ರಾಯಚೂರ:ಜ22.ಸಿಂಧನೂರು ತಾಲೂಕಿನ ಬೆಳಗುರ್ಕಿ ಗ್ರಾಮದಲ್ಲಿ ಇಂದು ವಾಲ್ಮೀಕಿ ಯುವಕ ಸಂಘ ಉದ್ಘಾಟನೆಯ ಮಾಡಲಾಯಿತು.ಈ ಸಂಘದಲ್ಲಿ ಗ್ರಾಮ ಘಟಕ ಅಧ್ಯಕ್ಷರನ್ನಾಗಿ ಬಸವರಾಜ ನಾಯಕ, ಗೌರವಾಧ್ಯಕ್ಷರಾಗಿ ಜಿ.ಹನುಮಂತಪ್ಪ ನಾಯಕ,ಉಪಾಧ್ಯಕ್ಷರಾಗಿ ಗಂಗಣ್ಣ ನಾಯಕ, ಕಾರ್ಯದರ್ಶಿಯಾಗಿ ರವಿನಾಯಕ, ಸಹಕಾರದರ್ಶಿಯಾಗಿ ಆದಪ್ಪ ನಾಯಕ ಮತ್ತು ಖಜಾಂಚಿಯಾಗಿ ಕೃಷ್ಣ ನಾಯಕ ಇವರನ್ನು ನೇಮಕ ಮಾಡಲಾಗಿದೆ ಹಾಗೂ ಸಂಘದ ವತಿಯಿಂದ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡರಿಗೆ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಅಭಿಷೇಕ್ ನಾಡಗೌಡ ಅವರು ಯಾವುದೇ ಸಂಘವು ಒಂದು ನಿರ್ದಿಷ್ಟ ಗುರಿ ಹೊಂದಿರಬೇಕು ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆದು ಗ್ರಾಮವನ್ನು ಅಭಿವೃದ್ಧಿ ಪಡಿಸಬೇಕು ಮತ್ತು ಯುವಕರು ಶಿಕ್ಷಣದ ಆಸಕ್ತಿ ಕಳೆದುಕೊಳ್ಳಬಾರದು ಗ್ರಾಮದಲ್ಲಿ ಗ್ರಂಥಾಲಯವನ್ನು ತೆರೆದು ದಿನಪತ್ರಿಕೆಗಳು ಓದುವುದು ಮತ್ತು ಕ್ರೀಡಾಕೂಟಗಳನ್ನು ಏರ್ಪಡಿಸುವುದು ಸಾಧನೆ ಮಾಡಿದಂತಹ ಗ್ರಾಮ ಪ್ರತಿಭೆಗಳಿಗೆ ಸನ್ಮಾನ ಮಾಡುವುದು ಹೀಗೆ ಅನೇಕ ಕಾರ್ಯಕ್ರಮಗಳನ್ನು ಈ ಸಂಘಗಳು ನಡೆಸಿಕೊಂಡು ಹೋಗಬೇಕೆಂದು ಹೇಳಿದರು ಮತ್ತು ಶಿವನಗೌಡ ಗೊರೆಬಾಳ ಮಾಜಿ ಝೆಡ್ ಪಿ,ತಾಲೂಕಿನ ಅಧ್ಯಕ್ಷರು ವೆಂಕೋಬ ನಾಯಕ,ಹನುಮಂತಪ್ಪ ಪುಲ್ಲದಿನ್ನಿ, ಓಬಳೇಶ ನಾಯಕ ಗೊರೆಬಾಳ,ವೆಂಕಟೇಶ್ ನಾಯಕ ಪತ್ರಕರ್ತರು, ಡಿಜೆ ನಾಯಕ ಗೋನವಾರ ಗ್ರಾಮದ ಹಿರಿಯ ಮುಖಂಡರು ಮತ್ತು ಸಂಘದ ಯುವಕರು ಉಪಸ್ಥಿತಿಯಲ್ಲಿದ್ದರು.
ವರದಿ:ವೆಂಕಟೇಶ ನಾಯಕ ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.