್ಟಿಗೆ ಅಂದರೆ ನಾನು ಪಡೆದಂತ ಮತಗಳ ವಿವರವನ್ನು ಚುನಾವಣಾಧಿಕಾರಿಯಾಗಲಿ ಅಥವಾ ಅಧ್ಯಕ್ಷರಾಗಲಿ ಇಂದಿಗೂ ಪ್ರಕಟಿಸದೇ ಚಿದಂಬರ ರಹಸ್ಯವಾಗಿಟ್ಟಿದ್ದಾರೆ ಹಾಗೂ ವಿವರ ನೀಡುವುದಕ್ಕೂ ಇಂದಿಗೂ ಬೆವರೊಡೆಯುತ್ತಾರೆ,ಅಷ್ಟರ ಮಟ್ಟಿಗೆಯ ನನ್ನ ಉಪಾಧ್ಯಕ್ಷ ಚುನಾವಣೆಯ ಹೋರಾಟ. ಇಂದಿಗೂ ರಾಜು ರವರಿಂದ ಲಕ್ಷಾಂತರ ರೂ ಗಳ ಹಣಕಾಸಿನ ದುರುಪಯೋಗಕ್ಕೆ ಸಂಬಂಧಿಸಿದಂತೆ kuwj ಯು ಪ್ರಾಮಾಣಿಕ ಹೋರಾಟವಾಗಲಿ ಅಥವಾ ವಾಪಸ್ಸು ಸಂಘಕ್ಕೆ ತರುವ ಚಿಂತನೆ ನಿನ್ನನ್ನು ಸಮೇತವಾಗಿ ಯಾರೊಬ್ಬರೂ ಸಾಗಿಸದೇ,ಕಾನೂನು ರೀತಿಯಲ್ಲಿ ನೋಂದಣಿ ಯಾಗಿರುವ ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ನಕಲಿ ಅಂತ ಹೇಳುವುದಕ್ಕೆ ಒಬ್ಬ ಪತ್ರಕರ್ತನಾಗಿ ನಾಚಿಕೆ ಯಾಗುವುದಿಲ್ಲವೇ ನಮ್ಮ ಸಂಘಟನೆ ಅಸಲಿ ಎಂಬ ದಾಖಲೆಯನ್ನು ಇದರೊಂದಿಗೆ ನಿಮ್ಮ ಗಮನಕ್ಕೆ ತರುತ್ತಾ, ಒಂದು ವೇಳೆ ನಕಲಿ ಅಂತಾದಲ್ಲಿ ದಾಖಲೆ ಬಹಿರಂಗ ಗೊಳಿಸಲು ಸಿದ್ದ ನಿದ್ದಿಯಾ ಸ್ವಾಮಿ ಜೊತೆಗೆ ನಮ್ಮ ಸಂಘಟನೆಯ ಮೇಲೆ ಕಾನೂನು ಕ್ರಮ ಜರುಗಿಸುವ ತಾಕತ್ತು ನಿನಗಿದೆಯಾ ಶಿವಕುಮಾರ. ಮಾಧ್ಯಮ ಮಾನ್ಯಾತಾ ನಿಯಮಗಳನ್ನು ಮೀರಿ ಭೋಗಸ್ ಅಕ್ರಿಡೇಷನ್ ಪಡೆದಿರುವ ನಿಮ್ಮ ಸಂಘಟನೆ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನಯ್ಯ ಕುರಿತು ಅಸಲಿಯೋ ನಕಲಿಯೋ ಎಂಬುವುದರ ಕುರಿತು ವರದಿಯನ್ನು ನೀನು ಕಾರ್ಯನಿರ್ವಹಿಸುತ್ತಿರುವ ಸಂಜೆವಾಣಿಯಲ್ಲಿ ವಾಸ್ತವದ ವರದಿ ಮಾಡಿ ಶಹಬ್ಬಸ್ ಗಿರಿ ಪಡೆಯುವಂತನಾಗು ಸ್ವತಂತ್ರ ಪೂರ್ವದಿಂದಲೂ ಈ ನಾಡಿನ ಪತ್ರಕರ್ತರ ಶಕ್ತಿಯಾಗಿ ನಿಂತಿರುವ ಏಕೈಕ ಸಂಘಟನೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಮಾನವನ್ನು ನನ್ನ ಪ್ರಾಣ ಪಣಕ್ಕಿಟ್ಟು ಉಳಿಸುವ ಕೆಲಸ ಈ ಬಂಗ್ಲೆ ಮಲ್ಲಿಕಾರ್ಜುನ ರಿಂದ ಇಂದಿಗೂ ದಿಟ್ಟ ಹೋರಾಟ ಸಾಗಿದೆ ಅಂತ ನೆನಪಿಟ್ಟುಕೋ ಕಳೆದ ಚುನಾವಣೆಯಲ್ಲಿ ಕಾನೂನು ಬಾಹಿರವಾಗಿ ಸಾಗಿದ್ದು ಜೊತೆಗೆ ಭವಾನಿ ಸಿಂಗ್ ಠಾಕೂರ್ ರವರಿಗೆ ನಿಮ್ಮ ಭೈಲಾದಲ್ಲಿ ಸದಸ್ಯತ್ವ ಕೊಡುವುದಕ್ಕೆ ಅವಕಾಶವಿಲ್ಲದಾಗ್ಯೂ ರಾಜ್ಯದ ಉಪಾಧ್ಯಕ್ಷರಾಗಿ ಆಯ್ಕೆ ಯಾಗಿರುವ ಕುರಿತು ಪ್ರಸ್ತುತ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಕಳೆದ ಆರು ತಿಂಗಳಿನಿಂದ ಈ ಕುರಿತು ನನ್ನ ಹಾಗೂ kuwj ಮಧ್ಯ ನಡೆಯುತ್ತಿರುವ ಕಾನೂನು ಹೋರಾಟದ ಕುರಿತು ಯಾವೊಬ್ಬ ಸದಸ್ಯರಿಗಾದರೂ ಮಾಹಿತಿ ಇದೆಯಾ ಇಷ್ಟು ದೊಡ್ಡ ವಿಚಾರಗಳ ಬಗ್ಗೆ ನಿನ್ನ ಆಕ್ರೋಶ ತೋರಿಸುವುದನ್ನು ಬಿಟ್ಟು ಕಾನೂನು ಅಡಿಯಲ್ಲಿ ಸಾಗುತ್ತಿರುವ ನಮ್ಮ ಸಂಘಟನೆಯ ಸದಸ್ಯರುಗಳ ಮಧ್ಯ ಗೊಂದಲ ಸೃಷ್ಟಿಸಿ ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿರುವ ನಿನ್ನ ಮೇಲೆ ಹಾಗೂ ಸಂಜೆವಾಣಿ ಪತ್ರಿಕೆಯ ಸಂಪಾದಕರು, ಮುದ್ರಕರ ಮೇಲೆ ಮಾನನಷ್ಟ ಮೊಕ್ಕದ್ದಮೆ ದಾಖಲಿಸಲಿದ್ದೇನೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿಯಿಂದ ಹೋರಾಟಕ್ಕೆ ಕರೆ ರಾಜ್ಯಾಧ್ಯಂತ ವಿರುವ ನಮ್ಮ ಕಾನಿಪ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷರು,ತಾಲೂಕು ಅಧ್ಯಕ್ಷರು ಹಾಗೂ ಸದಸ್ಯರೆಲ್ಲರೂ ಕೂಡಿಕೊಂಡು ಸಂಘಟನೆಯ ಸದಸ್ಯರ ಮಧ್ಯ ಗೊಂದಲ ಮೂಡಿಸುವುದರ ಜೊತೆಗೆ ಸಂಘಟನೆ ಮಧ್ಯ ಅಶಾಂತಿ ವಾತಾವರಣ ನಿರ್ಮಿಸಲು ಹವಣಿಸುತ್ತಿರುವ ಬೀದರ್ ಜಿಲ್ಲಾ kuwj ಯ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರಸ್ವಾಮಿಯ ಮೇಲೆ FIR ದಾಖಲಿಸಲು ತಮ್ಮ ತಮ್ಮ ವ್ಯಾಪ್ತಿಯ ಜಿಲ್ಲಾಧಿಕಾರಿಗಳು,ಪೋಲಿಸ್ ವರಿಷ್ಟಾಧಿಕಾರಿಗಳು,ತಹಶೀಲ್ದಾರರು ಹಾಗೂ ಪೋಲಿಸ್ ಇನ್ಸ್ ಪೆಕ್ಟರುಗಳ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಗೃಹಮಂತ್ರಿಗಳಿಗೆ ತಲುಪುವವರೆಗೂ ಹೋರಾಟ ಸಾಗಲಿ ಹಾಗೂ ಈ ಕುರಿತು ವಿಸ್ಕೃತ ವಾಸ್ತವಾಂಶದ ವರದಿಗಳು ನಾಡಿನಾಧ್ಯಂತ ಪ್ರಸಾರವಾಗಿಲ್ಲಿ ನಾಡಿ ಜನತೆಗೆ ತಿಳಿಯುವಂತಾಗಲಿ ಎಂದು ಸಮಸ್ತ ನಾಡಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸದಸ್ಯರೆಲ್ಲರಲ್ಲೂ ವಿನಂತಿ ಈ ಕುರಿತು ನಿನ್ನೆ ಅಂದರೆ ದಿನಾಂಕ 19/01/2023 ರಂದು ಬೀದರ್ ಪೋಲಿಸ್ ವರಿಷ್ಟಾಧಿಕಾರಿಗಳಿಗೆ ನಮ್ಮ ಬೀದರ್ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಪವಾರ್ ರವರು ದೂರು ಸಲ್ಲಿಸಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ ಶಹಾಪುರ