ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ ಶ್ರೀರಮೇಶ ಜಾರಕಿಹೊಳಿ ಅಭಿಮಾನಿಗಳ ಗ್ರಾಮೀಣ ಕಾರ್ಯಕ್ರಮದಲ್ಲಿ ರಮೇಶ್ ಸಾಹುಕಾರರ ಘರ್ಜನೆ ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ಮಾತನಾಡುತ್ತಾ ಪಕ್ಕದ ಮೋದಗಾ ಗ್ರಾಮದಲ್ಲಿ ಕಾಂಗ್ರೆಸ್ನವರು ಗಿಫ್ಟ್ ಹಂಚುತ್ತಿದ್ದರು ಸಹ ಬಾರಿ ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ನೋಡಿ ಖುಷಿ ವ್ಯಕ್ತಪಡಿಸುತ್ತಾ ಅವರು ಮೂರುಸಾವಿರ ಗಿಫ್ಟ್ ಹಂಚಿದರೆ ನಾವು ಆರು ಸಾವಿರ ಗಿಫ್ಟ್ ನೀಡಿ ಈ ಬಾರಿ ಶತಾಗತಾಯ ಭಾಜಪ ಬಾವುಟ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸದ ನುಡಿಗಳನ್ನಾಡಿದರೂ ಜೊತೆಗೆ ಈ ಹಿಂದಿನ ಬಾರಿ ಚುನಾವಣೆಯಲ್ಲಿ ನನ್ನ ಕೊಡುಗೆ ಅಪಾರವಿತ್ತು ಆದರೆ ನನಗೆ
ತಿರುಗುಬಾಣವಾಯಿತು ಅದಕ್ಕಾಗಿ ಈ ಬಾರಿ ಚುನಾವಣೆಯಲ್ಲಿ ಯಾರೆ ಅಭ್ಯರ್ಥಿ ಆದರೂ ಇಂದಿನ ಈ ಸಮಾವೇಶ ನನ್ನೆಲ್ಲಾ ಅಭಿಮಾನಿಗಳ ಗ್ರಾಮೀಣ ಪ್ರದೇಶದ ಪ್ರದರ್ಶನ ಮಾತ್ರ ಮುಂಬರುವ ದಿನಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಾ ಎಲ್ಲಾ ಗ್ರಾಮಗಳಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ಅಧಿಕಾರಕ್ಕೆ ತರುವ ಪ್ರಯತ್ನ ನಮ್ಮೆಲ್ಲರದಾಗಲೆಂದರು ಹೀಗಾಗಿ ಮತದಾರನ ಓಲೈಕೆಯ ಕೈ ಕಮಲದ ಪೈಪೋಟಿಯಲ್ಲಿ ಮತದಾರ ಗಿಫ್ಟ್ ಏನು ಕೊಡುತ್ತಾರೋ ಎಂಬ ಖುಷಿಯಲ್ಲಿ ಮತದಾರ ಯಾವ ಕಡೆಗೆ ಮತ ಚಲಾಯಿಸುತ್ತಾನೋ ಎಂಬುವುದೆ ಸಮೀಕ್ಷೆಗಾರರಿಗೆ ಕಠಿಣದ ಕೊಡುಗೆಯಾಗಿದೆ ಯಾರೆ ಗೆದ್ದರೂ ಸೋತರು ಮತದಾರ ಮಾತ್ರ ಖುಷಿ ಎಂಬ ಚರ್ಚೆ ಕ್ಷೇತ್ರದಲ್ಲಿ ಜನಜನಿತವಾಗಿದೆ.
ವರದಿ:ದಿನೇಶಕುಮಾರ ಅಜಮೇರಾ