ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಖಾನಾಪುರದಲ್ಲಿ ಚತುಷ್ಕೋನ ಸ್ಪರ್ಧೆಯಲ್ಲಿ ಹಲಗೇಕರ ಹವಾ ಜೋರು

ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ಶ್ರೀಮತಿ ಅಂಜಲಿ ನಿಂಬಾಳ್ಕರ್ ಶಾಸಕಿಯ ಅಭಿವೃದ್ಧಿ ಪರ ಯೋಜನೆಗಳ ಮಧ್ಯೆಯೂ ಈ ಚುನಾವಣೆ ಸುಲಭವಾಗಿ ಗೆಲುವು ನಿಶ್ಚಿತ ಎಂದು ಹೇಳಲಾಗದು ಕಾರಣ ಯಾವಾಗಲೂ ಚತುಷ್ಕೋನ ಸ್ಪರ್ಧೆಯು ಒಂದು ಕಡೆಯಾದರೆ ಮತ್ತೊಂದು ಭಾಷಾಭಿಮಾನ ಜನರ ಭಾವನೆಗಳನ್ನು ಕದಲಿಸುವ ಸಂಪ್ರದಾಯ ‌ಈ ಕ್ಷೇತ್ರದಲ್ಲಿ ಸಹಜ ಮತ್ತು ಸಾಮಾನ್ಯ ಜನಾಭಿಪ್ರಾಯ ಶ್ರೀವಿಠ್ಠಲ ಸೋಮಣ್ಣಾ ಹಲಗೇಕರ ಕಡೆಗೆ ಹೆಚ್ಚು ಒಲವು ತೋರುತ್ತಿದ್ದು ಒಂದು ಅಂದಾಜಿನ ಪ್ರಕಾರ 55 ಗ್ರಾಮ ಪಂಚಾಯಿತಿಗಳು ಅವರು ಜೊತೆಗಿವೆ ಎಂಬ ಗುಮಾನಿ ಇದ್ದು ಎಷ್ಟರಮಟ್ಟಿಗೆ ಶಾಸಕಿ ನಿಂಬಾಳ್ಕರ್ ಅವರನ್ನು ಅಲ್ಲಗಳೆದು ಬೆಂಬಲ ವ್ಯಕ್ತವಾಗಿದೆ ಎಂಬುವುದು ಯಕ್ಷ ಪ್ರಶ್ನೆ ಕಾರಣ ಹಲಗೇಕರ ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲುಂಡು ಮತ್ತೆ ತಮ್ಮ ಸಾಮಾಜಿಕ,ಶೈಕ್ಷಣಿಕ,
ಆರ್ಥಿಕ,ರಾಜಕೀಯ ಚಟುವಟಿಕೆಗಳಿಗೆ ಚೇತನ ಒದಗಿಸುತ್ತಾ ನಿರಂತರ ಜನರ ಸಂಪರ್ಕದಲ್ಲಿ ಇದ್ದಾರೆ ಇನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಇತ್ತಿಚೆಗೆ ಭಾಜಪ ಸೇರಿಕೊಂಡಿರುವ ಶ್ರೀಅರವಿಂದ ಚಂದ್ರಶೇಖರ ಪಾಟೀಲ ಟಿಕೆಟ್ ಆಕಾಂಕ್ಷಿಯಾಗಿದ್ದು ಭಾರತೀಯ ಜನತಾ ಪಕ್ಷ ಯಾರಿಗೆ ಮಣೆ ಹಾಕುತ್ತದೆಯೋ ಎಂಬುವುದು ಕ್ಷೇತ್ರದಲ್ಲಿನ ಗೊಂದಲ ಇನ್ನೂ ಜಾತ್ಯತೀತ ಜನತಾದಳದ ಶ್ರೀನಾಸಿರ‌ ಬಾಗವಾನ ಸಹ ಸ್ಪರ್ಧೆಗೆ ಇಳಿಯುವ ಸಾಧ್ಯತೆಯಿರುವುದರಿಂದ ಕ್ಷೇತ್ರದಲ್ಲಿ ಭಾಜಪ,ಕಾಂಗ್ರೆಸ್,
ಜೆಡಿಎಸ್,ಎಮ್.ಇ.ಎಸ್,ಚತುಷ್ಕೋನ ಸ್ಪರ್ಧೆಯಲ್ಲಿ ಹಲಗೇಕರ ಹವಾ ಕೆಲವು ಹಳ್ಳಿಗಳಲ್ಲಿ ಜನಾಭಿಪ್ರಾಯ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಹಾಲಿ ಶಾಸಕಿ ಶ್ರೀಮತಿ ಅಂಜಲಿ ನಿಂಬಾಳ್ಕರ್ ಅವರಿಗೆ ಗೆಲುವು ಸುಲಭವಾಗಿಲ್ಲ ಎಂಬುದು ಸದ್ಯದ ಲೆಕ್ಕಾಚಾರ ಒಟ್ಟಾರೆಯಾಗಿ ತ್ರಿಕೋನ ಸ್ಪರ್ಧೆಯಂತೂ ಖಚಿತವಾಗಿದೆ ಯಾರಿಗೂ ಗೆಲುವು ಕ್ಷೇತ್ರದಲ್ಲಿ ಕಷ್ಟಸಾಧ್ಯ ಎಂಬಂತಾಗಿದೆ ಮೇಲ್ನೋಟಕ್ಕೆ ಕೆಲವು ಹಾಲಿ ಶಾಸಕಿಯ ಪರವಾಗಿದ್ದರು ಸಹ ಬಹಳಷ್ಟು ಅಭಿಮಾನ ಶ್ರೀವಿಠ್ಠಲ ಸೋಮಣ್ಣಾ ಹಲಗೇಕರ ಪರವಾಗಿಯೂ ಅಲೆ ಕೇಳಿಬರುತ್ತಿದೆ ಜನರ ತೀರ್ಪು ಏನೇ ಆದರೂ ಬೆಳಗಾವಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪೈಕಿ ಖಾನಾಪುರ ಕ್ಷೇತ್ರ ಚತುಷ್ಕೋನ ಆಗಿರುವುದು ವಿಶೇಷತೆಯಾಗಿದೆ.
ವರದಿ-ದಿನೇಶಕುಮಾರ ಅಜಮೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ