ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪಾವಂಜೆಯಲ್ಲಿ ಪಂಚ ತತ್ವಗಳಲ್ಲಿ ಶಿವ ಚಿಂತನೆ

ಪಾವಂಜೆ, ಹಳೆಯಂಗಡಿ, ಮಂಗಳೂರು, ಜನವರಿ ೨೨: ನಿನ್ನೆ ಬ್ರಹ್ಮಕಲಶದ ಪೂರ್ವ ನಿಗಧಿತ ಕಾರ್ಯಕ್ರಮಗಳ ನಾಲ್ಕನೇ ದಿನ.ಪ್ರಾತಃ ಕಾಲ ನಾಲ್ಕು ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅಪರಾಹ್ನ ಮೂರು ಗಂಟೆಗೆ ಧಾರ್ಮಿಕ ಸಭೆಯು ಆರಂಭಗೊಂಡಿತು. ಸಭೆಯ ಅಧ್ಯಕ್ಷತೆಯನ್ನು ಕ್ರೇತ್ರದ ಶಾಸಕ ಶ್ರೀ ಉಮಾನಾಥ ಎ ಕೋಟ್ಯಾನ್ ವಹಿಸಿದ್ದರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜಗತ್ತಿನ ದೇವರ ಕೊಠಡಿ ಭಾರತ ಹಾಗೂ ಭಾರತದ ದೇವರ ಕೊಠಡಿ ಪರಶುರಾಮ ಸೃಷ್ಟಿಯ ಈ ನಮ್ಮ ದಕ್ಷಿಣ ಕನ್ನಡ ಎಂದು ಉಲ್ಲೇಖಿಸಿದರು.ಶ್ರೀ ಶ್ರೀ ಶ್ರೀ ರಘು ಭೂಷಣ ತೀರ್ಥ ಸ್ವಾಮೀಜಿ, ಬಳೆಗಾರು ಮಠ, ತೀರ್ಥಹಳ್ಳಿ ತಮ್ಮ ಆಶೀರ್ವಚನ ಭಾಷಣದಲ್ಲಿ ಲೋಕದಲ್ಲಿ ಮೂರು ವಿಧದ ಜನರಿರುವರೆಂದು ಹೇಳುತ್ತಾ ಉತ್ತಮರು ಸಮಾಜ ಸೇವೆ ಮಾಡುವವರಾಗಿದ್ದು ಸೀಮಿತ ಅವಧಿಯೊರೆಗೆ ಜೀವಿತವಾಗಿದ್ದು ಎಲ್ಲರಿಗೂ ಬೇಕಾದವರಾಗಿದ್ದು ಅಸ್ತಂಗತರಾಗುವರು,ಅಲ್ಪರು ದೀರ್ಘಕಾಲ ಬದುಕುವರು ಮತ್ತು ಕಟುಕರು ಇತ್ತ ಬದುಕಲೂ ಅಯೋಗ್ಯ ಅತ್ತ ಸಾವೂ ಬರದೇ ಕೊರಗುತ್ತ ಬಹುಕಾಲ ಬದುಕುವರು ಇದು ಈ ಕಾಲಘಟ್ಟ ಎಂದು ನೆರೆದ ಭಕ್ತ ಸಮೂದಾಯಕ್ಕೆ ನೆನೆಪಿಸಿ ಆಶೀರ್ವಚನಗೈದರು ವೇದಮೂರ್ತಿ ಶ್ರೀ ಕೊಡಿಮಜಲು ಅನಂತಪದ್ಮನಾಭ ಉಪಾಧ್ಯಾಯರು ಪಂಚ ತತ್ವಗಳಲ್ಲಿ ಶಿವ ಚಿಂತನೆ ಬಗ್ಗೆ ದೀರ್ಘವಾದ ಪ್ರವಚನ ಮಾಡುತ್ತ ಎಲ್ಲವೂ ಶಿವಮಯ, ಪಂಚ ತತ್ವಗಳಲ್ಲಿ ಶಿವ ತತ್ವ ಅಡಗಿದೆ, ಹಲವು ಕಾಲುವೆ ಸೇರಿ ನದಿಯಾಗಿ, ಎಲ್ಲ ನದಿಗಳು ಸಾಗರ ಸೇರಿದಮೇಲೆ ಕಾಲುವೆ ಮತ್ತು ನದಿ ನೀರನ್ನು ಹೇಗೆ ಬೇರ್ಪಡಿಸಲು ಅಸಾಧ್ಯವೋ ಹಾಗೆ ಪಂಚ ಭೂತಗಳಲ್ಲಿ ಅಡಗಿದ ಶಿವನನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಶೈವರಿಗೆ ಕೈಲಾಸ, ವೈಷ್ಣವರಿಗೆ ವೈಕುಂಠ ಎಂಬ ಕಲ್ಪನೆ ಬರಿ ಇಹಲೋಕಕ್ಕೆ ಸೀಮಿತ, ಪರಮಾರ್ಥಿಕವಾಗಿ ಎಲ್ಲವೂ ಪಂಚ ಭೂತಗಳಲ್ಲಿ ಅಡಗಿದೆ ಎಂದು ನಾಲ್ಕು ವೇದಗಳ ಶ್ಲೋಕಗಳನ್ನು ಉಲ್ಲೇಖಿಸುತ್ತಾ ವಿಸ್ತಾರವಾದ ಉಪನ್ಯಾಸ ಭಾಷಣ ಮಾಡಿದರು.
ಕ್ಷೇತ್ರದ ತಂತ್ರಿ ಕಂಬ್ಳಕಟ್ಟಿ ವೇದಮೂರ್ತಿ ಶ್ರೀ. ರಾಧಾಕೃಷ್ಣ ವುಪಾಧ್ಯಾಯರು ಬ್ರಹ್ಮಕಲಷದ ಮಹತ್ವದಬಗ್ಗೆ ವಿವರುಸುತ್ತಾ ಪ್ರತಿ 12 ವರ್ಷಕ್ಕೊಮ್ಮೆ ಮಾಡಬೇಕು, ಆ ಬಗ್ಗೆ ಶಾಸ್ತ್ರಾಧಾರಳಿವೆಂದರು.
ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ. ಮಹಾಬಲೇಶ್ವರ ಎಂ.ಯಸ್ ತಮ್ಮ ಭಾಷಣದಲ್ಲಿ ಆಂತರ್ಯ ಮತ್ತು ಬಾಹ್ಯ ಸ್ವಚ್ಛತೆ ಬಗ್ಗೆ ಮಾತನಾಡುತ್ತ ದೇವಸ್ಥಾನದ ಪರಿಸರವನ್ನು ಭಕ್ತರು ಸದಾ ಸ್ವಚ್ಛ ಇಡಬೇಕು, ದೇವಸ್ಥಾನಕ್ಕೆ ಬರುವಾಗ ಮನಸ್ಸು ದೇಹ ಶುದ್ಧವಾಗಿರಬೇಕು ಹಾಗೂ ತಮ್ಮ ಮಕ್ಕಳನ್ನು ಇಂಥ ಕಾರ್ಯಕ್ರಮಗಳಿಗೆ ಕರೆತಂದು ಅವರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಬೇಕು ಎಂದು ನೆರೆದ ಗಣ್ಯರಿಗೆ ಕರೆನೀಡಿದರು. ಶ್ರೀ ದುಗ್ಗಣ್ಣ ಸಾವಂತರು, ಅರಸರು ಮುಲ್ಕಿ ಸೀಮೆ ತಮ್ಮ ಭಾಷಣದಲ್ಲಿ ಮುಲ್ಕಿ ಅರಸು ಮನೆತನದಲ್ಲಿ ಪಾವಂಜೆಗಿರುವ ಮಹತ್ವವನ್ನು ವಿವರಿಸಿದರು. ಶ್ರೀ ಭುವನಭೀರ ಉಡುಪ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ತಮ್ಮ ಭಾಷಣದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ. ಬಿ. ಸೂರ್ಯಕುಮಾರ್ ಮತ್ತು ಅವರ ಸಂಪೂರ್ಣ ಸಮಿತಿಯ ಸದಸ್ಯರನ್ನು ಈ ನಾಲ್ಕು ತಿಂಗಳ ಅವಧಿಯಲ್ಲಿ ದೇವಸ್ಥಾಕ್ಕೆ ಪೂರ್ಣ ಹೊಸರೂಪ ಕೊಟ್ಟು ಜೀರ್ಣೋದ್ಧಾರ ಗೊಳಿಸಿದ್ದಕ್ಕೆ ಅಭಿನಂದಿಸಿದರು. ಧರ್ಮದರ್ಶಿ ಡಾ. ಶ್ರೀ ಹರಿಕೃಷ್ಣ ಪುನರೂರ್ ಸಾಂಧರ್ಭಿಕವಾಗಿ ಮಾತನಾಡುತ್ತ ಮುಂದಿನ ಜನಾಂಗ ನಮ್ಮ ಸಂಕೃತಿಯನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು. ಕೆಮ್ರಾಲ್ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ. ಲೀಲಾ ಕೃಷ್ಣಪ್ಪ ಸಾಂಧರ್ಭಿಕ ವಾಗಿ ಮಾತನಾಡುತ್ತ ಹಿಂದೆ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾಗ ತುಂಬಾ ಕ್ಷೀಣವಾಗಿತ್ತು, ಆಗ ಈ ದೇವಸ್ಥಾನ ದುರಸ್ತಿ ಆಗಬೇಕೆಂದು ಸಂಬಂಧ ಪಟ್ಟವರಲ್ಲಿ ತನ್ನ ಅಳಲನ್ನು ವ್ಯಕ್ತಪಡಿಸಿದ್ದು ಈಗಿನ ಈ ಜೀರ್ಣೋದ್ದಾರವನ್ನು ನೋಡಿ ಸಂತೋಷ ವಾಯಿತೆಂದು ತಿಳಿಸಿದರು. ವೇದಿಕೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಮೂಲ್ಯ ಕೊಡುಗೆ ನೀಡಿದ ಭಕ್ತರನ್ನು ಶಾಲುಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಧನ್ಯವಾದ ಸಮರ್ಪಣೆಯೊಂದಿಗೆ ಸಭಾಕಾರ್ಯಕ್ರಮ ಮುಕ್ತಾಯಗೊಂಡಿತು. ನಿತ್ಯದ ಭಜನಾ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಹೋಮ ಹವನಗಳು ನಿಗದಿತ ಅವಧಿಗಳಲ್ಲಿ ಜರುಗಿದವು. ನೂತನ ಪುಷ್ಪರಥ ವು ಆಕರ್ಷಕವಾಗಿದ್ದು ಚೇಳಾೖರು ಶ್ರೀ. ಕೃಷ್ಣಯ್ಯ ಆಚಾರ್ಯ ಮತ್ತು ಗುಂಪಿನ ಪರಿಶ್ರಮದ ಫಲ ಇದಾಗಿತ್ತು.

ವರದಿ : ಚಂದ್ರಶೇಖರ ಹೆಬ್ಬಾರ್ ಕೊಲ್ಯ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ