ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಕ್ಕಳ ಕ್ರಿಯಾಶೀಲತೆಗೆ ಕಲಿಕಾ ಹಬ್ಬ ಒಂದು ವೇದಿಕೆ : ಮಲ್ಲಪ್ಪ ಬಾದರ್ಲಿ


ಸಿಂಧನೂರು.ಜ-24
ಶಾಲಾ ವಿದ್ಯಾರ್ಥಿಗಳು ತರಗತಿಗಳಲ್ಲಿ ಕಲಿತಿರುವುದನ್ನು ಬಲವರ್ಧನೆಗೊಳಿಸಲು ಮತ್ತು ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಉಂಟು ಮಾಡಲು ಕಲಿಕಾ ಹಬ್ಬ ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದು ಕಲಮಂಗಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಪ್ಪ ಬಾದರ್ಲಿ ಹೇಳಿದರು.
ಅವರು ತಾಲೂಕಿನ ಕಲಮಂಗಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಕಲಮಂಗಿ, ಸರ್ಕಾರಿ ಪ್ರೌಢಶಾಲೆ ಕಲಮಂಗಿ ಮತ್ತು ಮತ್ತು ಸಿ.ಆರ್.ಸಿ ಕಲಮಂಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಲಮಂಗಿ ‘ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ, ಕಳೆದ ಎರಡು ವರ್ಷಗಳ ಕೋವಿಡ್-19 ಕಲಿಕಾ ಕೊರತೆಯನ್ನು ನೀಗಿಸಲು ಇಲಾಖೆಯು ಕಲಿಕಾ ಚೇತರಿಕೆ ಎನ್ನುವ ಉಪಕ್ರಮವನ್ನು ಜಾರಿಗೊಳಿಸಿದೆ. ಈ ಕಲಿಕೆಯನ್ನು ದೃಢೀಕರಿಸಲು ಮತ್ತು ಮಕ್ಕಳು ತಾವುಗಳು ತರಗತಿಯಲ್ಲಿ ಕಲಿತಿರುವುದನ್ನು ಸಮುದಾಯದ ಮುಂದೆ ಪ್ರದರ್ಶಿಸಿಸಲು ಕಲಿಕಾ ಹಬ್ಬ ತುಂಬಾ ಸಹಕಾರಿಯಾಗುತ್ತದೆ ಎಂದರು.
ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ವಿಶ್ವನಾಥರೆಡ್ಡಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ ಅದನ್ನು ಕಲಿಕಾ ಹಬ್ಬದಂತಹ ಕಾರ್ಯಕ್ರಮದ ಮೂಲಕ ಹೊರಗೆ ತರಲು ಸಾಧ್ಯವಾಗುತ್ತದೆ ಎಂದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ನಾಲ್ಕು ಕಾರ್ನರ್‌ಗಳಾದ ಹಾಡು-ಆಡು, ಮಾಡು-ಆಡು, ಕಾಗದ-ಕತ್ತರಿ ಮತ್ತು ಊರು ಸುತ್ತೋಣ ಎನ್ನುವ ನಾಲ್ಕು ಕೋಣೆಗಳಲ್ಲಿ ಚಟುವಟಿಕೆಗಳನ್ನು ಮಾಡಿ ಕಲಿತು ಪ್ರದರ್ಶಿಸುತ್ತಾರೆ. ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಗ್ರಾಮದ ಮುಖಂಡರಾದ ಶರಣು ಗಾಜಿ, ಶಾಮಣ್ಣ, ಅಂಬೇಡ್ಕರ ಸೇನೆಯ ಗಂಗಾಧರ, ಸಮಾಜ ಸೇವಕ ರವಿಗೌಡ, ಕಾರ್ಯಕ್ರಮದ ನೋಡಲ್ ಶಿಕ್ಷಕರಾದ ವೀರೇಶ ಗೋನವಾರ, ಮುಖ್ಯಗುರುಗಳಾದ ಬಾಲಕೃಷ್ಣ, ಶರಣಪ್ಪ, ಭುಜಂಗರಾಜ ವಿನಾಯಕ ಮುರನಾಳ, ಹನುಮನಗೌಡ, ಸಂಪನ್ಮೂಲ ಶಿಕ್ಷಕರಾದ ಮಾದನೂರು ಮಾರುತಿ, ಪ್ರಶಾಂತ ಗೋನ್ಸಾಲ್ವಿನ, ಸರಸ್ವತಿ, ರಾಮಪ್ಪ, ಶಿಕ್ಷಕರಾದ ಶರಣಪ್ಪ ಮುಳ್ಳೂರು, ಸುಭಾಷಚಂದ್ರ, ರಾಜಪ್ಪ, ಬಸವರಾಜ, ರಾಜೇಸಾಬ, ಗಂಗಮ್ಮ, ಸರೋಜಾ ನಾಯ್ಕ, ರೇಷ್ಮಾ ಸೇರಿದಂತೆ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಮುಖ್ಯಗುರುಗಳು, ಶಿಕ್ಷಕರು, 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲಿಕಾ ಹಬ್ಬದ ಕುರಿತಾದ ಹಾಡನ್ನು ಶಾಲೆಯ ಭಾಗ್ಯಶ್ರೀ ಮತ್ತು ಸಂಗಡಿಗರು ಹಾಡಿದರು. ಕೊನೆಯಲ್ಲಿ ಅರುಣ್ ಹೆಚ್ ಅವರು ವಂದಿಸಿದರು.
ಸಂಬ್ರಮಿಸಿದ ಚಿಣ್ಣರು : ಮೊದಲನೇ ದಿನ ನಡೆದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ಶಿಕ್ಷಕರು ಹೇಳಿಕೊಟ್ಟ ವಿವಿಧ ಹಾಡು, ಚಟುವಟಿಕೆ, ಆಟ, ಕಾಗದದಲ್ಲಿ ಕಲೆಗಳ ಮೂಲಕ ಕಲಿತು ಪ್ರದರ್ಶಿಸಿ, ಸಂಭ್ರಮಿಸಿ ಖುಷಿಪಟ್ಟರು.
3ಡಿ ಕನ್ನಡಕ : ಶಾಲಾ ವಿದ್ಯಾರ್ಥಿಗಳು ಮತ್ತು ಸಂಪನ್ಮೂಲ ಶಿಕ್ಷಕರು ಸ್ವತಃ ತಯಾರಿಸಿದ 3ಡಿ ಕನ್ನಡಕದ ಮೂಲಕ ವಿಡಿಯೋ ತುಣಕನ್ನು ವೀಕ್ಷಿಸಿಸುವ ಮೂಲಕ ಗಣ್ಯ-ಮಾನ್ಯರು ಸಂತಸ ವ್ಯಕ್ತಪಡಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ