ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕಾರುಣ್ಯ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮಗಳ ಮೂಲಕ ದಾಸೋಹ ದಿನ ಆಚರಣೆ

ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ವೀರಶ್ರೀ ಗುರುಕುಲ ಹಿರಿಯ ಪ್ರಾಥಮಿಕ ಶಾಲೆ ಇಂದಿರಾನಗರ, ಸೇವಾಸಿರಿ ಚಾರಿಟೇಬಲ್ ಟ್ರಸ್ಟ್(ರಿ), ಅಮರ ಸ್ವರ ಸಂಗಮ ಸಿಂಧನೂರು ಇವರುಗಳ ಸಹಭಾಗಿತ್ವದಲ್ಲಿ ತ್ರಿವಿಧ ದಾಸೋಹಿ ಮೂರ್ತಿಗಳಾದ ಸಿದ್ದಗಂಗಾ ಲಿಂಗಕ್ಯ ಶ್ರೀ ಶಿವಕುಮಾರ ಪುಣ್ಯ ಸ್ಮರಣೆ ಹಾಗೂ “ದಾಸೋಹ ದಿನ” ಮತ್ತು ಪ್ರಾಥಮಿಕ ವಿದ್ಯಾರ್ಥಿಗಳಿಗೆ ” ಹಿರಿಯ ನಾಗರಿಕ ಸೇವಾ ತರಬೇತಿ ಶಿಬಿರ” ನೆರವೇರಿತು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾರುಣ್ಯಾಶ್ರಮದ ಗೌರವಾಧ್ಯಕ್ಷರಾದ ಶರಣು.ಪಾ.ಹಿರೇಮಠ ಅಕ್ಷರ ಅನ್ನ ಅರಿವು ಈ ಮೂರನ್ನು ನಾಡಿಗೆ ದಯಪಾಲಿಸಿದ ತ್ರಿವಿಧ ದಾಸೋಹಿ ಮೂರ್ತಿಗಳು ನಾಲ್ಕು ವರ್ಷಗಳ ಹಿಂದೆ ನಮ್ಮನ್ನೆಲ್ಲ ಅಗಲಿದ್ದು ನಾಡು ಬಡವಾಯಿತು ಎಂದೆನಿಸಿತು.ಇಂತಹ ದಿನವನ್ನು ಕರ್ನಾಟಕ ಸರ್ಕಾರ “ದಾಸೋಹ ದಿನ”ಎಂದು ಘೋಷಣೆ ಮಾಡಿ ವಿಶೇಷ ಅರ್ಥ ಕಲ್ಪಿಸಿ ಕೊಟ್ಟಿತು. ಇಂತಹ ದಿನದಂದು ನಮ್ಮ ಕಾರುಣ್ಯ ಕುಟುಂಬದಲ್ಲಿ ನೊಂದು ಬೆಂದು ಸುಮಾರು ದಿನಗಳಿಂದ ಆಶ್ರಯ ಪಡೆದಿದ್ದ ತಾಯಿಗೆ ಮಗನಿಗೆ ಬುದ್ಧಿವಾದ ಹೇಳುವುದರ ಮೂಲಕ ಆ ತಾಯಿಯನ್ನು ಮನೆಗೆ ಸೇರಿಸಲಾಯಿತು ಮತ್ತು ವೀರಶ್ರೀ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಿರಿಯ ನಾಗರಿಕರ ಸೇವೆಯ ತಿಳುವಳಿಕೆಯ ಶಿಬಿರದ ಮೂಲಕ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಇಂತಹ ಆಶ್ರಮದ ಬಗ್ಗೆ ತಿಳುವಳಿಕೆ ಮೂಡಿಸಿದ್ದು ನಮ್ಮ ಕಾರುಣ್ಯ ಆಶ್ರಮದ ಘನತೆ ಗೌರವವನ್ನು ಹೆಚ್ಚಿಸಿದೆ. ಈ ಎಲ್ಲಾ ಆದರ್ಶಗಳನ್ನು ನಾಡಿನ ಜನರು ಮೈಗೂಡಿಸಿಕೊಂಡು ದಾಸೋಹ ದಿನವನ್ನು ದಾಸೋಹಕ್ಕಾಗಿ ಸೇವೆ ಮಾಡುವುದರ ಮೂಲಕ ಆಚರಿಸಿರಿ ಎಂದು ಮಾತನಾಡಿದರು. ನಂತರ ಮಾತನಾಡಿದ ಸೇವಾಸಿರಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ಪ್ರದೀಪ್ ಪೂಜಾರಿ ವಿಶೇಷ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿ ಸಮಾಜಕ್ಕೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಕೊಡುತ್ತಿರುವ ಯಾವುದಾದರೂ ಏಕೈಕ ಸಂಸ್ಥೆ ನಮ್ಮ ಸಿಂಧನೂರಿನ ನಮ್ಮ ಕಾರುಣ್ಯ ಆಶ್ರಮ ಇಲ್ಲಿರುವ ಎಲ್ಲಾ ಜೀವಿಗಳ ಅಂತರಾಳದ ಭಾವನೆಗಳನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು ಇವರೆಲ್ಲರಿಗೂ ನಮ್ಮ ಸಿಂಧನೂರಿನ ಪ್ರೀತಿಯನ್ನು ಧಾರೆಯೆರೆದು ಹಿಂದಿನ ಜೀವನದ ಘಟನೆಗಳನ್ನು ಮರೆಸಿ ಇವರಿಗೆ ಮಕ್ಕಳ ಮೊಮ್ಮಕ್ಕಳ ಪ್ರೀತಿಯನ್ನು ನಾವು ನೀವೆಲ್ಲರೂ ಕೂಡಿ ಒದಗಿಸಿ ಸರ್ಕಾರದ ಸವಲತ್ತುಗಳನ್ನು ಈ ಕುಟುಂಬಕ್ಕೆ ಒದಗಿಸುವಂತಹ ಪ್ರಯತ್ನ ಮಾಡಬೇಕು. ನಾನು ಹಾಗೂ ನನ್ನ ಸ್ನೇಹ ಬಳಗ ಯಾವತ್ತಿಗೂ ಕಾರುಣ್ಯ ಆಶ್ರಮದ ಜೊತೆಗಿರುತ್ತದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವೀರ ಶ್ರೀ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ಸಂಸ್ಥಾಪಕರಾದ ಗಂಗಮ್ಮ ತಾವರಗೇರಾ. ಶಿಕ್ಷಕರುಗಳಾದ ಯಶೋಧಾ ಒಳಬಳ್ಳಾರಿ,ಬಸವರಾಜ ಅಮರಸ್ವರಸಂಗಮ ಮಾಲೀಕರಾದ ಕರ್ನಾಟಕ ರಾಜ್ಯ ಯುವ ಪ್ರಶಸ್ತಿ ವಿಜೇತ ಬಸವರಾಜ ಗಸ್ತಿ. ಸಮಾಜ ಸೇವಕರಾದ ರಮೇಶ. ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಸುಜಾತ ಹಿರೇಮಠ.ಅಮರೇಶ ಅದ್ರಿ. ಮರಿಯಪ್ಪ ಬಸಮ್ಮ. ಗಂಗಪ್ಪ. ಶರಣಮ್ಮ.ಮಲ್ಲಮ್ಮ. ಹಾಗೂ ವೀರಶ್ರೀ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು
ವರದಿ:ವೆಂಕಟೇಶ.ಹೆಚ್.ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ