ಪಾವಂಜೆ,ಹಳೆಯಂಗಡಿ,ಮಂಗಳೂರು, ಜನವರಿ 24 : ಇಂದು ಬ್ರಹ್ಮಕಲಶದ ಪೂರ್ವ ನಿಗದಿತ ಕಾರ್ಯಕ್ರಮಗಳ ಆರನೆಯ ದಿನ ಪ್ರಾತಃ ಕಾಲ 7:30 ಗಂಟೆಯಿಂದ ಆದ್ಯ ಗಣಪತಿಯಾಗ,ಶಾಂತಿಯಾಗ, ಪ್ರಾಯಶ್ಚಿತ್ತ ಯಾಗ,ಪಂಚ ಬ್ರಹ್ಮ ಯಾಗ, ಮೂರ್ತಿಯಾಗ,ನವಕಪ್ರಧಾನ ಯಾಗ, ಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಪೂಜೆ, ಧ್ವಜಪೂಜೆ, ಮಧ್ಯಾಹ್ನ ಬಲಿ,ಗೋ ಪೂಜೆ, ಸುವಾಸಿನಿ ಆರಾಧನೆ ಜರುಗಿತು ಮಧ್ಯಾಹ್ನ ಎರಡುವರೆಗಂಟೆಯಿಂದ ನಾಲ್ಕುವರೆ ಗಂಟೆವರೆಗೆ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದ ರಿಧಂ ಸುರತ್ಕಲ್ ಬಳಗದವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರುಗಿತು.ಶ್ರೀಮತಿ ಹೇಮಾ ರಂಗನಾಥನ್ ಮತ್ತು ಮಕ್ಕಳು ಮೈಸೂರು ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.4:3೦ ರ ನಂತರ ಸಹಸ್ರ ಸಂಖ್ಯೆ ಯಲ್ಲಿ ಸದ್ಯೋಜಾತಾದಿ ಪಂಚಬ್ರಹ್ಮ ಯಾಗ,ರಕ್ತೇಶ್ವರಿ ಸಾನಿಧ್ಯದಲ್ಲಿ ವಾಸ್ತುಪೂಜೆ ಪ್ರತಿಷ್ಠಾದಿ ಪ್ರಕ್ರಿಯೆಗಳು, ಬಯಗಿನ ಬಲಿ, ರಾತ್ರಿ ಪೂಜೆ, ಜರುಗಿತು. ಸಂಜೆ 6:೦೦ ರಿಂದ ಶ್ರೀ ರಾಮ ಭಜನಾ ಮಂಡಳಿ, ಮಿತ್ರಪಟ್ನ, ಮುಕ್ಕ ಬಳಗದವರಿಂದ ಭಜನಾ ಸಂಕೀರ್ತನೆ ಜರುಗಿತು. ರಾತ್ರಿ 9:೦೦ ಗಂಟೆಯಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಿತು, ಈ ಯಕ್ಷಗಾನ ಬಯಲಾಟವನ್ನು ದಿ.ಸುಂದರ ಭಟ್,ಪಾವಂಜೆ ಇವರ ಸ್ಮರಣಾರ್ಥ ಸರಸ್ವತಿ ಅಮ್ಮ ಮತ್ತು ಮಕ್ಕಳು ಪ್ರಾಯೋಜಿಸಿದ್ದರು.
ವರದಿ:ಚಂದ್ರಶೇಖರ ಹೆಬ್ಬಾರ್ ಕೊಲ್ಯ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.