ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಹಾಗೂ ಪೌಷ್ಟಿಕ ಸಮಿತಿ ಮತ್ತು ಬಾಲವಿಕಾಸ ಸಮಿತಿಗಳ ಜಂಟಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಛತ್ರಪ್ಪ ಶಿಕ್ಷಕರು ಮಾತನಾಡಿ ಗರ್ಭಿಣಿ ಮಹಿಳೆಯರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ನೀಡಿ ಮಕ್ಕಳ ಬೆಳವಣಿಗೆಗೆ ಪ್ರೋತ್ಸಾಹಿಸಲಾಗುತ್ತಿದೆ. ಕಾಳುಗಳು,ಗೋಧಿ ಪದಾರ್ಥಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಇದರ ಜೊತೆಗೆ ನಾವುಗಳು ಹಸಿ ತರಕಾರಿ ಹಾಗೂ ಸೊಪ್ಪುಗಳನ್ನು, ಮೊಳಕೆ ಹೊಡೆದ ಕಾಳುಗಳನ್ನು ಹೆಚ್ಚು ಹೆಚ್ಚು ಸೇವನೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿಯರಾದ ಶಂಕ್ರಮ್ಮ,ರಂಜಾನಬೀ ಹಾಗೂ ಸ.ಹಿ.ಪ್ರಾ.ಶಾಲೆಯ ಶಿಕ್ಷಕರಾದ ದೊಡ್ಡಪ್ಪ ಸ.ಶಿ,ಛತ್ರಪ್ಪ ಸ.ಶಿ. ಕಲ್ಲನಗೌಡ ಸ.ಶಿ, ಆಶಾ ಕಾರ್ಯಕರ್ತೆಯರಾದ ದೇವಮ್ಮ,ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಬಸನಗೌಡ ಮೇಟಿ,ಶಿವರಾಜ ಹೂಗಾರ,ಪಂಪಾಪತಿ ಜೀನೂರು ಹಾಗೂ ಗರ್ಭಿಣಿ ಮಹಿಳೆಯರು ಉಪಸ್ಥಿತರಿದ್ದರು